ಕಪಟ ಮೋಸ ತಿಳಿಯದ ನನ್ನ ಸ್ನೇಹಿತ ಮುಗ್ಧ: ನಿಷ್ಕಲ್ಮಶ ಮನಸ್ಸುಳ್ಳ ವ್ಯಕ್ತಿತ್ವ ಆತನದು

ದೀಪ ಹಚ್ಚೋದು ಸುಲಭ ಆದರೆ ಅದು ನಂದಿಸದೆ ಇರುವಂತೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ ಎಂದು ಹೇಳುತ್ತಾರೆ. ಅದೇ ರೀತಿ ಸ್ನೇಹನೂ ಅದರ ಅಂದ ಚೆಂದ ಕೆಡದಂತೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ.

ಸ್ನೇಹ ಅಂದರೆ ಏನೂ ಎಂದು ಗೊತ್ತಿಲ್ಲದ ವಯಸ್ಸಿನಲ್ಲೆ  ಸ್ನೇಹ ಶುರುವಾಯ್ತು. 4ನೇ ತರಗತಿಯಲ್ಲೇ ನಮ್ಮ ಸ್ನೇಹ ಚಿಗುರೊಡೆಯಿತು. ಇಂದಿಗೂ ಸ್ನೇಹವನ್ನು ಕಾಪಾಡಿಕೊಳ್ಳುತ್ತಾ ಅದಕ್ಕೆ ಶೃಂಗರಿಸಿ ಒಂದು ರೂಪ ಕೊಟ್ಟಿದ್ದು ನನ್ನ ಸಹಪಾಠಿ ಅರುಣ್ ಕುಮಾರ್.

ನಾನು ಮತ್ತೆ ಅವನು ಇಬ್ಬರೂ ಅಜ್ಜಿ ಮನೆಯಲ್ಲೇ ಇದ್ದು ಓದುತ್ತಿದ್ದೇವು. ಇಬ್ಬರ ಪರಿಸ್ಥಿತಿಯು ಒಂದೇ ಆಗಿತ್ತು. ಪ್ರತಿದಿನ ಆಟ ಆಡುತ್ತಾ,  ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಒಬ್ಬರಿಗೊಬ್ಬರು ಸ್ಪಂಧಿಸುತ್ತಾ ದಿನ ಕಳೆಯುತ್ತಿದ್ದೆವು. ಪ್ರಾಥಮಿಕ ಹಂತದ ಶಾಲೆ ಮುಗಿದ ನಂತರ ನಾನು ನಮ್ಮ ಊರು, ಅವನು   ಅವನ ಊರಿನತ್ತ ದಾರಿ ಹುಡುಕುತ್ತಾ ಹೊರಟೆವು. ಪ್ರೌಢಶಾಲೆಯ ಹಂತದ ಶಿಕ್ಷಣ ಮುಗಿಸಿದರೂ ನಮ್ಮ ಬೇಟಿಯೇ ಇರಲಿಲ್ಲ. ಇನ್ನೊಂದು ಸಂಗತಿಯೆಂದರೆ ನನಗೆ ಆತನ ನೆನಪು ಕೂಡ ಇರಲಿಲ್ಲ.

ಆದರೆ, ಪದವಿ ಮಾಡುತ್ತಿರುವಾಗ ನನಗೊಂದು ಕರೆ ಬಂತು ‘ಶ್ವೇತಾ ನಾನು ಅರುಣ ನಿನ್ನ ಬಾಲ್ಯ ಸ್ನೇಹಿತ ‘ ಎಂದಿದ್ದೆ ತಡ ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ.  ಮತ್ತೆ ನಮ್ಮ ಸ್ನೇಹ ನಿಂತ ನೀರಾಗಲಿಲ್ಲ. ಆದರೆ ಬಾಲ್ಯವಸ್ಥೆಯಲ್ಲಿದ್ದ ಮುಗ್ಧತೆ , ಆಟ  ಏನೂ ಇರಲಿಲ್ಲ. ಆತನೂ ಕೊಡ ತನ್ನ ಜೀವನ ರೂಪಿಸುವಕೊಳ್ಳುವ ಸಲುವಾಗಿ ಶ್ರಮಿಸುತ್ತಿದ್ದ. ಆಗ ನಮ್ಮ ಸ್ನೇಹ ಮಿಂಚಿ ಮರೆಯಾಯಿತು. ಆತ ಸ್ವಾಭಿಮಾನಿ ಅದೂ ಕೂಡ ನಮ್ಮ ಸ್ನೇಹ ಮುರಿಯಲು ಕಾರಣವಾಯಿತೇನೋ ಎಂದು ಅನ್ನಿಸುತ್ತಿತ್ತು.

ಪದವಿ ಮುಗಿದ ನಂತರ ನನ್ನೆಲ್ಲಾ ಸ್ನೇಹಿತರೊಂದಿಗೆ ಚಿತ್ರದುರ್ಗ ಕೋಟೆ ನೋಡಲೆಂದು ಹೋಗಿದ್ದೇವು. ನನ್ನ ಅದೃಷ್ಟ ಅರುಣನು ಕೂಡ ಅಂದೆ ತನ್ನ ಸ್ನೇಹಿತರೊಂದಿಗೆ ಬಂದಿದ್ದ. ಆಗ ಆತನನ್ನು ನೋಡಿ’ ಮರುಭೂಮಿಯಲ್ಲಿ ನೀರು ಸಿಕ್ಕಷ್ಟು ಆನಂದವಾಯಿತು’. ಕಪಟ ಮೋಸ ತಿಳಿಯದ ನನ್ನ ಸ್ನೇಹಿತ ಮುಗ್ಧ. ನಿಷ್ಕಲ್ಮಶ ಮನಸ್ಸುಳ್ಳ ವ್ಯಕ್ತಿತ್ವ ಆತನದು.

ಅಂದಿನಿಂದ ನಮ್ಮ ಸ್ನೇಹಕ್ಕೆ ರೆಂಬೆ ಕೊಂಬೆಗಳು ಬಂದು ಇಂದು ದೊಡ್ಡ ಮರವಾಗಿ ನಿಂತಿದೆ. ತನಗನಿಸ್ಸಿದ್ಧನ್ನು ನಿಸ್ಸಂಕೋಚವಾಗಿ ಹೇಳುವ ಗುಣ, ನನ್ನ ಪ್ರತಿಯೊಂದು ಮಾತಿಗೂ ಬೆಲೆ ಕೊಡುವ ವ್ಯಕ್ತಿತ್ವ. ತನ್ನ ಕಷ್ಟಗಳನ್ನೆಲ್ಲಾ ಬದಿಗೊತ್ತಿ, ಎಲ್ಲಾ ಕಟ್ಟು  ಪಾಡಲೆಗಳನ್ನು ಕೂಡ ದಾಟಿ ನಮ್ಮ  ಸ್ನೇಹವನ್ನು ಉಳಿಸಿಕೊಂಡಿದ್ದಾರೆ.

ಆ ದೇವರು ನನಗಾಗಿ ಒಬ್ಬ ಸ್ನೇಹಿತನನ್ನು ಮಾರ್ಚ್ 6 ರಂದು ಭೂಮಿಗೆ ಕಳುಹಿಸಿದ್ದಾನೆ ಎಂದೆನಿಸಿತು. ನಮ್ಮ ಸ್ನೇಹ ಶುರುವಾಗಿ 13 ವರ್ಷವಾಗಿದ್ದರೂ ಆತನ ಸ್ನೇಹ ಇಂದಿಗೂ ಬಾಲ್ಯ ಸ್ನೇಹದಂತೆಯೇ ಮುಗ್ಧತೆಯಿಂದ ಕೂಡಿದೆ. ಈ ಸ್ನೇಹ ಹೀಗೆ ಮುಂದುವರೆಯ ಬೇಕೆಂಬುದು ನನ್ನ ಇಚ್ಚೆ.

ಜನ್ಮ ದಿನದ ಶುಭಾಶಯಗಳು ಅರುಣ…

-ಶ್ವೇತಾ. ಜಿ

Leave a Reply

Your email address will not be published. Required fields are marked *