ಎಲ್ಲಾ ಡಿಪಾರ್ಟ್ಮೆಂಟ್‌ಗಳೂ ರಕ್ಷಿತ್ ಶಿವರಾಮ್ ಕೈಯಲ್ಲಂತೆ ; ಇವನು ಯಾರು ಪಡ್ಪೋಸಿ ಎಂದ ಬಿಜೆಪಿ ಕಾರ್ಯಕರ್ತರು!!!
ಬೆಳ್ತಂಗಡಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಎನ್ಎಸ್‌ಯುಐ ಪದಾಧಿಕಾರಿಗಳ ಸಭೆಯಲ್ಲಿ ಎನ್ಎಸ್ಐಯು ಪದಾಧಿಕಾರಿಯೊಬ್ಬ ಬೆಂಗಳೂರು ಮಲ್ಲೇಶ್ವರಂ ಮೂಲದ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರನ್ನು ಹಾಡಿ ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾನೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈಗ ಕಾಂಗ್ರೆಸ್ ಸರ್ಕಾರವಿದೆ. ತಾಲ್ಲೂಕಿನ ಎಲ್ಲಾ ಇಲಾಖೆಗಳು ರಕ್ಷಿತ್ ಶಿವರಾಮ್ ಅವರ ಕಂಟ್ರೋಲ್‌ನಲ್ಲಿದೆ. ನಾವು ಯಾವುದಕ್ಕೂ ಭಯ ಪಡುವ ಅಗತ್ಯವಿಲ್ಲ ಎಂದು ಭಾಷಣದಲ್ಲಿ ಅಬ್ಬರಿಸುತ್ತಾನೆ.
ಈತನ ಭಾಷಣದ ತುಣುಕು ವೈರಲ್ ಆಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಇವರಿಬ್ಬರನ್ನು ಟೀಕಿಸುತ್ತಾ ಟ್ರೊಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಸಾಂವಿಧಾನಿಕ ಜವಾಬ್ದಾರಿ ಇಲ್ಲದ ಪಡಪೋಸಿಯೊಬ್ಬನ ಕಪಿಮುಷ್ಠಿಯಲ್ಲಿ ಸರ್ಕಾರಿ ಇಲಾಖೆಗಳಿವೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ವಾಟ್ಸ್ಯಾಪ್, ಫೇಸ್ಬುಕ್ ಪೋಸ್ಟ್‌ಗಳಲ್ಲಿ “ಎಲ್ಲಾ ಡಿಪಾರ್ಟ್‌ಮೆಂಟ್ ರಕ್ಷಿತ್ ಶಿವರಾಮ್ ಕೈಯಲ್ಲಿದೆ ಅಂತೆ, ಸಹಾಯ ಮಾಡಲು ರೌಡಿ ತಿಮ್ಮನ ಮಗ ತನುಷ್ ಇದ್ದಾನಂತೆ. ಕಾಂಗ್ರೆಸ್ ಸರ್ಕಾರ ಇದೆ ಯಾರೂ ಹೆದರಬಾರದಂತೆ. ಎನ್‌ಎಸ್‌ಯುಐ ಪಡ್ಪೋಸಿಯೊಬ್ಬನ ಮಾತುಗಳು ಇದು. ಅಲ್ಲಾ ಮಾರ್ರೆ ಒಬ್ಬ ಕಾಂಗ್ರೆಸ್ ಪದಾಧಿಕಾರಿಯ ಕಂಟ್ರೋಲಿನಲ್ಲಿ ಸರ್ಕಾರಿ ಇಲಾಖೆಗಳು ಇರೋದಾದ್ರೆ ಸಂವಿಧಾನ, ಕಾನೂನು ಎಲ್ಲಾ ಬೇಕಾ? ಇಲ್ಲಿನ ಪೊಲೀಸ್ ಇಲಾಖೆ, ತಹಶೀಲ್ದಾರ್, ನ್ಯಾಯಾಧೀಶರು, ಅಧಿಕಾರಿ ವರ್ಗ ಎಲ್ಲಾ ಈ ಮಂದಬುದ್ಧಿಯ ಕಕ್ಕೆ ರಕ್ಷಿತ್ ಶಿವರಾಮನ ಕಂಟ್ರೋಲ್‌ನಲ್ಲಿದ್ದಾರೆ ಎಂದರೆ ಏನರ್ಥ? ಎಂದು ಬಿಜೆಪಿ ಕಾರ್ಯಕರ್ತರು ಬರೆದುಕೊಂಡು ಶೇರ್ ಬಟನ್ ಒತ್ತುತ್ತಿದ್ದಾರೆ.
ಒಟ್ಟಿನಲ್ಲಿ ರಕ್ಷಿತ್ ಶಿವರಾಮ್ ಅವರನ್ನು ಹೊಗಳುವ ಭರದಲ್ಲಿ ಜನರ ಟೀಕೆ ಎದುರಿಸುವಂತೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸೌಜನ್ಯ ಪರವಾಗಿ ಗುರುತಿಸಿಕೊಂಡಿದ್ದ ತನುಷ್ ಶೆಟ್ಟಿ ಕೂಡಾ ಉಪಸ್ಥಿತನಾಗಿದ್ದು ಪೇಮೆಂಟ್ ಹೋರಾಟಗಾರ ಎಂದು ಬಿಜೆಪಿ ಕಾರ್ಯಕರ್ತರು ಜರೆದಿದ್ದಾರೆ.