Latest Newsಕ್ರೀಡೆ
ಟೀಮ್ ಇಂಡಿಯಾಕ್ಕೆ ನೂತನ ಕೋಚ್, ಮಾಜಿ ಸಂಸದ ಈಗ ಕ್ರಿಕೆಟ್ ತರಬೇತುದಾರ
ಭಾರತ ಕ್ರಿಕೆಟ್ ತಂಡಕ್ಕೆ ಮಾಜಿ ಕ್ರಿಕೆಟ್ ಆಟಗಾರ ಅವರು ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಗೌತಮ್ ಗಂಭೀರ್ ಅವರು ಅಧಿಕೃತವಾಗಿ ರಾಹುಲ್ ದ್ರಾವಿಡ್ ಬದಲಿಗೆ ಭಾರತದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಟಿ-20 ವಿಶ್ವಕಪ್ ಗೆದ್ದ ಬಳಿಕ ರಾಹುಲ್ ದ್ರಾವಿಡ್ ಅವರು ಭಾರತದ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ವಿದಾಯ ಹೇಳಿದ್ದರು. ರಾಹುಲ್ ದ್ರಾವಿಡ್ ಜಾಗವನ್ನು ಗೌತಮ್ ಗಂಭೀರ್ ತುಂಬಲಿದ್ದಾರೆ.
ಗೌತಮ್ ಗಂಭೀರ್ ಮಾಜಿ ಕ್ರಿಕೆಟಿಗರಾಗಿದ್ದರು. ಅತ್ಯಂತ ಅನುಭವಿ ಆಟಗಾರರಾಗಿರುವ ಗೌತಮ್ ಗಂಭೀರ್ ಅವರು ಭಾರತಕ್ಕೆ ಅನೇಕ ಪಂದ್ಯಗಳನ್ನು ಜಯಿಸಿಕೊಟ್ಟಿದ್ದಾರೆ. ರಾಜಕಾರಣಿಯಾಗಿಯೂ ಗಂಭೀರ್ ಛಾಪು ಮೂಡಿಸಿದ್ದರು. ದೆಹಲಿಯ ಬಿಜೆಪಿ ಸಂಸದರಾಗಿ 5 ವರ್ಷ ಕಾರ್ಯನಿರ್ವಹಿಸಿ ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯಕ್ಕೆ ವಿದಾಯ ಹೇಳಿದ್ದರು.