ಪ್ರತಿಭಾ ದಿನಾಚರಣೆ ಪ್ರಯುಕ್ತ ಛದ್ಮವೇಷ ಸ್ಪರ್ಧೆ

News No Comments on ಪ್ರತಿಭಾ ದಿನಾಚರಣೆ ಪ್ರಯುಕ್ತ ಛದ್ಮವೇಷ ಸ್ಪರ್ಧೆ 190

ಧರ್ಮಸ್ಥಳ: ಪ್ರಸಕ್ತ 2016-17 ಶೈಕ್ಷಣಿಕ ವರ್ಷದ ಶಾಲಾ ಪ್ರತಿಭಾ ದಿನಾಚರಣೆ ಪ್ರಯುಕ್ತ ಡಿಸೆಂಬರ್ 16 ಮತ್ತು 17ರಂದು ಶ್ರೀ.ಧ.ಮಂ. ಆಂಗ್ಲ ಮಾಧ್ಯಮ ಶಾಲೆ,ಧರ್ಮಸ್ಥಳದಲ್ಲಿ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಡಿಸೆಂಬರ್ 17ರಂದು ಪೂರ್ವ ಪ್ರಾಥಮಿಕ ಹಾಗೂ 1 ಮತ್ತು2ನೇ ತರಗತಿಯ ಪುಟಾಣಿಗಳಿಂದ ಛದ್ಮವೇಷ ಪ್ರದರ್ಶನ ನಡೆಯಿತು.

17photo01ಡಿಸೆಂಬರ್ 16 ರಂದು 3ನೇ ತರಗತಿಯಿಂದ 10ನೇತರಗತಿವರೆಗಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಮತ್ತು ಸಮೂಹವಾರು ಛದ್ಮವೇಷ ಸ್ಪರ್ಧೆ ನಡೆಸಲಾಯಿತು. ತೀರ್ಪುಗಾರರಾಗಿ ಶ್ರೀ.ಧ.ಮಂ. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ಶಾಲೆಯ ಸಹಶಿಕ್ಷಕರಾದ ಶ್ರೀಯುತ ಶ್ರೇಯಾಂಶ್ ಜೈನ್ ಮತ್ತು ಶ್ರೀಯುತ ಮುರಳಿ ಇವರು ಆಗಮಿಸಿ ಸಹಕರಿಸಿದರು.

ವಿದ್ಯಾರ್ಥಿಗಳು ಅತೀ ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿದ್ದರು. ಸದ್ರಿ ಕಾರ್ಯಕ್ರಮದಲ್ಲಿ ಶಾಲಾವಿದ್ಯಾರ್ಥಿಗಳೊಂದಿಗೆ ಶಾಲಾಶಿಕ್ಷಕರೂ ಆಸಕ್ತಿಯಿಂದ ಪಾಲ್ಗೊಂಡು ಸ್ಪರ್ಧಾಳುಗಳನ್ನು ಹುರಿದುಂಬಿಸಿದರು.

Leave a comment

Copyright © 2015 - 2016. Newsnirantara.in. All Rights Reserved.

Back to Top