ನಾಳೆ ನಬೋ ಮಂಡಲದಲ್ಲಿ 150 ವರ್ಷಗಳ ಬಳಿಕ ಕೌತುಕದ ಚಂದ್ರಗ್ರಹಣ

ಜನವರಿ 31 ರಂದು ನಬೋ ಮಂಡಲದಲ್ಲಿ ಸಂಭವಿಸಲಿರುವ ಖಗ್ರಾಸ ಚಂದ್ರಗ್ರಹಣ ತೀರ ಅಪರೂಪವಾದದ್ದು. ಸುಮಾರು 150 ವರ್ಷಗಳ ಬಳಿಕ ಇಂತಹ ಅಪರೂಪದ ಚಂದ್ರಗ್ರಹಣ ಸಂಭವಿಸುತ್ತಿದ್ದು. ಅಂದು ಚಂದ್ರ ಸಾಮಾನ್ಯ ಗಾತ್ರಕ್ಕಿಂತ ಶೇ 14 ರಷ್ಟು ದೊಡ್ಡದಾಗಿ ಕಂಡುಬರಲಿದೆ.

ಚಂದ್ರ ಸಾಮಾನ್ಯ ಗಾತ್ರಕ್ಕಿಂತ ದೊಡ್ಡದಾಗಿ ಕಂಡುಬರುವುದನ್ನು ಬ್ಲಡ್​​ಮೂನ್ ಎಂದು ವಿಜ್ಞಾನಿಗಳು ನಾಮಕರಣ ಮಾಡಿದ್ದಾರೆ. ಅಂದು ಚಂದ್ರ ಸಂಪೂರ್ಣ ಕಿತ್ತಳೆ ಬಣ್ಣದಲ್ಲಿ ಕಂಗೊಳಿಸಲಿದೆ. ಈ ವರ್ಷದ ಮೊದಲ ಗ್ರಹಣ ಇದಾಗಿದ್ದು, ವಿಶೇಷ ರೀತಿಯಲ್ಲಿ ಗ್ರಹಣ ಗೋಚರವಾಗಲಿದೆ.

ಈ ಗ್ರಹಣವು ವಿಶ್ವದ ಅನೇಕ ದೇಶಗಳಲ್ಲಿ ಕಾಣಿಸಲಿದೆ. ಭಾರತ, ರಷ್ಯಾ, ಆಸ್ಟ್ರೇಲಿಯಾ, ಚೀನಾ, ಥೈಲ್ಯಾಂಡ್’ನಲ್ಲಿ ಚಂದ್ರನನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅಲ್ಲದೇ ಭೂಮಿಗೆ ಸಮೀಪದಲ್ಲಿಯೇ ಚಂದ್ರ ಕಾಣಿಸಲಿದ್ದಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

1866ರ ಮಾರ್ಚ್ 31ರಂದು ಸಂಭವಿಸಿದ್ದ ನೀಲಿ ಚಂದ್ರ, ದೈತ್ಯ ಚಂದ್ರ ಮತ್ತು ತಾಮ್ರಬಣ್ಣದ ಅತ್ಯಪರೂಪದ ಚಂದ್ರ ಗ್ರಹಣ ಇದೇ 31ರಂದು ದೇಶದಲ್ಲಿ ಮತ್ತೊಮ್ಮೆ ಸಂಭವಿಸಲಿದೆ. ಆ ದಿನ ಸಂಜೆ 6:13ರಿಂದ ಪೂರ್ಣಚಂದ್ರ ಗ್ರಹಣ ಸಂಭವಿಸಲಿದ್ದು, 6:31ರ ಹೊತ್ತಿಗೆ ಗ್ರಹಣವಾಗಲಿದೆ. 7:31ರ ವೇಳೆ ಚಂದ್ರ ಸಂಪೂರ್ಣ ಕೆಂಪಾಗಿ ಗೋಚರಿಸಲಿದ್ದು, ರಾತ್ರಿ 9:38ರ ಸುಮಾರಿಗೆ ಗ್ರಹಣ ಬಿಡಲಿದೆ.

Leave a Reply

Your email address will not be published. Required fields are marked *