Latest Newsರಾಜಕೀಯವಿಶೇಷ

ಎಕ್ಸಿಟ್ ಪೋಲ್‌ನಲ್ಲಿ ಚಿಂದಿ ಚಿತ್ರಾನ್ನವಾದ ಕಾಂಗ್ರೆಸ್

Share News

ದೇಶದಲ್ಲಿ ಲೋಕಸಭಾ ಚುನಾವಣೆಯ ಎಲ್ಲಾ 7 ಹಂತದ ಮತದಾನ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಎಕ್ಸಿಟ್ ಪೋಲ್ ವರದಿಗಳು ಬಹಿರಂಗವಾಗಿದೆ. ಮತದಾನೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಹೀನಾಯವಾಗಿ ಸೋಲುವ ಮುನ್ಸೂಚನೆ ಸಿಕ್ಕಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವ ಖಚಿತ ಭವಿಷ್ಯ ನುಡಿದಿದೆ. ಪ್ರಕಟಗೊಂಡ ಬಹುತೇಕ ಎಲ್ಲಾ ಸಮೀಕ್ಷೆಗಳು ಎನ್‌ಡಿಎ ಒಕ್ಕೂಟಕ್ಕೆ 350ಕ್ಕೂ ಹೆಚ್ಚು ಸ್ಥಾನ ನೀಡಿದ್ದು, ಇಂಡಿಯಾ ಮೈತ್ರಿಗೆ ಸರಾಸರಿ 150 ಸ್ಥಾನ ನೀಡಿದೆ.

ನೆಲಕಚ್ಚಿದ ಕಾಂಗ್ರೆಸ್

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಅವಮಾನಕಾರಿಯಾದ ಫಲಿತಾಂಶ ದಾಖಲಿಸುವ ಸೂಚನೆ ಲಭಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಹೇಳಿಕೊಳ್ಳುವ ಫಲಿತಾಂಶ ಬರೋದಿಲ್ಲ ಎಂಬುದನ್ನು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದೆ. ಕಾಂಗ್ರೆಸ್ ಈ ಬಾಇ ಕೇವಲ 6 ರಿಂದ 8 ಸ್ಥಾನಗಳನ್ನೇ ಗೆಲ್ಲಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದೆ. ಕರ್ನಾಟಕದ 28 ಸ್ಥಾನಗಳ ಪೈಕಿ ಬಿಜೆಪಿ-ಜೆಡಿಎಸ್ ಮತ್ರಿ 23 ರಿಂದ 25 ಸ್ಥಾನ ಗೆಲ್ಲಲಿದೆ ಎಂದಿದೆ. ಇದೇ ವೇಳ ಕಾಂಗ್ರೆಸ್ 3 ರಿಂದ 5 ಸ್ಥಾನ ಗೆಲ್ಲಿದೆ ಎಂದಿದೆ. ಇಂಡಿಯಾ ಟಿವಿ ಸಿಎನ್‌ಎಕ್ಸ್ ಪ್ರಕಾರ ಬಿಜೆಪಿ-ಜೆಡಿಎಸ್ ಮತ್ರಿ 19 ರಿಂದ 25 ಸ್ಥಾನ, ಕಾಂಗ್ರೆಸ್ 4 ರಿಂದ 8 ಸ್ಥಾನ ಎಂದಿದೆ. ಇನ್ನು ಟಿವಿ9 ಭರತವರ್ಶ್ ಪೋಲ್‌ಸ್ಟಾರ್ ಸಮೀಕ್ಷೆಯಲ್ಲಿ ಬಿಜೆಪಿ-ಜೆಡಿಎಸ್ ಮತ್ರಿ 20 ಸ್ಥಾನ ಹಾಗೂ ಕಾಂಗ್ರೆಸ್ 8 ಸ್ಥಾನ ಗೆಲ್ಲಲಿದೆ. ರಿಪ್ಲಬಿಕ್ ಟಿವಿ ಪಿ ಮಾರ್ಕ್ ಸಮೀಕ್ಷೆಯಲ್ಲಿ ಬಿಜೆಪಿ-ಜೆಡಿಎಸ್ ಮತ್ರಿ 22 ಸ್ಥಾನ ಹಾಗೂ ಕಾಂಗ್ರೆಸ್ 6 ಸ್ಥಾನ ಗೆಲ್ಲಲಿದೆ ಎಂದಿದೆ. ಬಹುತೇಕ ಸಮೀಕ್ಷೆಗಳ ಪ್ರಕಾರ ಕರ್ನಾಟದಲ್ಲಿ ಕಾಂಗ್ರೆಸ್ ಗರಿಷ್ಠ 8 ಸ್ಥಾನ ಎಂದಿದ್ದರೆ, ಬಿಜೆಪಿ ಜೆಡಿಎಸ್ ಮೈತ್ರಿ ಗರಿಷ್ಠ 20 ರಿಂದ 22 ಸ್ಥಾನ ಗೆಲ್ಲಲಿದೆ ಎಂದಿದೆ.

ಇಂಡಿಯಾ ನ್ಯೂಸ್ ಡೈನಾಮಿಕ್ಸ್ ಸಮೀಕ್ಷಾ ವರದಿ
ಎನ್‌ಡಿ: 371
ಇಂಡಿಯಾ ಮೈತ್ರಿ: 125
ಇತರರು: 47

ಜನ್ ಕಿ ಬಾತ್ ಸಮೀಕ್ಷಾ ವರದಿ
ಎನ್‌ಡಿಎ: 377
ಇಂಡಿಯಾ ಒಕ್ಕೂಟ: 151
ಇತರರು:15

ಎನ್‌ಡಿಟಿವಿ ಇಂಡಿಯಾ ಸಮೀಕ್ಷಾ ವರದಿ
ಎನ್‌ಡಿಎ: 365
ಇಂಡಿಯಾ ಒಕ್ಕೂಟ: 142
ಇತರರು: 36

ನ್ಯೂಸ್ ನೇಷನ್ ಸಮೀಕ್ಷಾ ವರದಿ
ಎನ್‌ಡಿಎ: 342-378
ಇಂಡಿಯಾ ಒಕ್ಕೂಟ: 153-169
ಇತರರು: 21-23

ರಿಪ್ಲಬಿಕ್ ಭಾರ್ ಮ್ಯಾಟ್ರಿಜ್ ಸಮೀಕ್ಷಾ ವರದಿ
ಎನ್‌ಡಿಎ: 353-368
ಇಂಡಿಯಾ ಒಕ್ಕೂಟ: 118-133
ಇತರರು: 43-48

ಪಿಮಾರ್ಕ್ ಸಮೀಕ್ಷಾ ವರದಿ
ಎನ್‌ಡಿಎ: 359
ಇಂಡಿಯಾ ಒಕ್ಕೂಟ: 154
ಇತರರು: 30

ಕೆಲ ರಾಜ್ಯದಲ್ಲಿ ಬಿಜೆಪಿ ಅಚ್ಚರಿ ನೀಡಲಿದೆ ಎಂದು ಚುನಾವಣಾ ಮತಗಟ್ಟೆ ಸಮೀಕ್ಷೆಗಳು ಹೇಳುತ್ತಿದೆ. ಪ್ರಮುಖವಾಗಿ ಪಶ್ಚಿಮ ಬಂಗಳಾದಲ್ಲಿ ಆಡಳಿತರೂಡ ತೃಣಮೂಲ ಕಾಂಗ್ರೆಸ್‌ಗೆ ಬಿಜೆಪಿ ಶಾಕ್ ನೀಡಲಿದೆ ಎಂದು 3 ಸಮೀಕ್ಷೆಗಳು ಹೇಳುತ್ತಿದೆ. ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ಬಿಜೆಪಿ 21 ರಿಂದ 26 ಸ್ಥಾನ ಗೆದ್ದರೆ, ಟಿಎಂಸಿ 16 ರಿಂದ 18 ಸ್ಥಾನಕ್ಕೆ ಕುಸಿಯಲಿದೆ ಎಂದಿದೆ. ಕಳೆದ ಚುನಾವಣೆಯಲ್ಲಿ ಟಿಎಂಸಿ 22 ಸ್ಥಾನ ಗೆದ್ದಿದ್ದರೆ, ಬಿಜೆಪಿ 18 ಸ್ಥಾನ ಗೆದ್ದುಕೊಂಡಿತ್ತು. ಡಿ ಡೈನಾಮಿಕ್ಸ್ ಸಮೀಕ್ಷೆ ಪ್ರಕಾರ ಬಿಜೆಪಿ 21 ಸ್ಥಾನ ಗೆಲ್ಲಲಿದೆ ಎಂದರೆ, ಟಿಎಂಸಿ 19 ಸ್ಥಾನ ಗೆಲ್ಲಲಿದೆ ಎಂದಿದೆ. ಇನ್ನು ಭಾರತ್ ಮ್ಯಾಟ್ರಿಸ್ ಸಮೀಕ್ಷೆ ಪ್ರಕಾರ ಬಿಜೆಪಿ 21 ರಿಂದ 25 ಸ್ಥಾನ ಹಾಗೂ ಟಿಎಂಸಿ 16 ರಿಂದ 20 ಸ್ಥಾನ ಗೆಲ್ಲಲಿದೆ ಎಂದಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿರುವುದನ್ನು ಎಕ್ಸಿಟ್ ಪೋಲ್‌ಗಳು ಸ್ಪಷ್ಟಪಡಿಸಿದೆ. ಈ ಬಾರಿ ಇಂಡಿ ಒಕ್ಕೂಟ ಅಧಿಕಾರಕ್ಕೇರಲಿದೆ ಎಂದು ಭಾರೀ ಆತ್ಮವಿಶ್ವಾಸದಿಂದ ನುಡಿಯುತ್ತಿದ್ದ ಕಾಂಗ್ರೆಸ್ ನಾಯಕರು ಈಗ ನಿರುತ್ತರರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button