ಉತ್ತಮ ಹವ್ಯಾಸ ಹಾಗೂ ಪ್ರಯೋಗಶೀಲತೆ ಬೆಳವಣಿಗೆಗೆ ರಹದಾರಿ

ಜನರು ದಿನಪತ್ರಿಕೆಗಳಲ್ಲಿ ಅವರವರ ಆಸಕ್ತಿಯ ವಿಷಯಗಳನ್ನು ಮಾತ್ರ ಓದುತ್ತಾರೆ. ವಿಷಯಗಳನ್ನು ಅರಿಯುವುದರಲ್ಲಿ ನಮ್ಮ ಆಸಕ್ತಿ ಅಡಕವಾಗಿದೆಯೇ ಹೊರತು ವಿಷಯಗಳು ಕ್ಲಿಷ್ಟಕರವಾಗಿರುವುದಿಲ್ಲ. ಪತ್ರಿಕೆಗಳಲ್ಲಿ ಬರುವ ಅಂಕಣ ಲೇಖನಗಳು ವಿಸ್ಕೃತ ಅಧ್ಯಯನದ ಆಧಾರದಲ್ಲಿ ಬರೆಯಲ್ಪಡುತ್ತದೆ. ನಮ್ಮ ಪಠ್ಯಕ್ಕೆ ಸಂಬಂದಪಟ್ಟ ವಿಷಯಗಳ ಅಂಕಣ ಲೇಖನಗಳನ್ನು ಓದಿ, ತಮ್ಮ ಸಹಪಾಠಿಗಳೊಂದಿಗೆ ಚರ್ಚಿಸಿದಾಗ ಮಾತ್ರ ವಿಷಯಗಳ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಬೆಳ್ತಂಗಡಿಯ ಪತ್ರಕರ್ತ ಭುವನೇಶ್ ಗೇರುಕಟ್ಟೆ ಅವರು ಹೇಳಿದರು.
ಭುವನೇಶ್ ಅವರು ಇತ್ತೀಚೆಗೆ ಉಜಿರೆಯ ಶ್ರೀ.ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವಿಧ್ಯಾರ್ಥಿವೇದಿಕೆ “ಅರ್ಥಾಂಕಣ”ದ ಆಶ್ರಯದಲ್ಲಿ ದಿನಪತ್ರಿಕೆಗಳಲ್ಲಿ ಬರುವ ಅರ್ಥಶಾಸ್ತ್ರಕ್ಕೆ ಸಂಬಂದಿಸಿದ ಅಂಕಣ ಲೇಖನಗಳ ಬಗ್ಗೆ ಚರ್ಚಿಸಲು ಸಂಘಟಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಅವರು ಮಾತನಾಡುತ್ತಾ “ಅರ್ಥಾಂಕಣ” ವಿಧ್ಯಾರ್ಥಿಗಳಲ್ಲಿ ಉತ್ತಮ ಹವ್ಯಾಸ ಹಾಗೂ ಪ್ರಯೊಗಶೀಲತೆಯ ಮನಸ್ಸನ್ನು ಬೆಳೆಸುವ ಉತ್ತಮ ವೇದಿಕೆ ಹಾಗೂ ಬೆಳವಣಿಗೆಗೆ ರಹದಾರಿ ಎಂದು ಶ್ಲಾಘಿಸಿದರು.

01.IMG_2354

ಮುಖ್ಯ ಅತಿಥಿಯಾಗಿ ಆಗಮಿಸಿದ ಪತ್ರಿಕೊದ್ಯಮ ವಿಭಾಗದ ಪ್ರಾಧ್ಯಾಪಕ ಸುನಿಲ್ ಹೆಗ್ಡೆ ಅವರು ಮಾತನಾಡುತ್ತಾ ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣ ಲೇಖನಗಳ ಬಗ್ಗೆ ಚಿಂತನೆ ಮಂಥನೆಗಳು ಅಗತ್ಯ ಕೌಶಲ್ಯ ಹಾಗೂ ಜ್ಞಾನದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಯಕುಮಾರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರಚಲಿತ ಆರ್ಥಿಕ ವಿದ್ಯಾಮಾನಗಳ ಬಗ್ಗೆ ಪ್ರಕಟವಾಗಿರುವ ಲೇಖನಗಳ ಮೇಲೆ ವಿಷಯಮಂಡನೆ ಹಾಗೂ ಚರ್ಚೆಗಳು ಆರ್ಥಶಾಸ್ತ್ರದ ವಿಷಯಗಳನ್ನು ಹಾಗೂ ಸವಾಲುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಕಾರಿ. ಈ ಪ್ರಯೋಗ ವಿಧ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದಲು ಪ್ರೇರೇಪಿಸುವುದರೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಎಂದು ಹೇಳಿದರು.

ಅರ್ಥಾಂಕಣ ವೇದಿಕೆಯ ಸಂಯೋಜಕರಾದ ಕಿರಣ್ ಕುಮಾರ್ ಹಾಗೂ ಇಸಾಕ್ ಸಂಯೋಜಿಸಿದ ಚರ್ಚೆ ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಧಿಸಿದ ಲೇಖನಗಳ ಬಗ್ಗೆ ನಿಧೀಶ್‍ರಾಜ್ ಹಾಗೂ ಸಂಪ್ರೀತಾ, ಪರಿಸರ ಸಂವರ್ಧನೆಗೆ ಸಂಬಧಿಸಿದ ಲೇಖನಗಳ ಬಗ್ಗೆ ಆದಿತ್ಯ ಹಾಗೂ ಗುರುರಾಜ್ ವಿಷಯಗಳನ್ನು ಮಂಡಿಸಿದರು. ಈ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಗಣರಾಜ್, ವಸಂತಿ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಶುಭಲಕ್ಷ್ಮಿ ಸ್ವಾಗತಿಸಿ ಕೊನೆಗೆ ಸ್ವಾತಿ ವಂದಿಸಿದರು.

Leave a Reply

Your email address will not be published. Required fields are marked *