ಎಷ್ಟೋ ಕಥೆಗಳು ಸಿನಿಮಾಗಳಾಗದೆ ನನ್ನಲ್ಲೆ ಉಳಿದಿವೆ

ಆಗ ಅವರಿಗೆ 27ರ ಹರೆಯ. ಆಡೂರು ಗೋಪಾಲಕೃಷ್ಣ, ಮೃಣಾಲ್ ಸೇನ್, ಬುದ್ಧದೇವ ದಾಸಗುಪ್ತ, ಸತ್ಯಜಿತ್ ರೇ, ಶ್ಯಾಮ್ ಬೆನಗಾಲ್, ಗಿರೀಶ್ ಕಾರ್ನಾಡ್, ಬಸು ಚಟರ್ಜಿಯವರಂತಹ ಭಾರತೀಯ ಚಿತ್ರರಂಗದ ಖ್ಯಾತನಾಮ ನಿರ್ದೇಶಕರ ಚಿತ್ರಗಳ ನಡುವೆ ಕನ್ನಡದ ಆ ಯುವ ನಿರ್ದೇಶಕರ ಚೊಚ್ಚಲ ಚಿತ್ರವೇ ಪ್ರತಿಷ್ಟಿತ ‘ಸ್ವರ್ಣ ಕಮಲ’ ಪ್ರಶಸ್ತಿ ಪಡೆಯಿತು. ಆ ಚಿತ್ರವೇ “ಘಟಶ್ರಾದ್ಧ”. ಆ ಯುವ ನಿರ್ದೇಶಕರೇ ಗಿರೀಶ್ ಕಾಸರವಳ್ಳಿ. ಆ ಸಂದರ್ಭದಲ್ಲಿ ರಾಷ್ಟ್ರದ ಸಿನಿಮಾ ಜಗತ್ತು ಈ ಯುವ ನಿರ್ದೇಶಕನೆಡೆಗೆ ಕುತೂಹಲದಿಂದ ನೋಡುತ್ತಿತ್ತು. ಮುಂದೆ ಕಲಾತ್ಮಕ ಚಿತ್ರಗಳಲ್ಲಿ ಅವರದು ನಡೆದದ್ದೇ ಹಾದಿ. ಕನ್ನಡ ಸಿನಿಮಾ ಕಲಾಲೋಕವನ್ನು ಔನ್ನತ್ಯಕ್ಕೆ ಕೊಂಡೊಯ್ದು, ಸಿನಿಮಾದ ಎಲ್ಲಾ ಅಂಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡು, ಅಭಿವ್ಯಕ್ತಿ ಮಾಧ್ಯಮವಾಗಿ ಸಿನಿಮಾಕ್ಕೊಂದು ಶ್ರೇಷ್ಟತೆಯ ಗುಣ ರೂಪಿಸಿಕೊಟ್ಟ, ಬೌದ್ಧಿಕ ಪ್ರಾಮಾಣಿಕತೆಯ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ “ನಿರಂತರ ಬ್ಲಾಗ್” ಗೆ ನೀಡಿದ ಸಂದರ್ಶನ ಇಲ್ಲಿದೆ.

ನಿಮ್ಮ ಸಿನಿ ಜೀವನಕ್ಕೆ ಮಲೆನಾಡ ಸೌಂದರ್ಯ ಹೇಗೆ ಪ್ರಭಾವಿಸಿತ್ತು?
ಮಲೆನಾಡು ಅನೇಕ ರೀತಿಯಲ್ಲಿ ಪ್ರಭಾವಿಸಿದೆ. ಇಲ್ಲಿನ ಬಹುತೇಕರು ಅಡಿಕೆ ಬೆಳೆಗಾರರಾಗಿದ್ದರಿಂದ ಹೆಚ್ಚಿನ ಸಮಯ ಸಿಗುತ್ತಿತ್ತು. ಹಾಗಾಗೀ ಓದುವ ಹವ್ಯಾಸ, ಕಲೆಯನ್ನು ಪೋಷಿಸುವ ಹವ್ಯಾಸ ವ್ಯಾಪಕವಾಗಿ ಇತ್ತು. ಅದರೊಟ್ಟಿಗೆ ಹರಿಕಥೆ, ಯಕ್ಷಗಾನ, ಗಮಕ್ಕ ನಡೆಯತ್ತಲೇ ಇದ್ದವು. ಹಾಗಾಗಿ ಒಂದು ರೀತಿಯಲ್ಲಿ ಇವುಗಳ ಬಗ್ಗೆ ಆಸಕ್ತಿ ಹುಟ್ಟಿತ್ತು. ಸಾಹಿತ್ಯ ಮತ್ತು ಕಲೆಯನ್ನು ವ್ಯವಹಾರಿಕವಾಗಿ ನೋಡದೆ ಅದೊಂದು ಪ್ರವೃತ್ತಿಯಾಗಿ ಸ್ವಿಕರಸಿದೆ. ಈಗಲೂ ನನಲ್ಲ ಅದೆ ಭಾವವಿದೆ. ಅಲ್ಲಿನ ಜೀವನ ಕ್ರಮವನ್ನ ಹತ್ತಿರದಿಂದ ನೋಡಿದರಿಂದ ಮಲೆನಾಡ ವೈಶಿಷ್ಟ್ಯತೆ ನನ್ನ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸುತೆ.

ಇತ್ತೀಚೆಗೆ ಪ್ರಶಸ್ತಿಗಳೊಂದಿಗೆ ವಿವಾದಗಳೂ ಹುಟ್ಟ್ಟಿಕೊಳ್ಳುತ್ತಿವೆ. ನಿಮ್ಮ ಪ್ರಕಾರ ಪ್ರಶಸ್ತಿಯನ್ನು ಯಾವ ಮಾನದಂಡಗಳ ಆಧಾರದ ಮೇಲೆ ನೀಡಬೇಕು?
ಮೊದಲೆನೆಯ ಅಂಶವಾಗಿ ಸಿನಿಮಾಗಳಲ್ಲಿ ಪ್ರಸ್ತುತ ನಮ್ಮ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕøತಿಕ ವ್ಯಾಖ್ಯಾನವಾಗಿರಬೇಕು. ಎರಡನೆಯದಾಗಿ ಸಿನಿಮಾದಲ್ಲಿ ಭಾಷೆಯನ್ನು ಬಹಳ ಚೆನ್ನಾಗಿ ಬಳಸಿರಬೇಕು. ಅಂತಹ ಸಿನಿಮಾಗಳು ಪ್ರಶಸ್ತಿಗೆ ಅರ್ಹ.
ಪ್ರಶಸ್ತಿ ವಿತರಣೆಯ ಪೂರ್ವ ಮತ್ತು ನಂತರದ ಅವಧಿಯಲ್ಲಿ ಮಾಧ್ಯಮಗಳ ಪಾತ್ರ ಯಾವ ರೀತಿಯಾಗಿರುತ್ತೆ?
ಎಲೇಕ್ಟ್ರಾನಿಕ್ ಮಾಧ್ಯಮಗಳು ಟಿಆರ್‍ಪಿಗಾಗಿ ಕಮರ್ಷಿಯಲ್ ಸಿನಿಮಾಗಳಿಗೆ ವಿಜೃಂಭಣೆಯ ಪ್ರಚಾರ ನೀಡುತ್ತವೆ. ಯಾವ ಸಿನಿಮಾ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಉತ್ತಮ ಪ್ರಚಾರ ಗಳಿಸಿದೆ, ಆ ಸಿನಿಮಾ ಮನೋರಂಜನಾತ್ಮಕ ಚಿತ್ರಗಳಲ್ಲಿ ರಾಷ್ಟ್ರ ಪ್ರಶಸ್ತಿಗೆ ಅರ್ಹವಾಗುತ್ತದೆ. ಮುದ್ರಣ ಮಾಧ್ಯಮದಲ್ಲಿ ಚರ್ಚೆಯಾಗುವ ಸಿನಿಮಾಗಳು ಕಲಾತ್ಮಕ ಚಿತ್ರ ಪ್ರಶಸ್ತಿಗೆ ಅರ್ಹವಾಗುತ್ತವೆ. ಬಹುತೇಕ ಎಲೆಕ್ಟ್ರಾನಿಕ್ ಮಾಧ್ಯಮಗಳು ಸ್ಟಾರ್ ನಟ ಅಥವಾ ನಟಿಗೆ ಪ್ರಶಸ್ತಿ ಸಿಗಲೆಂದು ಇಚ್ಚಿಸುತ್ತವೆ. ಇದರಿಂದ ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳಬಹುದೆಂಬ ವ್ಯಾವಹಾರಿಕ ನಡೆ. ಇದು ಉತ್ತಮ ಬೆಳವಣಿಗೆ ಅಲ್ಲ.

ಪುಣೆಯಲ್ಲಿನ ಎಫ್‍ಟಿಐಐ ಸಿನಿಮಾ ತರಬೇತಿ ಸಂಸ್ಥೆಯ ಥರದ ಅಗತ್ಯತೆ ರಾಜ್ಯಕ್ಕೆ ಇದೆಯೇ?
ಅಂತಹ ಸಂಸ್ಥೆಯನ್ನು ಪ್ರತಿಯೊಂದು ರಾಜ್ಯದಲ್ಲಿ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಅದು ಒಂದು ರೀತಿ ಪ್ರ್ರೀಮಿಯರ್ ಇನ್ಸ್‍ಟ್ಯೂಟ್ ಇದ್ದಹಾಗೆ. ಆದರೆ, ಅಂತಹ ಸಂಸ್ಥೆಯಿಂದ ಸಿನಿಮಾ ಕ್ಷೇತ್ರಕ್ಕೆ ಬಹಳಷ್ಟು ಉಪಯೋಗ ಇರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ.

ಕಮರ್ಷಿಯಲ್ ಸಿನಿಮಾಗಳ ಭರಾಟೆಯ ನಡುವೆ ಕಲಾತ್ಮಕ ಚಿತ್ರಗಳ ಪ್ರಸ್ತುತತೆ ಹೇಗಿದೆ?
ಕಮರ್ಷಿಯಲ್ ಸಿನಿಮಾಗಳಿಗೆ ಸಿಗುವ ಪ್ರಚಾರ ಕಲಾತ್ಮಕ ಸಿನಿಮಾಗಳಿಗೆ ಸಿಗುತ್ತಿಲ್ಲ. ಮುಖ್ಯವಾಗಿ ಎದ್ದು ಕಾಣುವುದು ಥಿಯೇಟರ್‍ಗಳ ಕೊರತೆ. ಇವೆಲ್ಲವುಗಳ ನಡುವೆಯೂ ಕಲಾತ್ಮಕ ಚಿತ್ರಗಳು ಜೀವಂತವಾಗಿವೆ. ಭಾರತದ ಒಳಗೂ-ಹೊರಗೂ ಕಲಾತ್ಮಕ ಚಿತ್ರಗಳನ್ನು ನೋಡುವಂತಹ ಪ್ರೇಕ್ಷಕರು ಇದ್ದಾರೆ. ವಿದೇಶಕ್ಕೆ ಹೋದಾಗ ಅಲ್ಲಿನ ವೀಕ್ಷಕರು ನಿಮ್ಮ ಸಿನಿಮಾ ನೋಡಿದ್ದೇನೆ ಎನ್ನುತ್ತಾರೆ. ಇದು ಉತ್ತಮವಾದ ಪ್ರತಿಕ್ರಿಯೆ ಮತ್ತು ಬೆಳವಣಿಗೆ.

ಬಾಹುಬಲಿ ಸಿನಿಮಾಗೆ ನೀಡಿದ ರಾಷ್ಟ್ರ ಪ್ರಶಸ್ತಿಯ ಬಗ್ಗೆ ಅಸಮಾಧಾನ ಏಕೆ?
ನೋಡಿ, ಸಿನಿಮಾ ಆ ಕಾಲದ ವಾಗ್ವಾದಗಳ ಪ್ರತಿರೂಪದ ಭಾಗವಾಗಿ ಹುಟ್ಟಿಕೊಳುತ್ತೆ. ಬಾಹುಬಲಿಯಲ್ಲಿ ಅಂತಹ ರೂಪಗಳಿಲ್ಲ. ಆ ಸಿನಿಮಾದಲ್ಲಿ ಮೂಲ ನಿವಾಸಿಗಳನ್ನು ಮೃಗಗಳಂತೆ ತೋರಿಸಲಾಗಿದೆ. ಇಂತಹ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ನೀಡಿದ್ದು ನನಗೆ ನಿಜಕ್ಕೂ ಆಶ್ಚರ್ಯವಾಗಿದೆ.

ನಿಮ್ಮಲ್ಲಿ ಸಿನಿಮಾ ಮಾಡದೆ ಇರುವ ಕಾಡುವ ಕಥೆಗಳು ಇವೆಯಾ?
ಎಷ್ಟೋ ಕಥೆಗಳು ಸಿನಿಮಾಗಳಾಗದೆ ನನ್ನಲ್ಲೇ ಉಳಿದಿವೆ. ಅವುಗಳಲ್ಲಿ ಕೆಲವನ್ನು ತೆಗೆದುಕೊಂಡು ನನಗೆ ಬೇಕಾದ ಹಾಗೆ ಕಥೆ ಮಾಡುತ್ತೇನೆ.

ನಿಮ್ಮ ಸಿನಿಮಾಗಳಲ್ಲಿ ಮಹಿಳಾ ಪ್ರಧಾನ ಪಾತ್ರಗಳ ಮುಂದೆ ಪುರುಷ ಪಾತ್ರಗಳು ಮಂಕಾಗಿ ಮೂಡುತ್ತವೆ ಯಾಕೆ?
(ನಗುತ್ತಾ) ಯಾಕೆ ಅಂತ ನನಗೆ ಹೇಳುವುದಕ್ಕೆ ಬರುವುದಿಲ್ಲ.

ಆಡೂರು ಗೋಪಾಲಕೃಷ್ಣ ಬಯೋಗ್ರಫಿ ಸಿನಿಮಾದ ವಿಶೇಷತೆ ಏನು?
ಆಡೂರು ಗೋಪಾಲಕೃಷ್ಣರ ಸಿನಿಮಾಗಳ ವೈಶಿಷ್ಟತ್ಯೆಗಳನ್ನು ಸೆರೆ ಹಿಡಿದಿದ್ದೇನೆ. ಅವರ ಸಂಪೂರ್ಣ ಜೀವನ ಚಿತ್ರಣ ಅದರಲ್ಲಿ ಇಲ್ಲ.

ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ ಕುರಿತ ಚರ್ಚೆ ಹೆಚ್ಚಾಗಿ ಕೇಳಿಬರುತ್ತಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಅಸಹಿಷ್ಣತೆ ಎಲ್ಲಾ ಕಾಲದಲೂ ಎಲ್ಲಾ ರಾಜಕೀಯ ಪಕ್ಷಗಳಲ್ಲ್ಲೂ ಇತ್ತು. ಆದರೆ, ಇಂದು ಇದಕ್ಕೆ ರಾಜ್ಯಗಳ ಬೆಂಬಲ ದೊರೆಯುತ್ತಿದೆ. ಇದು ದೇಶಕ್ಕೆ ಅಪಾಯಕಾರಿ.

ನಿಮ್ಮ ಮುಂದಿನ ಸಿನಿಮಾ?
ನನ್ನ ಮುಂದಿನ ಸಿನಿಮಾಕ್ಕೆ ಕಥೆ ಹುಡುಕುತ್ತಿದ್ದೇನೆ. ಅದು ಮಲೆನಾಡಿನಲ್ಲಿ ಚಿತ್ರೀಕರಣವಾಗುತ್ತದೆ.

ಸಿನಿಮಾ ರಂಗದತ್ತ ಹೆಜ್ಜೆ ಹಾಕುತ್ತಿರುವ ಯುವಕರಿಗೆ ನಿಮ್ಮ ಸಂದೇಶ?
ಇದೊಂದು ಒಳ್ಳೆಯ ಮಾಧ್ಯಮ. ನಿಷ್ಠೆಯಿಂದ ದುಡಿಸಿಕೊಳ್ಳಿ. ಬದ್ಧತೆಯಿಂದ ಕೆಲಸ ಮಾಡಿ.

ಮಲ್ಲಿಕಾರ್ಜುನ

IMG_4381

5 thoughts on “ಎಷ್ಟೋ ಕಥೆಗಳು ಸಿನಿಮಾಗಳಾಗದೆ ನನ್ನಲ್ಲೆ ಉಳಿದಿವೆ

 • April 23, 2016 at 3:03 pm
  Permalink

  Good conversations with the great director girish kasarvalli sir…………the present situation of cinema stories are lacking behind of boosting youngsters ……..i hope girish sir inspire to all yongsters of new society…….

  Reply
  • April 23, 2016 at 11:00 pm
   Permalink

   Thank you Sharanu …..

   Reply
 • April 23, 2016 at 7:36 pm
  Permalink

  Good one…

  Reply
 • April 23, 2016 at 10:38 pm
  Permalink

  Very good conversation brother I proud of u I hope you will also be a one of a great person like girish sir god bless u my dear MALLU

  Reply

Leave a Reply

Your email address will not be published. Required fields are marked *