ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದ ತಪ್ಪಿಗೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಲಿದೆ!!!
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ತನ್ನ ಖಜಾನೆಯನ್ನು ಉಳಿಸಲು ಅಡ್ಡದಾರಿ ಹಿಡಿದಿದೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡುಗಳನ್ನೇ ನಂಬಿಕೊಂಡು ಅದೆಷ್ಟೋ ಕುಟುಂಬಗಳು ಬದುಕುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಎಂದರೆ ಕೇವಲ ಪಡಿತರ ನೀಡುವ ಚೀಟಿಯಲ್ಲ, ಬದಲಾಗಿ ಬಿಪಿಎಲ್ ಕಾರ್ಡ್ ಅನೇಕ ಯೋಜನೆಗಳಿಗೆ ಮಾನದಂಡವೂ ಹೌದು.
ಬಿಪಿಎಲ್ ಕಾರ್ಡ್ ಒಂದಿದ್ದರೆ ಸಾಕು ಸರ್ಕಾರಿ ಸವಲತ್ತು, ಆರೋಗ್ಯ ವಿಮೆಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಪಡೆಯಬಹುದಾಗಿದೆ. ಆದರೆ ಈಗ ಕಾಂಗ್ರೆಸ್ ಸರ್ಕಾರ ವಾಮ ಮಾರ್ಗದಿಂದ ಬಿಪಿಎಲ್ ಕಾರ್ಡ್ ಕಸಿದುಕೊಳ್ಳುತ್ತಿರುವುದು ಬಡವರ ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಅನರ್ಹ ರೇಷನ್ ಕಾರ್ಡ್ಗಳನ್ನು ರದ್ದುಪಡಿಸುವ ಕಾರ್ಯಕ್ಕೆ ಆಹಾರ ಇಲಾಖೆಯು ವೇಗ ನೀಡಿದೆ. ಸರ್ಕಾರ 14 ಮಾನದಂಡಗಳನ್ನು ಮುಂದಿಟ್ಟುಕೊಂಡು ರೇಷನ್ ಕಾರ್ಡ್ ರದ್ದು ಮಾಡುತ್ತಿದೆ.
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತಲೂ ಹೆಚ್ಚಿರುವವರು, ವೈಟ್ ಬೋರ್ಡ್‌ನ ನಾಲ್ಕು ಚಕ್ರದ ವಾಹನ ಉಳ್ಳವರು, ಆದಾಯ ತೆರಿಗೆ ಪಾವತಿಸುವವರು, ಹಳ್ಳಿಯಲ್ಲಿ 3 ಹೆಕ್ಟೇರ್ ಒಣಭೂಮಿ, ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು, ನಗರ ಪ್ರದೇಶಗಳಲ್ಲಿ 1000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು ಹಾಗೂ ಸರ್ಕಾರಿ, ಅರೆಸರ್ಕಾರಿ ಉದ್ಯೋಗದಲ್ಲಿರುವವರು ಸೇರಿದಂತೆ 14 ಮಾನದಂಡಗಳನ್ನು ಮುಂದಿಟ್ಟುಕೊಂಡು ರೇಷನ್ ಕಾರ್ಡ್ ರದ್ದುಪಡಿಸುವ ಪ್ರಕ್ರಿಯೆಗೆ ಆಹಾರ ಇಲಾಖೆಯು ಮುಂದಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ತಪ್ಪಿಗೆ ಬಡವರು ಒಂದು ಸ್ವಂತ ಕಾರು ಹೊಂದಿರುವುದು ಅಪರಾಧವಾಗಿದೆ. ಎಷ್ಟೋ ಕಡೆ ಹಳ್ಳಿಗಳಲ್ಲಿ ಸಾರಿಗೆ ಸೇವೆ ಇಲ್ಲದ ಪ್ರದೇಶಗಳಲ್ಲಿ ತಮ್ಮ ಸ್ವಂತ ಉಪಯೋಗಕ್ಕಾಗಿ ಜೀಪ್, ಕಾರು ಹೊಂದಿರುತ್ತಾರೆ. ಅದು ಶ್ರೀಮಂತಿಕೆಯ ಲಕ್ಷಣವಲ್ಲ, ಅದು ಅನಿವಾರ್ಯತೆ. ಕಾಂಗ್ರೆಸ್ ಸರ್ಕಾರದ ಪ್ರಕಾರ ತುರ್ತು ಆರೋಗ್ಯ ಪರಿಸ್ಥಿತಿಯ ಸಂದರ್ಭದಲ್ಲಿ ಬೇಕಾದರೆ ನೀವು ಕಾಡಿನ ಮೂಲೆಯಲ್ಲಿ ನರಳಿಕೊಂಡಿರಿ, ನಾಲ್ಕು ಚಕ್ರದ ವಾಹನ ಮಾತ್ರ ಹೊಂದಿರಬಾರದು. ಹೊಂದಿದ್ದರೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದು.
ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದ ತಪ್ಪಿಗೆ ಈಗ ನಮ್ಮ ಬುಡಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್ ಪರ ಒಲವು ಹೊಂದಿರುವ ಬಡವರೊಬ್ಬರು ದುಃಖ ತೋಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ.