ಇಂದು ಪ್ರೇಮಿಗಳ ದಿನಾಚರಣೆ: ಜಗತ್ತ್ ಪ್ರಸಿದ್ಧ 7 ಐತಿಹಾಸಿಕ ಲವ್ ಸ್ಟೋರಿಗಳಿವು

ಪ್ರೇಮಿಗಳ ದಿನಾಚರಣೆ ಪ್ರೇಮಿಗಳಿಗಳಿಗಷ್ಟೇ ಅಲ್ಲದೆ ಪ್ರೀತಿಯನ್ನು ಬಯಸುವ, ಪ್ರೀತಿಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪ್ರೀತಿ ಪಾತ್ರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ತಮ್ಮ ಪ್ರೀತಿ ಪಾತ್ರ ಪ್ರಾಣಿ- ಪಕ್ಷಿಗಳಿಗೆ ಹೀಗೆ ತಾವು ಪ್ರೀತಿಸುವ ಪ್ರತಿ ಅಂಶಗಳಿಗೂ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸುದಿನವಿದು.

ಪ್ರೀತಿ ಯಾರಿಗೆ, ಯಾವಾಗ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿಯ ಮಾಯೆಗೆ ಸಿಕ್ಕಿ ಹಾಕಿಕೊಳ್ಳದೆ ವ್ಯಕ್ತಿಗಳು ತುಂಬಾ ಅಪರೂಪ. ಪ್ರೀತಿ ಅನ್ನುವುದು ಇವತ್ತು ನೆನ್ನೆ ಹುಟ್ಟಿದ್ದಲ್ಲ, ಅನಾದಿ ಕಾಲದಿಂದಲೂ ಇದೆ. ಪುರಾಣದಲ್ಲಿ ದುಷ್ಯಂತ-ಶಕುಂತಳಾ, ರಾಧೆ-ಕೃಷ್ಣ ಹೀಗೆ ಅನೇಕ ಪುರಾಣ ಪ್ರೇಮ ಕಥೆಗಳನ್ನು ಕೇಳಿರುತ್ತೀರಾ. ಇನ್ನು ರಾಜರ ಕಾಲದ ಪ್ರೇಮ ಕಥೆಗಳನ್ನು ಓದಿರುತ್ತೀರಿ. ರಾಜ ಷಹಜಹಾನ್ ರಾಣಿ ಮುಮ್ತಾಜ್‌ಳ ಮೇಲಿಟ್ಟ ಪ್ರೇಮದ ದ್ಯೋತಕವಾದ ತಾಜ್ ಮಹಲ್ ಜಗತ್ತ್ ಪ್ರಸಿದ್ಧವಾಗಿದೆ.

ಪ್ರೇಮಿಗಳ ದಿನಾಚರಣೆಯ ಮೂಲ

ಇಂದು ನಾವು ಆಚರಿಸುತ್ತಿರುವ ಪ್ರೇಮಿಗಳ ದಿನಾಚರಣೆಯು ಕ್ರಿ.ಶ 270ರಲ್ಲಿ ಎರಡನೆ ಕ್ಲಾಡಿಯಸ್‌ನ ಅವಧಿಯಲ್ಲಿ ಜಾರಿಗೆ ಬಂದಿತು. ಕ್ಲಾಡಿಯಸ್‌ಗೆ ತಮ್ಮ ಯುವಕರು ಯುದ್ಧದ ಸಂದರ್ಭದಲ್ಲಿ ಮದುವೆಯಾಗುವುದು ಇಷ್ಟವಿರಲಿಲ್ಲ. ಏಕೆಂದರೆ ಆತನ ಪ್ರಕಾರ ಯುವಕರು ಮದುವೆಯಾಗದೆ ಒಬ್ಬಂಟಿಯಾಗಿದ್ದಷ್ಟು ಯುದ್ಧದಲ್ಲಿ ಉತ್ತಮ ರೀತಿಯಲ್ಲಿ ಹೋರಾಡುತ್ತಾರೆ ಎಂಬ ಭಾವನೆಯಾಗಿತ್ತು. ಹೀಗಿದ್ದಾಗ ಬಿಷಪ್ ವ್ಯಾಲೇಂಟಿನ್ ಕ್ಲಾಡಿಯಸ್‌ನ ಈ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದನು. ಆತನು ಮದುವೆಯಾಗಲು ಇಚ್ಛಿಸುವವರನ್ನು ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ. ಈ ಅಪರಾಧಕ್ಕಾಗಿ ಅವನನ್ನು ಫೆಬ್ರವರಿ ೧೪ರಂದು ಸೆರೆಮನೆಗೆ ತಳ್ಳಲಾಯಿತು. ಈ ಬಿಷಪ್ ತನ್ನ ಸಾವಿಗೆ ಮೊದಲು “ಇಂತಿ ನಿಮ್ಮ ವ್ಯಾಲೇಂಟಿನ್” ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ಬರೆದು ಸತ್ತನು. ಇದು ವ್ಯಾಲೇಂಟಿನ್ಸ್ ಡೇ (ಪ್ರೇಮಿಗಳ ದಿನ) ಎಂದು ಕರೆಯಲ್ಪಡುವ ಈ ದಿನದ ಹಿಂದಿನ ಕುತೂಹಲಕಾರಿ ವಿಚಾರ.

ಮಧ್ಯಕಾಲೀನ ಯುಗದಲ್ಲಿ ಪ್ರೇಮಿಗಳ ದಿನಾಚರಣೆ

ಕೆಲವರ ಹೇಳಿಕೆಯ ಪ್ರಕಾರ ಮಧ್ಯಕಾಲೀನ ಯುಗದ ಹುಡುಗಿಯರು ಪ್ರೇಮಿಗಳ ದಿನಾಚರಣೆಯಂದು ವಿಲಕ್ಷಣವಾದ ಆಹಾರಗಳನ್ನು ಸೇವಿಸುತ್ತಿದ್ದರಂತೆ. ಇದರಿಂದ ಅವರಿಗೆ ತಮ್ಮ ಭಾವಿ ಗಂಡನ ಕುರಿತು ಕನಸುಗಳು ಬರುತ್ತಿದ್ದವಂತೆ. ಇದರ ಜೊತೆಗೆ ತಮ್ಮ ಬಾಳ ಸಂಗಾತಿ ಯಾರು ಎಂದು ತಿಳಿದುಕೊಳ್ಳಲು ಬಟ್ಟಲುಗಳ ಮೇಲೆ ಹೆಸರನ್ನು ಸಹ ಬರೆಯುತ್ತಿದ್ದರಂತೆ. ಆನಂತರ ತಮ್ಮ ಬಟ್ಟೆಯ ತೋಳಿನ ಮೇಲೆ ಅವರ ಪ್ರೇಮಿಯ ಹೆಸರನ್ನು ಬರೆದುಕೊಳ್ಳುತ್ತಿದ್ದರಂತೆ. ಹೀಗೆ “To wear your heart on your sleeve” (ನಿಮ್ಮ ಹೃದಯವನ್ನು ನಿಮ್ಮ ತೊಳಿನ ಮೇಲೆ ಧರಿಸಿ) ಎಂಬ ಘೋಷ ವಾಕ್ಯ ಹುಟ್ಟಿಕೊಂಡಿತು.

7 ಜಗತ್ತ್ ಪ್ರಸಿದ್ಧ ಐತಿಹಾಸಿಕ ಲವ್ ಸ್ಟೋರಿ

1) ದುಷ್ಯಂತ ಮತ್ತು ಶಕುಂತಲಾ ಕಥೆ: ದುಷ್ಯಂತ ಮತ್ತು ಶಕುಂತಲಾಳ ನಡುವೆ ಪ್ರಣಯಾಂಕುರವಾಗಿ ಕೊನೆಗೆ ಅವಳನ್ನು ಮರೆತು ಬಿಡುವ ದುಷ್ಯಂತ, ದುಷ್ಯಂತನ ಪ್ರೀತಿಯ ಕುಡಿಯನ್ನು ಹೊತ್ತು ಕಷ್ಟಪಡುವ ಶಕುಂತಾಳ ಈ ಕಥೆ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

2) ರಾಣಿ ವಿಕ್ಟೋರಿಯಾ ಮತ್ತು ರಾಜ ಆಲ್ಬರ್ಟ್: ಬ್ರಿಟನ್ ರಾಣಿ ವಿಕ್ಟೋರಿಯಾ ಮತ್ತು ರಾಜ ಆಲ್ಬರ್ಟ್ ಬಕ್ಕಿಂಗ್ ಹ್ಯಾಮ್ ಪ್ಯಾಲೆಸ್ ನಲ್ಲಿ ಬಾಳಿ ಮೊದಲ ರಾಜ-ರಾಣಿ. ರಾಣಿ ತನ್ನ ಡೈರಿಯಲ್ಲಿ ತಮ್ಮ ಪ್ರೇಮಕಾವ್ಯವನ್ನು ಬರೆದಿದ್ದಾರೆ.

3) ಷಹಜಹಾನ್ ಮತ್ತು ಮುಮ್ತಾಜ್: ಮುಮ್ತಾಜ್ ಳದು ಒಂದು ದುರಂತ ಕಥೆಯಾಗಿದ್ದರೂ ಷಹಜಹಾನ್ ಅವಳ ಮೇಲಿನ ಪ್ರೇಮಕ್ಕಾಗಿ ಕಟ್ಟಿಸಿದ ತಾಜ್ ಮಹಲ್ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿದೆ.

4) ನೆಪೋಲಿಯನ್ ಮತ್ತು ಜೋಸೆಫೈನೆ: ನೆಪೋಲಿಯನ್ ನ ಕ್ರೂರ ಆಡಳಿತದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ನೆಪೋಲಿಯನ್ ಕ್ರೂರಿಯಾಗಿದ್ದರೂ ತನ್ನ ಹೆಂಡತಿ ಜೋಸೆಫೈನೆಳನ್ನು ತುಂಬಾ ಪ್ರೀತಿಸುತ್ತಿದ್ದನು. ಅವಳಿಗೆ ಮಕ್ಕಳಾಗಾದ ಕಾರಣ ದೂರವಾದರು.

5) ಕ್ಲಿಯೋಪಾತ್ರಾ ಮತ್ತು ಮಾರ್ಕ್ ಆಂಟೆನಿ: ಷೇಕ್ಸ್ ಪಿಯರ್ ಇವರಿಬ್ಬರ ಪ್ರೇಮವನ್ನು ಬಹಳ ರಸವತ್ತಾಗಿ ವರ್ಣಿಸಿದ್ದಾರೆ. ಇವರಿಬ್ಬರ ಪ್ರೀತಿ ಅಮರವಾಗಿದೆ.

6) ರೋಮಿಯೋ ಮತ್ತು ಜೂಲಿಯೆಟ್: ರೋಮಿಯೋ, ಜೂಲಿಯೆಟ್ ಪ್ರೇಮ ಕಥೆ ಕೇಳುತ್ತಿದ್ದರೆ ಮೈ ಜುಮ್ಮೆನ್ನುತ್ತದೆ. ಅವರಿಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿ ಅಮರ ಪ್ರೇಮಿಗಳಾದರು.

7) ಸಲೀಂ ಮತ್ತು ಅನಾರ್ಕಲಿ: ಇದು ಕೂಡ ಒಂದು ಪ್ರಸಿದ್ಧ ಐತಿಹಾಸಿಕ ಪ್ರೇಮ ಕಥೆ. ರಾಜ ಕುಮಾರ ಸಲೀಂ ತನ್ನ ಅರಮನೆಯ ಸೇವಕಿಯಲ್ಲಿ ಪ್ರೇಮದಲ್ಲಿ ಬೀಳುತ್ತಾನೆ. ರಾಜ ಮನೆತನದವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಸಲೀಂ ಅನ್ನು ಅನಾರ್ಕಲಿಯಿಂದ ದೂರ ಮಾಡಲು ರಾಜ ಅನಾರ್ಕಲಿಯನ್ನು ಜೀವಂತವಾಗಿ ಸಮಾಧಿ ಮಾಡಿದನು.

Leave a Reply

Your email address will not be published. Required fields are marked *