ನಗರದ ಮಕ್ಕಳಿಗೆ ಪರಿಸರದ ಪಾಠ

ರಾಜ್ಯ ರಾಜಧಾನಿಯಲ್ಲಿ ನಿತ್ಯ ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ, ವಾಹನಗಳ ಶಬ್ದವನ್ನು ಕೇಳುವ ಮಕ್ಕಳಿಗೆ ಪ್ರಶಾಂತ ಪಶ್ಚಿಮಘಟ್ಟದ ಮಡಿಲಿನಲ್ಲಿ ಪರಿಸರದ ಪಾಠ ನಡೆಯುತ್ತಿದೆ.

ಪರಿಸರ ಕಾರ್ಯಕರ್ತೆ ದೀಪ್ತಿ ಎಂಬುವವರು ಬೆಳ್ತಂಗಡಿ ತಾಲ್ಲೂಕಿನ ಕುಕ್ಕಾವು ಸಮೀಪದ ಮಲಜೋಡಿಯಲ್ಲಿ ‘ಹ್ಯಾಪಿಲಿ ಔಟ್ ಡೋರ್ಸ್’ ಎಂಬ ಆರು ದಿನಗಳ ‘ಮಕ್ಕಳ ಪರಿಸರ ಶಿಬಿರ’ವನ್ನು ಆಯೋಜಿಸಿದ್ದು, ಶಿಬಿರವು ಸೋಮವಾರ ಪ್ರಾರಂಭಗೊಂಡಿದೆ.

IMG_0627 IMG_0740 IMG_0794

ಪರಿಸರ ಕುರಿತ ಕಾಳಜಿ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಬೆಳೆಸಬೇಕೆಂಬ ಉದ್ಧೇಶದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರದಲ್ಲಿ ಬೆಂಗಳೂರಿನ 10-14ನೇ ವಯೋಮಾನದ 14 ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಪ್ರತಿನಿತ್ಯ ಯೋಗದಿಂದ ಪ್ರಾರಂಭಗೊಂಡು ಮರ-ಗಿಡ ಹಕ್ಕಿಗಳ ಗುರುತಿಸುವಿಕೆ, ಕರಕುಶಲತೆ ಸೇರಿದಂತೆ ಪರಿಸರಕ್ಕೆ ಸಂಬಂಧಪಟ್ಟ ವಿವಿಧ ಚಟುವಟಿಕೆಗಳನ್ನು ಮಕ್ಕಳಿಗಾಗಿ ನಡೆಸಲಾಗುತ್ತದೆ. ಇದರೊಂದಿಗೆ ಸ್ಥಳಿಯ ಗದ್ದೆ-ತೋಟಗಳಿಗೆ ತೆರಳಿ ರೈತರೊಂದಿಗೆ ಸಂವಾದ ನಡೆಸುವ ಮೂಲಕ ಕೃಷಿಪಾಠವನ್ನೂ ಮಕ್ಕಳಿಗೆ ಕಲಿಸಲಾಗುತ್ತಿದೆ.

ಎರ್ಮಾಯಿ ಜಲಪಾತ ಸ್ವಚ್ಛತೆ : ಪ್ರವಾಸಿಗರ ದುರ್ನಡತೆಯಿಂದಾಗಿ ಕಲುಷಿತಗೊಂಡಿದ್ದ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾದ ಎರ್ಮಾಯಿ ಜಲಪಾತವನ್ನು ಸ್ವಚಗೊಳಿಸುವ ಮೂಲಕ ಮಕ್ಕಳು ಪರಿಸರ ಕಾಳಜಿ ಮರೆದಿದ್ದಾರೆ. ಮೂರು ದೊಡ್ಡ ಮೂಟೆಗಳಷ್ಟು ಪ್ಲಾಸ್ಟಿಕ್ ಪೊಟ್ಟಣಗಳು, ಗಾಜಿನ ಸಾರಾಯಿ ಬಾಟಲಿಗಳು ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಸಗ್ರಹಿಸಲಾಗಿದ್ದು, ಇದು ಪ್ರವಾಸಿ ತಾಣದ ಸ್ವಚ್ಛತೆಯ ಕುರಿತು ಪ್ರವಾಸಿಗರಿಗಿರುವ ಅಸಡ್ಡೆಯ ಸಂಕೇತವಾಗಿದೆ.

ದೀಪ್ತಿ, ಪರಿಸರ ಕಾರ್ಯಕರ್ತೆ

Leave a Reply

Your email address will not be published. Required fields are marked *