ಬಬ್ಲಿ ಬಬ್ಲಿಯಾಗಿದ್ದ ವಿರಾಟ್ ಈಗ ಕಟ್ಟುಮಸ್ತಿನ ಪೈಲ್ವಾನ್: ಹ್ಯಾಂಗ್ರಿ ಯಂಗ್ ಮ್ಯಾನ್‍ನ ಫಿಟ್ನೆಸ್ ಗುಟ್ಟು

ವಿರಾಟ್ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್‍ನಲ್ಲಿ ಸದ್ದು ಮಾಡುತ್ತಿರುವ ಮಹಾನ್ ಪ್ರತಿಭೆ. ತನ್ನ ಅಗ್ರೆಸ್ಸಿವ್ ಆಟ, ಅಬ್ಬರದ ಬ್ಯಾಟಿಂಗ್‍ನಿಂದಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಪಡೆದವರು. ಈಗಾಗಲೇ 34 ಏಕದಿನ ಶತಕಗಳೊಂದಿಗೆ 55 ಸೆಂಚುರಿ ಸಿಡಿಸಿರೋ ವಿರಾಟ್ ಟೀಂ ಇಂಡಿಯಾ ನಾಯಕನಾಗಿಯೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಕ್ರೀಡಾಪಟುಗಳಿಗೆ ಫಿಟ್‍ನೆಸ್ ಬಹಳ ಮುಖ್ಯ. ಇಲ್ಲದಿದ್ದಲ್ಲಿ ಬಹುಕಾಲ ಈ ಕ್ಷೇತ್ರದಲ್ಲಿ ಉಳಿಯುವುದು ಕಷ್ಟ. 2008ರಲ್ಲಿ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ವಿರಾಟ್ ನಿರಂತರವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಕೊಹ್ಲಿ ಪ್ರದರ್ಶನಕ್ಕೆ ಪೂರಕವಾಗಿರುವುದು ಅವರ ಫಿಟ್ನೆಸ್. ಅಂದು ಬಬ್ಲಿ ಬಬ್ಲಿಯಾಗಿದ್ದ ವಿರಾಟ್ ಈಗ ಕಟ್ಟುಮಸ್ತಾದ ದೇಹ ಬೆಳೆಸಿದ್ದಾರೆ.

ದೇಹ ದಂಡಿಸುವುದರ ಜೊತೆಗೆ ಡಯಟ್ ಕೂಡ ಮಾಡ್ತಾರೆ. ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಎಲ್ಲವೂ ಫಿಕ್ಸ್ ಆಗಿರುತ್ತದೆ. ಫ್ಯಾಟ್ ಕಡಿಮೆ ಇರೋ, ಹೆಚ್ಚು ಪ್ರೋಟೀನ್ ಇರುವ ಆಹಾರ ಸೇವಿಸ್ತಾರೆ.

ಬೆಳಗಿನ ತಿಂಡಿಗೆ ಕೊಹ್ಲಿ ಒಂದು ಆಮ್ಲೆಟ್ ತಿನ್ನುತ್ತಾರೆ. ಅದರಲ್ಲಿ 3 ಎಗ್ ವೈಟ್ಸ್, ಒಂದು ಪೂರ್ತಿ ಮೊಟ್ಟೆ, ಪಾಲಕ್, ಪೆಪ್ಪರ್, ಚೀಸ್, ಗ್ರಿಲ್ಡ್ ಬೇಕನ್ ಅಥವಾ ಸ್ಮೋಕ್ಡ್ ಸಾಲ್ಮನ್ ಇರುತ್ತದೆ. ಜೊತೆಗೆ ಪಪ್ಪಾಯ ಅಥವಾ ಕಲ್ಲಂಗಡಿ ಹಣ್ಣು ಸೇವಿಸ್ತಾರೆ. ವಿಶೇಷ ಅಂದ್ರೆ ಕೊಹ್ಲಿ ಯಾವ ದೇಶಕ್ಕೆ ಹೋದ್ರೂ ಅಲ್ಲಿಗೆ ಬೆಣ್ಣೆ ಕೊಂಡೊಯ್ಯುತ್ತಾರಂತೆ.

ಗ್ಲುಟನ್ ಫ್ರೀ ಬ್ರೆಡ್ ಗೆ ಬೆಣ್ಣೆ ಸವರಿಕೊಂಡು ತಿನ್ನುತ್ತಾರೆ. ಅದರ ಜೊತೆಗೆ ನಿಂಬೆರಸ ಬೆರೆಸಿದ ಗ್ರೀನ್ ಟೀ ಕುಡಿಯುತ್ತಾರೆ. ತರಕಾರಿಗಳ ಜೊತೆಗೆ ರೆಡ್ ಮೀಟ್ ಕೂಡ ಹೆಚ್ಚಾಗಿ ತಿನ್ನುತ್ತಿದ್ದಾರಂತೆ. ಮಧ್ಯಾಹ್ನ ಊಟಕ್ಕೆ ಗ್ರಿಲ್ಡ್ ಚಿಕನ್, ಮ್ಯಾಶ್ಡ್ ಪೊಟ್ಯಾಟೋ ಹಾಗೂ ಸ್ಪಿನಾಚ್ ಜೊತೆಗೆ ತರಕಾರಿಗಳನ್ನು ಸೇವಿಸ್ತಾರೆ. ರಾತ್ರಿ ಊಟಕ್ಕೆ ಸೀ ಫುಡ್ ಕಡ್ಡಾಯ. ಇದೇ ಕೊಹ್ಲಿಯ ಫಿಟ್ನೆಸ್ ಗುಟ್ಟು. ಒಟ್ಟಾರೆ ಒಂದು ನಿಯಮಿತ ವ್ಯಾಯಾಮ ಹಾಗೂ ಆಹಾರ ಸೇವನೆ ಮೂಲಕ ಟೀಂ ಇಂಡಿಯಾದಲ್ಲಷ್ಟೇ ಅಲ್ಲದೇ ವಿಶ್ವ ಕ್ರಿಕೆಟ್’ನಲ್ಲಿ ಫಿಟ್ಟೆಸ್ಟ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ನಿರಂತರವಾಗಿ ತಂಡದಲ್ಲಿ ದುಡಿಯುತ್ತ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *