ಕಡಿಮೆ ಖರ್ಚು ಹೆಚ್ಚು ಲಾಭ: ರೈತನ ಆದಾಯ ಮಿತ್ರ ರೇಷ್ಮೆ ಬೆಳೆ

ರೇಷ್ಮೆ ಒಂದು ಗುಡಿ ಕೈಗಾರಿಕೆ ಹಾಗೂ ವಾಣಿಜ್ಯ ಬೆಳೆ‌. ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭ ಪಡೆಯಬಹುದಾದಾಗಿದೆ. ಇದಕ್ಕಾಗಿ ಸರ್ಕಾರ ಕೂಡ ಧನಸಹಾಯವನ್ನು ನೀಡುತ್ತದೆ. ಎಂತಹ ಕಡುಬಡವನು ರೇಷ್ಮೆ ಕೃಷಿ ಮಾಡಿ ಉತ್ತಮ ಸ್ಥಿತಿಗೆ ತಲುಪಬಹುದು. ಇದರಿಂದ ಅವರ ಅರ್ಥಿಕ ಮಟ್ಟವೂ ಸುಧಾರಿಸುತ್ತದೆ.

ಇಂದು ಬಹುಪಾಲು ರೈತರು ಬರೀ ಭತ್ತ, ಕಬ್ಬು ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಇದರಿಂದ ಭೂಮಿ ಫಲವತ್ತತೆ ಹಂತ ಹಂತವಾಗಿ ಕಡಿತಗೊಳ್ಳುತ್ತಿದೆ. ಇದರಿಂದ ಫಸಲು ಕೂಡ ಕಡಿಮೆಯಾಗುತ್ತಾ ವ್ಯವಸಾಯದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ರೈತರು ರೇಷ್ಮೆ ಕೃಷಿಯಂತಹ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು. ರೇಷ್ಮೆ ಬೆಳೆ ಒಂದು ಉತ್ತಮ ಆದಾಯದ ಮೂಲವಾಗಿದೆ.

ಇಂದು ಬ್ರೆಜಿಲ್, ಚೀನಾ, ಫ್ರಾನ್ಸ್, ಭಾರತ, ಇಟಲಿ, ಜಪಾನ್, ಕೊರಿಯಾ, ಮತ್ತು ರಷ್ಯಾ ದೇಶಗಳಲ್ಲಿ ರೇಷ್ಮೆ ಬೆಳೆಸುವಿಕೆಯು ಒಂದು ಪ್ರಮುಖ ಉದ್ಯಮವಾಗಿದೆ. ಹಲವಾರು ವಾಣಿಜ್ಯ ಜಾತಿಯ ರೇಷ್ಮೆ ಹುಳುಗಳಿದ್ದರು ಬೊಂಬೈಕ್ಸ್ ಮೋರಿ (ಗೃಹಬಳಕೆಯ ರೇಷ್ಮೆ ಪತಂಗದ ಕ್ಯಾಟರ್ಪಿಲ್ಲರ್)ಅತ್ಯಂತ ವ್ಯಾಪಕವಾಗಿ ಬಳಸಲ್ಪಟ್ಟ ಮತ್ತು ತೀವ್ರವಾಗಿ ಅಧ್ಯಯನಕ್ಕೆ ಒಳಪಟ್ಟದ್ದಾಗಿದೆ. ಇಂತಹ ರೇಷ್ಮೆ ಬೆಳೆ ಹೇಗೆ ಬೆಳೆಯುತ್ತಾರೆ ಎಂಬ ಒಂದು ಸಣ್ಣ ಮಾಹಿತಿ ಹೀಗಿದೆ…

ರೇಷ್ಮೆ ಸಾಕಣೆಯ ವಿಧಾನ: ರೇಷ್ಮೆ ಹುಳುಗಳನ್ನು ಬಳಸಿಕೊಂಡು ಕಚ್ಚಾ ರೇಷ್ಮೆ ಉತ್ಪಾದಿಸುವ ಪ್ರಕ್ರಿಯೆಗೆ ಸಿರಿ ಕಲ್ಚರ್ ಎನ್ನುವರು. ಈ ಹುಳು ಶಿತರಕ್ತ ಪ್ರಾಣಿಗಳು. ರೇಷ್ಮೆ ಹುಳುವಿನ ಜೀವನ ಚಕ್ರ ಕುರಿತು ಹೇಳುವುದಾದರೆ ಹೆಣ್ಣು ರೇಷ್ಮೆಚಿಟ್ಟೆ ಮೊಟ್ಟೆಗಳನ್ನು ಇಡುತ್ತವೆ ಅದು ಲಾರ್ವಾ ಆಗಿ ನಂತರ ಪ್ಯೊಪಾ ಸ್ಥಿತಿಗೆ ಬಂದು ಮತ್ತೆ ಚಿಟ್ಟೆಯಾಗಿ ಮೊಟ್ಟೆ ಇಡುತ್ತದೆ. ಹೀಗೆ ಇದರ ಜೀವನ ಚಕ್ರ ಮುಂದುವರೆಯುತ್ತದೆ.

ಈ ಮೊಟ್ಟೆಗಳನ್ನು ಸ್ವಚ್ಛವಾದ ಕಾಗದ ಅಥವಾ ಬಟ್ಟೆಯ ಮೇಲೆ ಸಂಗ್ರಹಿಸಿ ಉಷ್ಣಾಂಶ 28 ಡಿಗ್ರಿ ಹಾಗೂ ಶೈತ್ಯಾಂಶ 85-90 ಇರುವ ಹಾಗೆ ನೋಡಿಕೊಳ್ಳಬೇಕು.  ಮರಿಗಳಿಗೆ ಸಣ್ಣದಾಗಿ ಕತ್ತರಿಸಿದ ಮಲ್ಬರಿ ಎಲೆಗಳನ್ನು ಆಹಾರವಾಗಿ ನೀಡುತ್ತಾರೆ. ಇದು 2ನೇ ಜ್ವರಕ್ಕೆ ಕೂರುವವರೆಗೆ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಹಿಪ್ಪು ನೇರಳೆ ಸೋಪ್ಪನ್ನು ಹಾಕಬೇಕು. ದಿನ ಮತ್ತು ರಾತ್ರಿ  ಮಲ್ಬರಿ ಎಲೆ ತಿಂದು ಗಾತ್ರದಲ್ಲಿ ಬೆಳೆವಣಿಗೆ ಹೊಂದುತ್ತದೆ. ಮೊದಲ 2 ಹಂತವನ್ನು ದಾಟಿದರೆ ಎಲ್ಲವೂ ಉತ್ತಮ ಸ್ಥಿತಿಯಲ್ಲಿದೆ ಎಂದರ್ಥ. ಈ ಹಂತವನ್ನು ಚಾಕಿ ಎನ್ನುವರು ಈ ಚಾಕಿಯನ್ನು ರೇಷ್ಮೆ ಬೆಳೆಯುವ ರೈತರಿಗೆ ಮಾರಾಟ ಮಾಡಲಾಗುತ್ತದೆ.

ರೈತರು ಸಹ  ಸ್ವಚ್ಛ ಸ್ಥಳದಲ್ಲಿ ನಿಖರ ತಾಪಮಾನ ಹಾಗೂ ತೇವಾಂಶ ಉತ್ತಮವಾಗಿರುವಲ್ಲಿ ಇಟ್ಟು 3 ಮತ್ತು 4ನೇ ಜ್ವರಕ್ಕೆ ಬಂದು ವಾರದ ನಂತರ  ಹುಳು ಹಣ್ಣಾಗುತ್ತದೆ ನಂತರ ಬಿದಿರು ಟ್ರೇಗಳಲ್ಲಿ ಹುಳುಗಳನ್ನು ಇರಿಸಲಾಗುತ್ತದೆ. ಸುಮಾರು 30 ದಿನಗಳ ಕಾಲ ಹುಳುಗಳು ಎಲೆಯನ್ನು ತಿಂದು  ನಿಲ್ಲಿಸಿ ಬಿಡುತ್ತವೆ. ಹುಳುಗಳನ್ನು ಬಿದಿರು ಟ್ರೇಗಳಲ್ಲಿ  ಹೆಚ್ಚು ಬೆಳಕಿಲ್ಲದ  ಕತ್ತಲು ಕೋಣೆಯಲ್ಲಿಟ್ಟಾಗ  ಜೋಲ್ಲು ಗ್ರಂಥಿಯಿಂದ ದ್ರವ ಪೋಟೀನ್ ಸ್ರವಿಸುವ ಮೂಲಕ  ಗೂಡು ಕಟ್ಟುತ್ತವೆ. ಒಳಗೆ ಸಿಹಿನೀರಿನ ಪತಂಗಗಳು ಅಭಿವೃದ್ಧಿ ಹೊಂದುತ್ತವೆ. ವಿಕ್ಟೋರಿಯಾ ಒನ್ ಬಳಸಿಕೊಂಡು ಅಧಿಕ ಇಳುವರಿ ಪಡೆಯಬಹುದು.  ಕೋಕೋನ್ಗಳನ್ನು ರೇಷ್ಮೆ ನೂಲನ್ನಾಗಿ ಮಾಡಲು  ನೀರಿನಲ್ಲಿ  ಬೇಯಿಸಲಾಗುತ್ತದೆ ರೇಷ್ಮೆ ಫೈಬರ್ ಪ್ರತ್ಯೇಕಗೊಳಿಸಿ ರೇಷ್ಮೆ ಥ್ರೆಡ್ ಗಳಾಗಿ ಪರಿವರ್ತಿಸಲಾಗುತ್ತದೆ. ರೇಷ್ಮೆ ಗೂಡು ಚೆನ್ನಾಗಿದ್ದಲ್ಲಿ ಮೊಟ್ಟೆಮಾಡಲು ಕಳುಹಿಸಲಾಗುತ್ತದ ಚೆನ್ನಾಗಿಲ್ಲ ಎಂದರೆ ಅದನ್ನು ರೇಷ್ಮೆ ನೂಲು ತೆಗೆಯುತ್ತಾರೆ. ನೇಕಾರರು ವಿವಿಧ ರೀತಿಯ ಸಿಲ್ಕ್ ಬಟ್ಟೆಗಳನ್ನು ಹಾಗೂ ಸೀರೆಯನ್ನು ತಯಾರಿಸುತ್ತಾರೆ.

ಚಳಿ, ಮಳೆ ಹಾಗೂ ಬೇಸಿಗೆ ಎಲ್ಲಾ ಕಾಲದಲ್ಲಿಯೂ ಈ ಬೆಳೆಯನ್ನು ಬೆಳೆಯಬಹುದು. ಒಂದು ರೇಷ್ಮೆ ಸಾಕಣೆಯ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದರೆ ಹುಳುಗಳಿಗೆ ಸೋಂಕು ತಗಲುತ್ತದೆ ಅಗಾಗಿ ಹೋಗಬಾರದು.

ಹಾಲುತೊಂಡೆ ರೋಗ: ಈ ರೋಗವು ನ್ಯೂಕ್ಲಿಯರ್ ಪಾಲಿ ಹೈಡ್ರೋಸಿಸ್ ಎಂಬ ವೈರಸ್‌ನಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಬೇಸಿಗೆ ಮತ್ತು ಮಳೆ ಗಾಲದಲ್ಲಿ ಕಂಡು ಬರುತ್ತದೆ. ಕಾರಣ ವಾತಾವರಣ ದಲ್ಲಿನ ಏರು- ಪೇರು ,ಕಳಪೆ ಗುಣಮಟ್ಟದ ಸೊಪ್ಪು. ರೋಗಗ್ರಸ್ತ ಹುಳುಗಳು ಸೋಂಕಿದ್ದ ಸೊಪ್ಪನ್ನು ಆರೋಗ್ಯವಂತ ಹುಳುಗಳು ತಿಂದಾಗ ಅವುಗಳಿಗೂ ಈ ರೋಗ ಹರಡುತ್ತದೆ.

ಸಂರಕ್ಷಣಾ ಕ್ರಮ: ರೇಷ್ಮೆ ಹುಳುಗಳು ಇರುವೆಗಳಿಗೆ ಸಕ್ಕರೆಗಿಂತ ಸಿಹಿ ಅಗಾಗಿ ಅವುಗಳ ರಕ್ಷಣೆಗಾಗಿ DDT ಪೌಡರ್ ಅನ್ನು ಸುತ್ತಲೂ ಸಿಂಪಡಣೆ ಮಾಡುತ್ತಿರಬೇಕು. ಡಾಕಲ್ ರಾಸಾಯನಿಕವು ಕೀಟಗಳಿಂದ ರಕ್ಷಿಸುತ್ತದೆ. ಎ ಪೌಡರ್, ಬಿ ಪೌಡರ್ ಹಾಗೂ ವಿಜೇತ ಇವುಗಳನ್ನು ಬಳಸಿ ತಾಪಮಾನ ಸುಸ್ಥಿತಿಯಲ್ಲಿಡಲಾಗುತ್ತದೆ. ತಾಪಮಾನ ಹೆಚ್ಚಾದರೆ ತಣ್ಣನೆಯ ನೀರನ್ನು ತುಂಬಿಟ್ಟು ಗಾಳಿಯಾಡಲು ಅವಕಾಶ ಮಾಡಬೇಕು ಹಾಗೂ ತೇವಾಂಶವನ್ನು ಕಾಪಾಡಿಕೊಳ್ಳಲು ಸುಣ್ಣವನ್ನು ಸಿಂಪಡಿಸಲಾಗುತ್ತದೆ. ಹೀಗೆ ರೇಷ್ಮೆ ಹುಳುವನ್ನು ಸಂರಕ್ಷಣೆ ಮಾಡಲಾಗುತ್ತದೆ.

ಒಟ್ಟಾರೆ ರೇಷ್ಮೆ ಬೆಳೆಯು ರೈತನಿಗೆ ಎಲ್ಲಾ ಕಾಲದಲ್ಲೂ ಲಾಭದಾಯಕವಾದ ವಾಣಿಜ್ಯ ಬೆಳೆಯಾಗಿದೆ. ನನ್ನ ತಂದೆಯೂ ರೇಷ್ಮೆ ಬೆಳೆಗಾರರಾದ್ದರಿಂದ ಇದರ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಸಹಕಾರಿಯಾಯ್ತು..

-ರಕ್ಷಿತ ಬಿ ಎನ್
ಪತ್ರಿಕೋದ್ಯಮ ವಿದ್ಯಾರ್ಥಿ
ಮಾನಸಗಂಗೋತ್ರಿ, ಮೈಸೂರು

Leave a Reply

Your email address will not be published. Required fields are marked *