‘ವಿಜ್ಞಾನದ ಇತಿಹಾಸ’ ಸಾಕ್ಷ್ಯಚಿತ್ರ ಬಿಡುಗಡೆ

ಉಜಿರೆ: ಎಸ್‍ಡಿಎಂ ಪದವಿ ಕಾಲೇಜು ಗಣಿತಶಾಸ್ತ್ರ ವಿಭಾಗದ ಪ್ರಾಯೋಜಕತ್ವದೊಂದಿಗೆ ತೃತೀಯ ಬಿಎಸ್ಸಿ ವಿದ್ಯಾರ್ಥಿ ಮೇಘನ್ ಪಾಂಡೆ ನಿರ್ದೇಶಿಸಿದ ‘ವಿಜ್ಞಾನದ ಇತಿಹಾಸ’ ಎಂಬ ಸಾಕ್ಷ್ಯಚಿತ್ರವನ್ನು ಎಸ್.ಡಿ.ಎಂ. ಕಾಲೇಜ್‍ನ ಪ್ರಾಂಶುಪಾಲರಾದ ಪ್ರೊ.ಕೆ.ಎಸ್. ಮೋಹನ್ ನಾರಾಂiÀiಣ ಶುಕ್ರವಾರ ಬಿಡುಗಡೆ ಮಾಡಿದರು.

ಕಾಲೇಜಿನ ಸಮ್ಯಕ್‍ದರ್ಶನ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ವಿಜ್ಞಾನದ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರದ ಮೂಲಕ ಉತ್ತಮ ಸಂದೇಶ ನೀಡಲು ಪ್ರಯತ್ನಿಸಿರುವುದು ಪ್ರಶಂಸನೀಯ ಎಂದರು.

Documentary Release Function

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ನಿರತವಾಗುವುದರಿಂದ ಸುಪ್ತ ಪ್ರತಿಭೆ ಹೊರಬರುವುದಲ್ಲದೇ ಚಿಂತನೆಯೊಂದಿಗೆ ನಾಯಕತ್ವ ಗುಣ ಬೆಳೆಯುತ್ತದೆ. ವ್ಯಕ್ತಿತ್ವ ವಿಕಸನಕ್ಕೂ ನೆರವಾಗುತ್ತದೆ. ತರಗತಿಗಳಿಂದ ಸ್ಫೂರ್ತಿ ಪಡೆದು ಸ್ವಂತಿಕೆ ಬೆಳಸಿಕೊಳ್ಳುವುದರ ಕಡೆಗೆ ವಿದ್ಯಾರ್ಥಿಗಳು ಆಸಕ್ತಿ ತೋರಬೇಕು ಎಂದು ಸಲಹೆ ನೀಡಿದರು.

‘ವಿಜ್ಞಾನದ ಇತಿಹಾಸ’ ಸಾಕ್ಷ್ಯಚಿತ್ರದ ನಿರ್ದೇಶಕ ಮೇಘನ್ ಪಾಂಡೆ ಮಾತನಾಡಿ ಅಧ್ಯಾಪಕರ ಮತ್ತು ಸ್ನೇಹಿತರ ಸೂಕ್ತ ಬೆಂಬಲದಿಂದಾಗಿ ಸಾಕ್ಷ್ಯಚಿತ್ರ ರೂಪಿಸಲು ಸಾಧ್ಯವಾಯಿತು ಎಂದರು. ಪುರಾವೆಗಳೊಂದಿಗೆ ವಿಜ್ಞಾನ ಸಂಬಂಧಿತ ಸಾಕ್ಷ್ಯಚಿತ್ರ ರೂಪಿಸಲಾಗಿದೆ. ಸಾಕ್ಷ್ಯಚಿತ್ರಗಳನ್ನು ರೂಪಿಸುವ ಪ್ರಯತ್ನಗಳು ಹೆಚ್ಚಾಗಬೇಕು ಎಂದು ಆಶಿಸಿದರು.

ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಹಕರಿಸಿದ ಸಂಕಲನಕಾರ ಎಬಿನ್, ಛಾಯಾಗ್ರಹಣ ಮತ್ತು ವಿನ್ಯಾಸ ಹೊಣೆ ನಿರ್ವಹಿಸಿದ ಮಾಡಿದ ಮಿಥುನ್, ಬರಹಗಾರ ರಾಕೇಶ್, ಹಿನ್ನೆಲೆ ಧ್ವನಿ ನೀಡಿದ ಅಧ್ಯಾಪಕ ಮಹೇಶ್ ಅವರಿಗೆ ಉಪಪ್ರಾಂಶುಪಾಲರಾದ ಟಿ.ಎನ್.ಕೇಶವ್ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂಧರ್ಭದಲ್ಲಿ ಸಾಕ್ಷ್ಯಚಿತ್ರ ನಿರ್ಮಾಪಕರಾದ ಗಣೇಶ್ ನಾಯಕ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರಕಾಶ್ ಪ್ರಭು, ಪ್ರೊ.ರಾಧಾಕೃಷ್ಣ ಮಯ್ಯ ಉಪಸ್ಥಿತರಿದ್ದರು. ನಂತರ ಸಾಕ್ಷ್ಯಚಿತ್ರ ಪ್ರದರ್ಶಿತವಾಯಿತು.

Leave a Reply

Your email address will not be published. Required fields are marked *