ವಿಶೇಷ

ಮೈಲುಗಲ್ಲುಗಳು ಕೇವಲ ದೂರವಷ್ಟೇ ಅಲ್ಲ, ಬೇರೆಯದನ್ನೇನೋ ಸೂಚಿಸುತ್ತವೆ. ಅದೇನು!? ತಿಳಿಯೋಣ ಬನ್ನಿ

Share News

ಇನ್ನೆಷ್ಟು ದೂರವಿದೆ, ಎಂದಾಗ ಪಕ್ಕದಲ್ಲೇ ನೆಟ್ಟಿದ್ದ ಮೈಲುಗಲ್ಲಿನ ಮೇಲೆ ಕಣ್ಣ ದೃಷ್ಟಿ ಹೋಯಿತು, 4 ಕಿಲೋ ಮೀಟರ್‌ ಅಷ್ಟೇ ಎಂಬ ಉತ್ತರ ಬಂತು. ಅರೇ ಈ ಮೈಲುಗಲ್ಲು ಇಷ್ಟಕ್ಕೇ ಇರೋದಾ ಎಂದುಕೊಳ್ಳಬೇಡಿ. ರಸ್ತೆ ಪಕ್ಕದಲ್ಲಿರುವ ಮೈಲುಗಲ್ಲುಗಳು ಕೇವಲ ದೂರ ಸೂಚಕಗಳು, ಮಾರ್ಗ ಸೂಚಕಗಳು ಎಂದಷ್ಟೇ ನಾವು ಪರಿಗಣಿಸಿದ್ದೇವೆ. ಆದರೆ ಆ ಮೈಲು ಕಲ್ಲುಗಳು ಇದಕ್ಕೂ ಮಿಕ್ಕಿದ ಮಾಹಿತಿ ನೀಡುತ್ತವೆ ಎಂದರೆ ನಾವು ನೀವು ನಂಬಲೇ ಬೇಕು.

ರಸ್ತೆ ಬದಿಯಲ್ಲಿರುವ ಮೈಲುಕಲ್ಲುಗಳು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಬಣ್ಣದಲ್ಲಿರುತ್ತದೆ. ಈ ಮೈಲುಗಲ್ಲುಗಳು ಹಸಿರು, ಹಳದಿ, ಕಪ್ಪು, ನೀಲಿ, ಕಿತ್ತಳೆ ಬಣ್ಣಗಳಲ್ಲಿ ಇರುತ್ತವೆ. ಬೇರೆ ಬೇರೆ ಬಣ್ಣಗಳ ಮೈಲುಗಲ್ಲುಗಳ ಪ್ರತಿ ಬಣ್ಣಗಳಲ್ಲೂ ಒಂದೊಂದು ವಿಷಯ ಅಡಕವಾಗಿದೆ. ಬಣ್ಣಗಳೂ ನಮಗೆ ಕೆಲವೊಂದು ಪ್ರಮಖ ವಿಚಾರಗಳನ್ನು ಸೂಚಿಸುತ್ತದೆ.

ಬಿಳಿ ಮತ್ತು ಹಳದಿ ಬಣ್ಣ


ಬಿಳಿ ಮತ್ತು ಹಳದಿ ಬಣ್ಣದಲ್ಲಿರುವ ಮೈಲಿಗಲ್ಲು ಆ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಎಂಬುದರ ಸಂಕೇತವಾಗಿದೆ. ಬಿಳಿ ಮತ್ತು ಹಳದಿ ಬಣ್ಣದ ಮೈಲಿಗಲ್ಲನ್ನು ಕೇವಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಬಳಸುತ್ತಾರೆ.

ಬಿಳಿ ಮತ್ತು ಹಸಿರು ಬಣ್ಣದ ಕಲ್ಲು

ರಸ್ತೆ ಬದಿಯ ಮೈಲಿಗಲ್ಲು ಹಸಿರು ಬಿಳಿ ಬಣ್ಣದಿಂದ ಕೂಡಿದ್ದರೆ ನೀವು ರಾಜ್ಯ ಹೆದ್ದಾರಿಯಲ್ಲಿದ್ದೀರಿ ಎಂದರ್ಥ.

ಬಿಳಿ-ನೀಲಿ-ಕಪ್ಪು ಬಣ್ಣ

ಗುರುತು ಪರಿಚಯವಿಲ್ಲದ ದೂರದೂರಿನ ರಸ್ತೆಯಲ್ಲಿ ಸಾಗುತ್ತಿರುವಾಗ ನಿಮ್ಮ ವಾಹನ ಯಾವ ಕಡೆ ಹೋಗುತ್ತಿದೆ ಎಂದು ತಿಳಿಯದಾದಾಗ ಬಿಳಿ ನೀಲಿ ಕಪ್ಪು ಬಣ್ಣದ ಮೈಲಿಗಲ್ಲು ಕಾಣಿಸಿಕೊಂಡರೆ ನೀವು ನಗರಕ್ಕೆ ಸಮೀಪದಲ್ಲಿದ್ದೀರಿ ಎಂದರ್ಥ. ಇದು ಜಿಲ್ಲಾಡಳಿತದ ಅಧೀನದಲ್ಲಿನ ರಸ್ತೆಯಾಗಿರುತ್ತದೆ.

ಕಿತ್ತಳೆ-ಬಿಳಿ ಬಣ್ಣದ ಮೈಲುಗಲ್ಲು


ರಸ್ತೆ ಬದಿಯ ಮೈಲಿಗಲ್ಲು ಕಿತ್ತಳೆ ಮತ್ತು ಬಿಳಿ ಬಣ್ಣದಿಂದ ಕೂಡಿದ್ದರೆ ಆ ರಸ್ತೆ ಪ್ರಧಾನಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗಿದೆ ಎಂದು ತಿಳಿದುಕೊಳ್ಳಬೇಕು ಅರ್ಥಾತ್‌ ನಾವು ಹಳ್ಳಿ ಪ್ರದೇಶದ ಕಡೆ ಪ್ರಯಾಣಿಸುತ್ತಿದ್ದೇವೆ ಎಂಬುದನ್ನು ಮನಗಾಣಬೇಕು.

One Comment

Leave a Reply

Your email address will not be published. Required fields are marked *

Back to top button