ಬರಪೀಡಿತ ಪ್ರದೇಶಗಳಿಗೆ ಎತ್ತಿನ ಹೊಳೆ ನೀರು ಹರಿಸಲು ಸಹಕಾರ ಕೋರಿದ ಮಧುಗಿರಿ ಜನತೆ: ಧರ್ಮಸ್ಥಳದಲ್ಲಿ ಹೆಗ್ಗಡೆಯವರಿಗೆ ಮನವಿ

News No Comments on ಬರಪೀಡಿತ ಪ್ರದೇಶಗಳಿಗೆ ಎತ್ತಿನ ಹೊಳೆ ನೀರು ಹರಿಸಲು ಸಹಕಾರ ಕೋರಿದ ಮಧುಗಿರಿ ಜನತೆ: ಧರ್ಮಸ್ಥಳದಲ್ಲಿ ಹೆಗ್ಗಡೆಯವರಿಗೆ ಮನವಿ 35

ಉಜಿರೆ: ಮಧುಗಿರಿ, ಕೊರಟಗೆರೆ ಸೇರಿದಂತೆ ಬರಪೀಡಿತ ಪ್ರದೇಶಗಳಿಗೆ ಎತ್ತಿನ ಹೊಳೆ ನೀರು ಹರಿಸಲು ಸಹಕರಿಸಬೇಕೆಂದು ಕೋರಿ ಶಾಸಕ ಕೆ. ಎನ್. ರಾಜಣ್ಣ ನೇತೃತ್ವದಲ್ಲಿ ಬಂದ ತಂಡ ಧರ್ಮಸ್ಥಳದಲ್ಲಿ ಬುಧವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮನವಿ ಸಲ್ಲಿಸಿತು.

ಜನರು ಹಾಗೂ ಜಾನುವಾರುಗಳಿಗೆ ಕುಡಿಯಲು ಕೂಡಾ ನೀರಿನ ಕೊರತೆಯಾಗಿದೆ. ಆದುದರಿಂದ ಎತ್ತಿನ ಹೊಳೆ ನೀರು ಹರಿಸಲು ಸಹಕಾರ ಕೋರಿದರು.

12UJR01

ಮನವಿ ಸ್ವೀಕರಿಸಿದ ಹೆಗ್ಗಡೆಯವರು ಮಾತನಾಡಿ ನೀರಿನ ಬಳಕೆ ಅತಿಯಾಗಿರುವುದಲ್ಲದೆ, ಕಡಿಮೆ ಮಳೆ ಹಾಗೂ ನೀರಿನ ಮರುಪೂರಣ ವ್ಯವಸ್ಥೆಯ ಕೊರತೆಯಿಂದಾಗಿ ಸಹಜವಾಗಿ ನೀರಿನ ಅಭಾವ ತಲೆದೋರಿದೆ. ಜನರು ಪ್ರಕೃತಿಗೆ ವಿರುದ್ಧವಾಗಿ ವರ್ತಿಸಿದ ಪರಿಣಾಮ ಇದಾಗಿದೆ.

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ರಾಜ್ಯದಲ್ಲಿ ಈಗಾಗಲೆ ನೂರು ಕೆರೆಗಳ ಹೂಳೆತ್ತುವ ಕಾರ್ಯ ಭರದಿಂದ ಸಾಗುತ್ತಿದೆ. ರೈತರಿಂದಲೂ ಉತ್ತಮ ಸ್ಪಂದನೆ ದೊರಕಿದೆ. ಮುಂದಿನ ವರ್ಷ ಮಧುಗಿರಿ ಪರಿಸರದಲ್ಲಿಯೂ ಕೆರೆಗಳ ಹೂಳೆತ್ತುವ ಕಾರ್ಯ ಆರಂಭಿಸುವುದಾಗಿ ಹೆಗ್ಗಡೆಯವರು ಪ್ರಕಟಿಸಿದರು.
ತಂಡದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಜಿ.ಟಿ. ರಾಜಣ್ಣ, ರಘು ಯಾದವ್ ಮತ್ತು ಪರಶುರಾಮ, ಪುರಸಭಾಧ್ಯಕ್ಷ ಎಂ.ಕೆ. ನಂಜುಂಡಯ್ಯ, ಎಂ. ಎಸ್. ಮಲಿಕಾರ್ಜುನ, ರಾಜಗೋಪಾಲ ಮೊದಲಾದವರು ಇದ್ದರು.

Leave a comment

Copyright © 2015 - 2016. Newsnirantara.in. All Rights Reserved.

Back to Top