‘ಜಾಗತಿಕ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವುದರ ಕಡಗೆ ಆದ್ಯತೆ ಅಗತ್ಯ’

ಉಜಿರೆ: ತಂತ್ರಜ್ಞಾನ-ಸಂಶೋಧನೆ ಆಧಾರಿತ ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಿ ಜಾಗತಿಕ ಮನ್ನಣೆಯ ಗುಣಮಟ್ಟ ಕಾಯ್ದುಕೊಳ್ಳುವುದರ ಕಡೆಗೆ ಭಾರತೀಯ ಶೈಕ್ಷಣಿಕ ಸಂಸ್ಥೆಗಳು ಗಮನಹರಿಸಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ, ಬೆಂಗಳೂರಿನ ಬಿಎಂಎಸ್ ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷ ಕೆ.ಜೈರಾಜ್ ಅಭಿಪ್ರಾಯಪಟ್ಟರು.

 

ಶನಿವಾರ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರೋಪ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಜಾಗತಿಕ ಮನ್ನಣೆ ಪಡೆಯುವ ಎಲ್ಲ ಗುಣಲಕ್ಷಣಗಳನ್ನು ಎಸ್‍ಡಿಎಂ ಶಿಕ್ಷಣ ಸಂಸ್ಥೆ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಸಂಶೋಧನೆಯ ವಿವಿಧ ಆಯಾಮಗಳ ನೆರವಿನೊಂದಿಗೆ ಬೋಧನೆ ಪರಿಪಕ್ವಗೊಳ್ಳುತ್ತಾ ಸಾಗಬೇಕು. ಸಂಶೋಧನೆಯ ಹೆಜ್ಜೆಗಳ ಜೊತೆಗಿದ್ದಾಗ ಮಾತ್ರ ಬೋಧಕರು ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತದೆ. ಜಾಗತಿಕ-ದೇಶೀಯ ಬೆಳವಣಿಗೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ತರಗತಿ ನಿರ್ವಹಿಸುವ ಕೌಶಲ್ಯ ಬೋಧಕರಿಗಿರಬೇಕು ಎಂದರು.

ತರಗತಿಗಳು ಸಂಶೋಧನೆ-ತಂತ್ರಜ್ಞಾನ ಆಧಾರಿತ ಬೋಧನೆಯೊಂದಿಗೇ ನಿರ್ವಹಿಸಲ್ಪಡಬೇಕು. ನಿರ್ದಿಷ್ಟ ವಿಷಯದ ಜ್ಞಾನದ ಜೊತೆಗೆ ಸಂವಹನ ಕೌಶಲ್ಯ ರೂಢಿಸುವಂತಿರಬೇಕು. ಹಾಗಾದಾಗ ಮಾತ್ರ ಭಾರತದ ವಿದ್ಯಾರ್ಥಿಗಳು ಜಾಗತಿಕ ನೆಲೆಯಲ್ಲಿ ತಮ್ಮ ಸಾಮಥ್ರ್ಯ ಸಾಬೀತುಪಡಿಸಲು ಸಾಧ್ಯವಾಗುತ್ತದೆ. ಅತ್ಯಧಿಕ ಪ್ರಮಾಣದಲ್ಲಿರುವ ಯುವಶಕ್ತಿಯ ಬಲದಲ್ಲಿಯೇ 2050ರ ಹೊತ್ತಿಗೆ ಭಾರತ ಅಭಿವೃದ್ಧಿಯ ಭಿನ್ನ ಹೆಜ್ಜೆಗಳನ್ನಿರಿಸುತ್ತದೆ. ಈ ಅಂಶವನ್ನು ದೃಷ್ಟಿಯಲ್ಲಿರಿಸಿಕೊಂಡು ಶಿಕ್ಷಣದ ಸಂಸ್ಕಾರ ದಾಟಿಕೊಳ್ಳಬೇಕು ಎಂದರು.

ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ವಿವಿಧ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವ ಮಹತ್ವಾಕಾಂಕ್ಷೆ ವಿದ್ಯಾರ್ಥಿಗಳಲ್ಲಿರಬೇಕು. ಆ ಪರೀಕ್ಷೆಗಳಲ್ಲಿ ಗೆಲುವು ಸಾಧಿಸಿ ಆಡಳಿತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು. ಅಂಥದ್ದೊಂದು ಸ್ಪರ್ಧಾತ್ಮಕ ವಾತಾವರಣ ರೂಪಿಸಲು ಶಿಕ್ಷಣ ಸಂಸ್ಥೆಗಳು ಪ್ರತ್ಯೇಕ ರಾಷ್ಟ್ರೀಯ ಆಡಳಿತಾತ್ಮಕ ಸೇವೆಗಳ ಘಟಕವನ್ನು ಸ್ಥಾಪಿಸುವ ಅವಶ್ಯಕತೆ ಇದೆ ಎಂದರು.

Felicitation to Dr B Yashovarma

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಾಪಕರು ಬೋಧನೆಯ ಗುಣಮಟ್ಟ ಹೆಚ್ಚಿಸಿಕೊಳ್ಳುವ ಪ್ರಜ್ಞೆಯೊಂದಿಗಿದ್ದಾಗ ಮಾತ್ರ ಮಹತ್ವದ ಕೊಡುಗೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್‍ಡಿಎಂ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರೂ, ಸದ್ಯದ ಎಸ್‍ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸನ್ಮಾನಿಸಿ ಗೌರವಿಸಿದರು. ನಿವೃತ್ತರಾದ ಪ್ರೊ.ಶಿವರಾಂ, ಪದ್ದಣ್ಣನವರ್, ಗೋಪಿನಾಥ ಅವರನ್ನು ಸನ್ಮಾನಿಸಿದರು. ಶೈಕ್ಷಣಿಕ ವರ್ಷದಲ್ಲಿ ಅಪೂರ್ವ ಸಾಧನೆಗೈದ ವಿವಿಧ ವಿದ್ಯಾರ್ಥಿ ಸಾಧಕರಿಗೆ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ವಿತರಿಸಿದರು.

 

DSC_8151

ಪಿಎಚ್‍ಡಿ ಪವಿ ಪಡೆದ ಎಸ್‍ಡಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಸ್.ಮೋಹನ ನಾರಾಯಣ, ಸ್ನಾತಕೋತ್ತರ ಕೇಂದ್ರದ ಸಂಖ್ಯಾಶಾಸ್ತ್ರ ವಿಭಾಗದ ಡಾ.ರಘುನಾಥ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಡಾ.ಪರಶುರಾಮ ಕಾಮತ್, ವಾಣಿಜ್ಯ ವಿಭಾಗದ ಡಾ.ದೇವಕಿ ಕೆ.ಕೆ., ಕನ್ನಡ ವಿಭಾಗ ಡಾ.ಕುಮಾರಸ್ವಾಮಿ ಅವರನ್ನು ಗೌರವಿಸಲಾಯಿತು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಪ್ರೊ.ಎಸ್.ಪ್ರಭಾಕರ್ ಉಪಸ್ಥಿತರಿದ್ದರು. ಡಾ.ಬಿ.ಎ.ಕುಮಾರ್ ಹೆಗ್ಡೆ, ಡಾ.ಬಿ.ಪಿ.ಸಂಪತ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಎಸ್.ಸತೀಶ್‍ಚಂದ್ರ ವಂದಿಸಿದರು.

ವರದಿ: ಭಾಗ್ಯಶ್ರೀ ಹೆಗಡೆ

Leave a Reply

Your email address will not be published. Required fields are marked *