ಸಂಜೀವ ಪೂಜಾರಿ ವಿರುದ್ಧ ಧ್ವನಿ ಎತ್ತದ ಬಿಲ್ಲವ ನಾಯಕರ ವಿರುದ್ಧ ಬಿಲ್ಲವ ಸಮಾಜದ ಆಕ್ರೋಶ
ಬಿಲ್ಲವ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಪಂಜ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ರೋಶ ಮಡುಗಟ್ಟಿದೆ. ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುವ ಕರೆ ನೀಡಿದ್ದ ಹಿಂದೂ ಸಂಘಟನೆಗಳು ಇಂದು ಸರ್ಕಾರಿ ಅಧಿಕಾರಿಯ ರೂಪದಲ್ಲಿರುವ ಧರ್ಮಾಂಧನನ್ನು ಬಂಧಿಸುವಂತೆ ಆಗ್ರಹಿಸಿದವು. ಇದರ ಬೆನ್ನಲ್ಲೇ ಬೆಳ್ಳಾರೆ ಪೊಲೀಸರು ಆರೋಪಿ ಅಧಿಕಾರಿ ಸಂಜೀವ ಪೂಜಾರಿಯನ್ನು ಬಂಧಿಸಿದ್ದಾರೆ.
ಬಿಲ್ಲವ ಸಮಾಜದ ಒಂದು ಲಕ್ಷ ಯುವತಿಯರು ವೇಶ್ಯೆಯರು, ಇದಕ್ಕೆ ತನ್ನಲ್ಲಿ ಹತ್ತು ಸಾವಿರದಷ್ಟು ದಾಖಲೆ ಇದೆ ಎಂದು ಹೇಳಿದ್ದ ಸಂಜೀವ ಪೂಜಾರಿಯವರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳು, ಬಿಜೆಪಿ ಈ ಲಫಂಗನ ವಿರುದ್ಧ ಕಿಡಿ ಕಾರಿದ್ದವು. ಆದರೆ ಎಷ್ಟು ಅವಮಾನಕಾರಿಯಾಗಿ ಬಿಲ್ಲವ ಸಮುದಾಯದ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದಾಗಲೂ ರಾಜಕೀಯ ನಾಯಕರು, ಬಿಲ್ಲವ ಮುಖಂಡರು ಇದುವರೆಗೆ ಈತನ ವಿರುದ್ಧ ಧ್ವನಿ ಎತ್ತದೇ ಇರುವುದರಿಂದ ಬಿಲ್ಲವ ಸಮಾಜದ ಯುವಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚುನಾವಣೆಯ ವೇಳೆ ಬಿಲ್ಲವ ಮತಗಳನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದ ರಕ್ಷಿತ್ ಶಿವರಾಮ್, ಸತ್ಯಜಿತ್ ಸುರತ್ಕಲ್, ಬಿಕೆ ಹರಿಪ್ರಸಾದ್ ಸೇರಿದಂತೆ ಯಾವೊಬ್ಬ ನಾಯಕನೂ ಕೂಡಾ ಬಿಲ್ಲವ ಯುವತಿಯರ ಮೇಲಿನ ಮಾನಹಾನಿಕರ ಹೇಳಿಕೆಯನ್ನು ಕನಿಷ್ಟ ಖಂಡಿಸಲೂ ಇಲ್ಲ.
ಕಾಂಗ್ರೆಸ್ ನಾಯಕರೊಂದಿಗೆ, ಬಿಲ್ಲವ ಮುಖಂಡರೊಂದಿಗೆ ಆರೋಪಿ ಸಂಜೀವ ಪೂಜಾರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ನಾಯಕರ ವಿರುದ್ಧ ಬಿಲ್ಲವ ಯುವಕರು ಕಿಡಿ ಕಾರುತ್ತಿದ್ದಾರೆ. ಬಿಲ್ಲವರ ಸ್ವಾಭಿಮಾನದ ಬಗ್ಗೆ ಚುನಾವಣೆಯ ವೇಳೆ ಪುಂಖಾನುಪುಂಖವಾಗಿ ಬೊಗಳೆ ಬಿಡುತ್ತಿದ್ದ ರಕ್ಷಿತ್ ಶಿವರಾಮ್, ಸತ್ಯಜಿತ್ ಸುರತ್ಕಲ್, ಪದ್ಮರಾಜ್, ಬಿಕೆ ಹರಿಪ್ರಸಾದ್ ಈಗೇಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.
ಚುನಾವಣೆ ಬಂದಾಗ ಹಳದಿ ಶಾಲು ಹಾಕಿಕೊಂಡು “ಜಾತಿ ಅಪ್ಪೆ ಮಗೆ, ಒಂಜಿ ಓಟು ಪಾಡ್ಲೆ” ಎಂದು ಭಿಕ್ಷೆ ಬೇಡುವ ಮಹಾನ್ ಬಿಲ್ಲವ ಓಲಾಟಗಾರರು ಎಲ್ಲಿದ್ದೀರಿ? ಟ್ಯಾಬ್ಲೋ ವಿಚಾರ, ಪಠ್ಯದ ವಿಚಾರ ಬಂದಾಗ ಬಿಜೆಪಿಯ ಬಂಟ ಶಾಸಕರು ಇದ್ದಲ್ಲೆಲ್ಲಾ ಹೋಗಿ ಗುಮ್ಮುತ್ತಿದ್ದ ಹಳದಿ ಶಾಲು ಪ್ರಿಯರು ಎಲ್ಲಿದ್ದೀರಯ್ಯಾ ಎಂದು ಸುನಿಲ್ ಪಣಪಿಲ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಕುಟುಕಿದ್ದಾರೆ.