ಅಣುಕು ಸಂದರ್ಶನಾ ಕಮ್ಮಟ

ಉಜಿರೆ: ಎಸ್‍ಡಿಎಮ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಸಾಯನಶಾಸ್ತ್ರ ವಿಭಾಗದಿಂದ ಕಳೆದರೆಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಹಾಯವಾಗುವ ದೃಷ್ಠಿಯಿಂದ ಅಣಕು ಸಂದರ್ಶನವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗವಕಾಶಗಳಿಗಾಗಿ ನಡೆಯುವ ಸಂದರ್ಶನವನ್ನು ಎದುರಿಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆಯನ್ನು ನೀಡಲಾಗುತ್ತಿದೆ.

ಪ್ರಸಕ್ತ ವರ್ಷದ ಅಣುಕು ಸಂದರ್ಶನ ಕಾರ್ಯಕ್ರಮದಲ್ಲಿ ತಜ್ಞರಾಗಿ ಭಾಗವಹಿಸಿದ ಎಸ್‍ಡಿಎಮ್ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸಂಜಯ ಸರಳಾಯ ಮಹತ್ವದ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಅವರು ತಮ್ಮ ಕೈಗಾರಿಕಾ ಕ್ಷೇತ್ರದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

Sandarshana Kammata photo

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಧನಾತ್ಮಕವಾಗಿ ಸಂದರ್ಶನವನ್ನು ಎದುರಿಸುವ ವೇಳೆ, ಮನೋಸ್ಥೈರ್ಯ ಕಾಯ್ದುಕೊಳ್ಳುವ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ತಂತ್ರಗಳನ್ನು ತಿಳಿಸಲಾಯಿತು. ಸಾಮಾನ್ಯ ರಸಾಯನಶಾಸ್ತ್ರ ಪರಿಕಲ್ಪನೆಗಳನ್ನು ತಿಳಿದುಕೊಂಡು ಮುಂಬರುವ ದಿನಗಳಲ್ಲಿ ವೃತ್ತ್ತಿಪರ ಬದುಕಿಗೆ ಪೂರಕವಾಗುವ ಹಾಗೇ ಅನ್ವಯಿಸಿಕೊಳ್ಳಬಹುದಾದ ಮಾರ್ಗಗಳನ್ನು ಪ್ರಸ್ತಾಪಿಸಲಾಯಿತು. ಸಂದರ್ಶನ ಎದುರಿಸುವುದಕ್ಕೆ ಬೇಕಾದ ಭರವಸೆಯನ್ನು ಮೂಡಿಸಲಾಯಿತು.

ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ದಿನದ 24 ಗಂಟೆಯೂ ಲ್ಯಾಬೋರೇಟರಿಗಳಲ್ಲಿ ಕಾರ್ಯನಿರ್ವಹಿಸುವ ಒತ್ತಡದ ಸಂದರ್ಭಗಳು ಬರುತ್ತವೆ. ಶೈಕ್ಷಣಿಕವಾಗಿ ಹಾಗೂ ಉದ್ಯೋಗದಲ್ಲಿಯೂ ಹಲವಾರು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮಾನಸಿಕ ಸ್ಥೈರ್ಯದೊಂದಿಗೆ ವೃತಿಪರ ಬದುಕಿನ ಬೆಳವಣಿಗೆಗೆ ಪೂರಕವಾದ ಸಲಹೆಗಳನ್ನು ಅಣುಕು ಸಂದರ್ಶನದ ಸಂದರ್ಭದಲ್ಲಿ ನೀಡಲಾಗುತ್ತದೆ ಎಂದು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಡಾ|| ಶಶಿಪ್ರಭಾ ತಿಳಿಸಿದರು. ರಸಾಯನಶಾಸ್ತ್ರದ ಹಾಗೂ ಸಾವಯವ ರಸಾಯನಶಾಸ್ತ್ರದ ಒಟ್ಟು 57 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *