ಡಾರ್ಕ್ ಬಣ್ಣದ ಬಟ್ಟೆಗಳ ಮೇಲೆ ಅರಳಿದ ಆಕರ್ಷಕ ಆಫ್ರಿಕನ್ ಪೇಂಟಿಂಗ್

ಕಲೆಗೆ ಮನಸೋಲದವರಿಲ್ಲ ಕಲೆಯ ಮಹತ್ವ ಅರಿತವರಿಗೆ ತಿಳಿದಿರುತ್ತದೆ ಅದರ ಮೌಲ್ಯ. ಇಂತಹ ಒಂದು ಅದ್ಭುತ ಕಲೆಯೊಂದನ್ನು ಮೈಸೂರಿನ ಕಲಾಮಂದಿರದ ಆವರಣದಲ್ಲಿ ರಂಗಾಯಣ ವತಿಯಿಂದ ಆಯೋಜಿಸಿದ ಪುಸ್ತಕ ಮತ್ತು ಕರಕುಶಲ ಮೇಳದಲ್ಲಿ ಕಾಣಬಹುದಾಗಿದೆ.

ಹೌದು. ಈ ಮೇಳದಲ್ಲಿ ಆಫ್ರಿಕನ್ ಪೇಂಟಿಂಗ್‍ನ ಮಳಿಗೆಯೊಂದಿದೆ. ಈ ಆಫ್ರಿಕನ್ ಪೇಂಟಿಂಗ್’ಗಳಲ್ಲಿ ಜುಲೋ, ಕ್ಯಾಲಿಗ್ರಫಿ, ಸಿರಾಮಿಕ್ಸ ಹೀಗೆ ಅನೇಕ ವಿಧದ ಚಿತ್ರ ಶೈಲಿಗಳು ಸಾರ್ವಜನಿಕರನ್ನು ಆಕರ್ಷಿಸಿ ತನ್ನತ್ತ ಸೆಳೆದು ಬಹುರೂಪಿಯ ವಸ್ತು ವಿಷಯವನ್ನು ಕಣ್ಮುಂದೆ ತಂದಿದೆ. ಅಲ್ಲದೆ ಆಫ್ರಿಕನ್ ಬುಡಕಟ್ಟು ಜನರ ಕಲೆ, ಆಚಾರ-ವಿಚಾರ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಕಲ್ಪನೆಯನ್ನು ಮನದಲ್ಲಿ ಮೂಡಿಸಿ ಅಲ್ಲಿನ ಬುಡಕಟ್ಟು ಜನಾಂಗದ ಬಗ್ಗೆ ವಿವರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಬಟ್ಟೆಗಳಲ್ಲಿ ಈ ಕಲಾಕೃತಿ ಇರುವುದು ಟ್ರೆಂಡ್ ಆಗಿ ಹೋಗಿದೆ. ಪ್ರಶಾಂತ್ ಎಂಬ ಕಲಾವಿದರು ಈ ಕಲೆಯ ಮೇಲಿನ ಒಲವಿನಿಂದ ಎಡ್ವರ್ಡೋ ಹ್ಯಾಂಡೋ ಎಂಬ ಹೆಸರಾಂತ ಆಫ್ರಿಕನ್ ಶಿಲ್ಪಿಯಿಂದ ಆಫ್ರಿಕನ್ ಪೇಂಟಿಂಗ್ ಕಲೆಯನ್ನು ಕಲಿತಿದ್ದಾರೆ. ಅವರು ತಮ್ಮ ಮನಸ್ಸು ಶಾಂತವಾಗಿದ್ದಾಗ, ಪ್ರಶಾಂತ ಘಳಿಗೆಯಲ್ಲಿ ಈ ರೀತಿಯ ಅದ್ಬುತ ಕಲಾಕೃತಿಗಳನ್ನು ಬಿಡಿಸುತ್ತಾರಂತೆ. ಈ ವೃತ್ತಿ ಬಾಲ್ಯದ ಆಸಕ್ತಿಯಾಗಿದ್ದು ಇದರಿಂದ ಸಿಗುವ ನೆಮ್ಮದಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ಸು. ಎಂಟು ವರ್ಷಗಳಿಂದ ಈ ವೃತ್ತಿಯನ್ನು ತೃಪ್ತಿಯಿಂದ ನಿರ್ವಹಿಸುತ್ತಿರುವ ಪ್ರಮುಖ ಉದ್ದೇಶ ಹಣ ಸಂಪಾದನೆ ಅಲ್ಲ ಈ ಕಲೆಯನ್ನು ಜನರಿಗೆ ತಿಳಿಸುವುದಾಗಿದೆ ಎಂದರು.

ಸಾಮಾನ್ಯವಾಗಿ ಆಫ್ರಿಕನ್ ವರ್ಣಚಿತ್ರಗಳು ಬುಡಕಟ್ಟು ಜನಾಂಗ ಕುರಿತು ಇರುವುದರಿಂದ, ಕಾಡಿನಲ್ಲಿ ವಾಸಿಸುವ ಅವರು ತಮ್ಮ ಪ್ರಾಣವನ್ನು ಕಾಡಿನ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಡಾರ್ಕ್ ಬಣ್ಣದ ಬಟ್ಟೆಗಳನ್ನು ಹೆಚ್ಚು ಬಳಸುತ್ತಾರೆ. ಏಕೆಂದರೆ ಪ್ರಾಣಿಗಳಿಗೆ ಡಾರ್ಕ್ ಬಣ್ಣವೆಂದರೆ ಜಾಸ್ತಿ ಭಯ ಆದ್ದರಿಂದ ನಮ್ಮ ಪೇಂಟಿಂಗ್ ಕೂಡ ಡಾರ್ಕ್ ಕಲರ್ ನಿಂದ ಇರುತ್ತವೆ ಎನ್ನುತ್ತಾರೆ ಪ್ರಶಾಂತ್.

ಬುಡಕಟ್ಟು ಜನ ಬಟ್ಟೆ ಧರಿಸದಿರುವ ಕೆಲವೊಂದು ಸನ್ನಿವೇಶದಲ್ಲಿ ಅಂತಹ ವರ್ಣಚಿತ್ರಗಳನ್ನು ಆಧುನೀಕರಣ ಮಾಡಲಾಗಿದೆ. ಸಾಮಾನ್ಯವಾಗಿ ಯಾವುದೇ ಒಬ್ಬ ಮನುಷ್ಯನನ್ನು ದೂರದಿಂದ ನೋಡಿದಾಗ ಮುಖದ ಭಾವನೆ ಸ್ಪಷ್ಟವಾಗಿರುವುದಿಲ್ಲ ಅಲ್ಲದೇ ಆಫ್ರಿಕನ್ನರ ಮುಖ ಮತ್ತು ತುಟಿಯ ಬಣ್ಣ ಕಪ್ಪಾಗಿದ್ದು ಭಾವನೆ ತಿಳಿಯುವುದಿಲ್ಲ. ಅದಕ್ಕಾಗಿ ಈ ವರ್ಣಚಿತ್ರಗಳಲ್ಲಿ ಕಣ್ಣು, ಕವಿ, ಮೂಗು, ಬಾಯಿ ಇರುವುದಿಲ್ಲ. ಭಾರತದ ಶಿಲ್ಪ ಕಲೆಗಳಲ್ಲಿ ಮುಖ ಭಾವನೆ, ಆಭರಣ ಹಾಗೂ ವಸ್ತ್ರವನ್ನು ಚಿತ್ರಿಸುವುದು ಸಲ್ಪ ತ್ರಾಸಿನ ಕೆಲಸ ಆದರೆ ಆಫ್ರಿಕನ್ ಪೇಂಟಿಂಗ್ ಬಹಳ ಸುಲಭವಾಗಿ ಬಿಡಿಸಬಹುದಾಗಿದೆ.

-ರಕ್ಷಿತ ಬಿ.ಎನ್

One thought on “ಡಾರ್ಕ್ ಬಣ್ಣದ ಬಟ್ಟೆಗಳ ಮೇಲೆ ಅರಳಿದ ಆಕರ್ಷಕ ಆಫ್ರಿಕನ್ ಪೇಂಟಿಂಗ್

  • February 2, 2018 at 7:44 pm
    Permalink

    Sir..this was my stall. How can you put it in others name. It’s warli painting on clothes by me.

    Reply

Leave a Reply

Your email address will not be published. Required fields are marked *