ಮಾತೆ ಶ್ರೀ ಪದ್ಮಾವತಿ ದೇವಿ ಸಹಸ್ರಾಷ್ಟನಾಮಾವಳಿಯೊಂದಿಗೆ ಕುಂಕುಮಾರ್ಚನೆ

News No Comments on ಮಾತೆ ಶ್ರೀ ಪದ್ಮಾವತಿ ದೇವಿ ಸಹಸ್ರಾಷ್ಟನಾಮಾವಳಿಯೊಂದಿಗೆ ಕುಂಕುಮಾರ್ಚನೆ 46

ಧರ್ಮಸ್ಥಳದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲ್ಲಿ 10ನೇ ಅಕ್ಟೋಬರ್ 2016ರಂದು ನವರಾತ್ರಿಯ ಸಂದರ್ಭದಲ್ಲಿ ಕ್ಷುಲ್ಲಕ 105 ಜಿನಕೀರ್ತಿ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಮಾತೆ ಶ್ರೀ ಪದ್ಮಾವತಿ ದೇವಿ ಸಹಸ್ರಾಷ್ಟನಾಮಾವಳಿಯೊಂದಿಗೆ ಕುಂಕುಮಾರ್ಚನೆ ಪೂಜೆ ನಡೆಯಿತು. ತದನಂತರ ಪೂಜೆಯಲ್ಲಿ ಭಾಗವಹಿಸಿದ ಎಲ್ಲಾ ಶ್ರಾವಿಕೆಯರಿಗೆ ಉಡಿತುಂಬಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ, ಶ್ರೀ ಡಿ. ಸುರೇಂದ್ರ ಕುಮಾರ್, ಶ್ರೀ ಡಿ. ಹರ್ಷೇಂದ್ರ ಕುಮಾರ್, ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರೀಮತಿ ಶ್ರದ್ಧಾ ಅಮಿತ್, ಶ್ರೀಮತಿ ಶ್ರುತಜಿತೇಶ್, ಶ್ರೀಮತಿ ಸಂಹಿತಾ ಶ್ರೇಯಸ್, ಶ್ರೀ ನಿಶ್ಚಲ್ ಕುಮಾರ್, ಮಾನ್ಯ, ಪ್ರಸನ್ನಕುಮಾರ್ ಮೊದಲಾದವರು ಉಪಸ್ಥಿತರಿದ್ದು, ನೂರಾರು ಶ್ರಾವಕ ಶ್ರಾವಕಿಯರು ಕುಂಕುಮಾರ್ಚನೆಯಲ್ಲಿ ಭಾಗವಹಿಸಿ ಪುಣ್ಯಭಾಗಿಗಳಾದರು.

Leave a comment

Copyright © 2015 - 2016. Newsnirantara.in. All Rights Reserved.

Back to Top