Latest Newsರಾಜಕೀಯ

ಪೆಟ್ರೋಲ್ ಬೆಲೆ ಏರಿಕೆ, ಟ್ರೋಲ್‌ಗೊಳಗಾದ ಕಾಂಗ್ರೆಸ್ ನಾಯಕ

Share News

ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಸಿ ಆದೇಶ ಹೊರಡಿಸಿದೆ. ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಇಂಧನ ಬೆಲೆ ಏರಿಸುವ ಮೂಲಕ ಜನರ ಮೇಲಿನ ಕೋಪವನ್ನು ತಣಿಸಿಕೊಂಡಿದೆ. ಪೆಟ್ರೋಲ್ ಬೆಲೆಯನ್ನು 3 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು 3.50 ರೂಪಾಯಿಗಳಿಗೆ ಏರಿಸುವ ಮೂಲಕ ಬಡವರ ಮೇಲೆ ಬರೆ ಎಳೆದಿದೆ.

ಇಂಧನ ಬೆಲೆ ಏರಿಕೆ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಕ್ಷಿತ್ ಶಿವರಾಮ್ ಅವರು ಟ್ರೋಲ್‌ಗೆ ಒಳಗಾಗಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ರಕ್ಷಿತ್ ಶಿವರಾಮ್ ಅವರು ಈ ಹಿಂದೆ “ಬೇವಿನ ಮರದ ಎಣ್ಣೆಯಲ್ಲಿ ಬಸ್ ಚಲಾಯಿಸಬಹುದು” ಎಂದು ಹೇಳಿಕೆ ನೀಡಿದ್ದರು.

ಇದೀಗ ಈ ಹಳೆಯ ಹೇಳಿಕೆಯನ್ನು ಕೆದಕಿರುವ ಬಿಜೆಪಿ ಕಾರ್ಯಕರ್ತರು ರಕ್ಷಿತ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್ ಬೆಲೆ ಏರಿಕೆಗೆ ಭಯಪಡಬೇಕಿಲ್ಲ, ಬೇವಿನ ಮರದ ಎಣ್ಣೆಯಲ್ಲಿ ನಿಮ್ಮ ವಾಹನ ಚಲಾಯಿಸಿ ಎಂದು ಕಿಚಾಯಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪೆಟ್ರೋಲ್ ಡೀಸೆಲ್ ಚಿಂತೆ ಬಿಡಿ, ರಕ್ಷಿತ್ ಶಿವರಾಮ್ ಅವರಲ್ಲಿ ಬೇವಿನ ಎಣ್ಣೆ ಪಡೆದುಕೊಂಡು ನಿಮ್ಮ ವಾಹನ ಚಲಾಯಿಸಿ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಇಂಧನ ಬೆಲೆ ಏರಿಕೆಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದ್ದರೆ, ಕಾಂಗ್ರೆಸ್ ನಾಯಕರ ಬೂಟಾಟಿಕೆಯನ್ನು ಬಯಲು ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button