ಆತ ಭ್ರಷ್ಟಾಚಾರದ ಕೂಸು ಎಂದು ಹರೀಶ್ ಪೂಂಜ ಆರೋಪಿಸಿದ ಕೆಲವೇ ದಿನಗಳಲ್ಲಿ ಸಿಕ್ಕಿಬಿದ್ದರಾ ರಕ್ಷಿತ್ ಶಿವರಾಮ್?
ಕಾಂಗ್ರೆಸ್ ಜಾರಿಗೊಳಿಸಿರುವ ಗ್ಯಾರಂಟಿಗಳ ಬಗ್ಗೆ ನಿಗಾ ವಹಿಸಲು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರವನ್ನು ಕಾಂಗ್ರೆಸ್ ಸರ್ಕಾರ ರಚಿಸಿದೆ. ಅದರಂತೆ ಬೆಳ್ತಂಗಡಿಯಲ್ಲೂ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಯಾಗಿದೆ. ಈ ಸಮಿತಿಗೆ ಸರ್ಕಾರದ ವತಿಯಿಂದ ಕಚೇರಿ ನೀಡಲಾಗಿದ್ದು, ಈ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಸಾಲ್ಯಾನ್ ಆರೋಪಿಸಿದ್ದಾರೆ.
ಬೆಳ್ತಂಗಡಿಯ ರಾಜಕಾರಣದಲ್ಲಿ ಈಗ ಬಿರುಸಿನ ವಾತಾವರಣವಿದೆ. ಆರೋಪ ಪ್ರತ್ಯಾರೋಪಗಳು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಅಪರೂಪ ಎಂಬಂತಿದ್ದ ವಾತಾವರಣ ಈಗ ದಿಢೀರ್ ಬದಲಾಗಿದೆ. ಬಂಗೇರರ ಅಕಾಲಿಕ ಮರಣದ ನಂತರ ಅಗ್ರೆಸ್ಸಿವ್ ರಾಜಕಾರಣ ಮಾಡಲು ಹೊರಟ ರಕ್ಷಿತ್ ಶಿವರಾಮ್ ಅವರಿಗೆ ಈಗ ಹಿನ್ನಡೆಯಾಗುವ ಸುದ್ದಿಯೊಂದು ಹೊರಬಂದಿದೆ.
ಕಾಂಗ್ರೆಸ್ ಜಾರಿಗೊಳಿಸಿರುವ ಗ್ಯಾರಂಟಿಗಳ ಬಗ್ಗೆ ನಿಗಾ ವಹಿಸಲು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರವನ್ನು ಕಾಂಗ್ರೆಸ್ ಸರ್ಕಾರ ರಚಿಸಿದೆ. ಅದರಂತೆ ಬೆಳ್ತಂಗಡಿಯಲ್ಲೂ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಯಾಗಿದೆ. ಈ ಸಮಿತಿಗೆ ಸರ್ಕಾರದ ವತಿಯಿಂದ ಕಚೇರಿ ನೀಡಲಾಗಿದ್ದು, ಈ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಸಾಲ್ಯಾನ್ ಆರೋಪಿಸಿದ್ದಾರೆ.
ಮಂಜುನಾಥ್ ಸಾಲ್ಯಾನ್ ಅವರು ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರಿ ಕಾರ್ಯಕ್ರಮದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳ ಎದುರು ತೆರೆದಿಟ್ಟಿದ್ದಾರೆ. ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಗ್ಯಾರಂಟಿ ಸಮಾವೇಶ ನಡೆದಿದ್ದು, ಈ ಸಭಾಭವನದಲ್ಲಿ ಅತೀ ಹೆಚ್ಚು ಅಂದರೆ 2000 ಜನ ಸೇರಬಹುದು. ಆದರೆ ಅಂದು ಧನ್ಯವಾದ ಸಲ್ಲಿಸುವಾಗ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ 3200 ಜನ ಉಪಸ್ಥಿತರಿದ್ದರು ಎಂದು ಅಧಿಕೃತವಾಗಿ ತಿಳಿಸಿದ್ದರು. ಈ ಕಾರ್ಯಕ್ರಮಕ್ಕೆ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಿಂದ 5000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
2000 ಸಾವಿರ ಜನ ಸಾಮರ್ಥ್ಯದ ಸಭಾಂಗಣದಲ್ಲಿ 3200 ಜನ ಸೇರಿದರು ಎಂಬುವುದನ್ನಾದರೂ ಒಪ್ಪಬಹುದು. ಆದರೆ 5000 ಜನರಿಗೆ ದೇವಸ್ಥಾನದ ವತಿಯಿಂದ ಊಟದ ವ್ಯವಸ್ಥೆ ಆಗಿದ್ದರೂ ಊಟೋಪಚಾರದ ನಿಮಿತ್ತ ಬೇರೆ ಬೇರೆ ರೀತಿಯ ಬಿಲ್ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರೇ ನಡೆಸಿದ ಸರ್ಕಾರಿ ಕಾರ್ಯಕ್ರಮಕ್ಕೆ ಒಟ್ಟು 70,040 ಖರ್ಚು ಮಾಡಲಾಗಿದ್ದು, ಸೌತಡ್ಕ ದೇವಸ್ಥಾನದಿಂದ ಊಟದ ವ್ಯವಸ್ಥೆ ಆಗಿರುವಾಗ ಇಲ್ಲಿ ದಿನಸಿ ಸಾಮಾಗ್ರಿ, ವಿಶೇಷ ಊಟದ ಏರ್ಪಾಡು ಇದೆಲ್ಲದರ ಅಗತ್ಯವೇನಿತ್ತು ಎಂದು ತಾಲ್ಲೂಕಿನ ಜನತೆ ಪ್ರಶ್ನಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ 2 ಎಲ್ಇಡಿ ಪರದೆ ಅಳವಡಿಸಿದ್ದರೂ, 5 ಎಲ್ಇಡಿ ಪರದೆಗಳ ಬಿಲ್ ಮಾಡಲಾಗಿದೆ. ಎಲ್ಲಾ ಬಿಲ್ಗಳೂ ಕೂಡಾ ಒಂದೇ ಕೈ ಬರಹದಲ್ಲಿರುವುದು ಇನ್ನಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಕಾರ್ಯಕ್ರಮಕ್ಕೆ 25 ಸರಕಾರಿ ಬಸ್ಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದರೂ, ಖಾಸಗಿ ಶಾಲೆಗಳ ಬಸ್ ಬಾಡಿಗೆ ಪಡೆದಿದ್ದೇವೆ ಎಂದು ಬಿಲ್ ಪಡೆದುಕೊಂಡಿದ್ದಾರೆ.
ತಾಲೂಕು ಮಟ್ಟದಲ್ಲಿ ನಡೆದಿರುವ ಈ ಭ್ರಷ್ಟಾರದ ಹಿಂದೆ ತಾಲ್ಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರ ಕೈವಾಡ ಇರುವುದಾಗಿ ಜನರು ಶಂಕಿಸುತ್ತಿದ್ದಾರೆ. ಕೇವಲ ಅಧಿಕಾರಿಗಳು ಅಥವಾ ತಾಲ್ಲೂಕು ಕಾಂಗ್ರೆಸ್ ಪದಾಧಿಕಾರಿಗಳು ಈ ಮಟ್ಟದ ಭ್ರಷ್ಟಾಚಾರ ನಡೆಸವುದು ಅಸಾಧ್ಯ, ಇವುಗಳ ಹಿಂದೆ ಪ್ರಭಾವಿಗಳು ಇದ್ದಾರೆ ಎಂಬು ಆರೋಪ ಕೇಳಿಬರುತ್ತಿದ್ದು, ಜನರು ರಕ್ಷಿತ್ ಶಿವರಾಂ ಅವರತ್ತ ಬೊಟ್ಟು ಮಾಡುತ್ತಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದ ರಕ್ಷಿತ್ ಶಿವರಾಮ್ ಈಗ ತಾನೇ ಭ್ರಷ್ಟಾಚಾರದ ಬಲೆಯಲ್ಲಿ ಸಿಲುಕಿರುವುದು ರಾಜಕೀಯ ಸಂಚಲನ ಸೃಷ್ಟಿಸಿದೆ. ತನ್ನ ಮೇಲಿನ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಹರೀಶ್ ಪೂಂಜ ಅವರು ತಾಲ್ಲೂಕಿನ ಶಕ್ತಿದೇವತೆ ಸಂತೆಕಟ್ಟೆ ಮಾರಿಗುಡಿ ಮಾರಿಯಮ್ಮನ ಸನ್ನಿಧಿಯಲ್ಲಿ ಪ್ರಾರ್ಥಿಸಿ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದರು ಮತ್ತು ಸುಳ್ಳು ಆರೋಪ ಮಾಡಿದವರನ್ನು ಶಿಕ್ಷಿಸು ಎಂದು ಪ್ರಾರ್ಥಿಸಿದ್ದರು. ಪ್ರಾರ್ಥನೆ ನಡೆಸಿ ತಿಂಗಳು ಕಳೆಯುವ ಮೊದಲೇ ರಕ್ಷಿತ್ ಶಿವರಾಮ್ ವಿರುದ್ಧ ಆರೋಪ ಕೇಳಿ ಬಂದಿದ್ದು, ಜನರು ಶಾಸಕರ ಪ್ರಾರ್ಥನೆ ಮತ್ತು ಈ ಘಟನೆಗೆ ಸಂಬಂಧ ಕಲ್ಪಿಸುತ್ತಿದ್ದಾರೆ.
ಅದೇನೇ ಆಗಿರಲಿ, ಸರ್ಕಾರದ ದುಡ್ಡನ್ನು, ಜನರ ತೆರಿಗೆಯ ಹಣವನ್ನು ಸುಳ್ಳು ಬಿಲ್ಗಳ ಮೂಲಕ ಲಪಟಾಯಿಸಿದ ಭ್ರಷ್ಟಾಚಾರಿಗಳನ್ನು ಕಾನೂನಿನ ಕಟಕಟೆಗೆ ತಂದು ಶಿಕ್ಷಿಸಬೇಕೆಂಬುದು ನ್ಯೂಸ್ ನಿರಂತರದ ಕಳಕಳಿಯಾಗಿದೆ.c