ದೇವರ ದರ್ಶನ, ಪೂಜೆಯಿಂದ ಮನಸ್ಸಿನ ಶುದ್ಧೀಕರಣವಾಗುತ್ತದೆ.

News No Comments on ದೇವರ ದರ್ಶನ, ಪೂಜೆಯಿಂದ ಮನಸ್ಸಿನ ಶುದ್ಧೀಕರಣವಾಗುತ್ತದೆ. 30

ದೇವರ ದರ್ಶನ, ಪೂಜೆ, ಆರಾಧನೆ ಮಾಡುವುದರಿಂದ ಮನಸ್ಸಿನ ಶುದ್ಧೀಕರಣವಾಗಿ ಪವಿತ್ರ ವಾಗುತ್ತದೆ, ಆಧ್ಯಾತ್ಮಿಕ ಲಾಭವಾಗುತ್ತದೆ ಎಂದು ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕ ಸಂದರ್ಭದಲ್ಲಿ ಮಂಗಲ ಪ್ರವಚನ ನೀಡಿದರು.

3UJR01

ಭಗವಾನ್ ಬಾಹುಬಲಿ ಸಾರಿದ ಅಹಿಂಸೆ ಮತ್ತು ತ್ಯಾಗದ ಸಂದೇಶ ಸಾರ್ವಕಾಲಿಕ ಮೌಲ್ಯ ಹೊಂದಿದೆ. ಪ್ರತಿಯೊಬ್ಬರೂ ಧರ್ಮದ ಅನುಷ್ಠಾನ ಮಾಡಿದಾಗ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕ್ಷುಲ್ಲಕ ನಿರ್ವಾಣ ಸಾಗರ್‍ಜಿ ಮಾತನಾಡಿ ಮನ, ವಚನ. ಕಾಯದಿಂದ ಪರಿಶುದ್ಧ ಭಕ್ತಿಯೊಂದಿಗೆ ಧರ್ಮದ ಅನುಷ್ಠಾನ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಬೆಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜೈನ ಮೈತ್ರಿಕೂಟದಿಂದ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕøತರಾದ ಸಿದ್ದಕಟ್ಟೆ ಚಂದ್ರನಾಥ ಇಂದ್ರರನ್ನು ಅಭಿನಂದಿಸಲಾಯಿತು.

ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್ ಮತ್ತು ಕುಟುಂಬಸ್ಥರು ಪಾದಾಭಿಷೇಕ ಮಾಡಿದರು.

Leave a comment

Copyright © 2015 - 2016. Newsnirantara.in. All Rights Reserved.

Back to Top