ರಾಮಸೇತು ನಕ್ಷೆ ಸಿದ್ಧ, ಶುರುವಾಯಿತು ಕಾಂಗ್ರೆಸ್ ನಾಯಕರಿಗೆ ಚಳಿ ಜ್ವರ!!!
ಸಮುದ್ರದಾಳದಲ್ಲಿ ಹುದುಗಿರುವ, ಭಾರತೀಯರ ನಂಬಿಕೆಗಳಲ್ಲಿ ಬೆಸೆದು ಹೋದ ರಾಮಸೇತುವಿನ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅತ್ಯಂತ ಮಹತ್ವದ ಸಂಶೋಧನೆಯನ್ನು ನಡೆಸಿದೆ. ಅಮೆರಿಕದ ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ಇಸ್ರೋ ರಾಮಸೇತುವೆಯ ಅತ್ಯಂತ ವಿವರವಾದ ನಕ್ಷೆ ರಚಿಸಿದೆ.
ಭಾರತ ಮತ್ತು ಶ್ರೀಲಂಕಾ ನಡುವೆ ಇರುವ ರಾಮ ಸೇತುವಿನ ಕುರಿತು ದೀರ್ಘಕಾಲದ ಕೌತುಕಗಳನ್ನು ಈ ನಕ್ಷೆ ಪರಿಹರಿಸಲಿದೆ ಎನ್ನಲಾಗುತ್ತಿದೆ. 29 ಕಿ.ಮೀ. ಉದ್ದದ ಸೇತುವೆಯ ಸಮುದ್ರದಾಳದ ನಕ್ಷೆಯನ್ನು ಇಸ್ರೋ ನಿಖರವಾಗಿ ಸಿದ್ಧಪಡಿಸಿದೆ. ಉಪಗ್ರಹ ICESat-2 ದತ್ತಾಂಶಗಳನ್ನು ಬಳಸಿಕೊಂಡು ನಕ್ಷೆ ಸಿದ್ಧಪಡಿಸಲಾಗಿದೆ. ರಾಮಸೇತು ಮತ್ತು ಅದರ ಉಗಮದ ಬಗ್ಗೆ ಇನ್ನಷ್ಟು ತಿಳಿಯಲು ಇದು ನೆರವಾಗಲಿದೆ’ ಎಂದು ಇಸ್ರೊ ವಿಜ್ಞಾನಿಗಳು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ನಿಶ್ಚಿತ
ರಾಮಸೇತುವಿನ ನಕ್ಷೆಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ ಎಂದು ನೀವು ಊಹಿಸುತ್ತಿರಬಹುದು. ಎಸ್, ರಾಮಸೇತುವಿಗೂ ಕಾಂಗ್ರೆಸ್ ಪಕ್ಷಕ್ಕೂ ಒಂದು ಸಂಬಂಧವಿದೆ. ಕಾಂಗ್ರೆಸ್ ಪಕ್ಷ ರಾಮಸೇತುವನ್ನೇ ಕಾಲ್ಪನಿಕ ಎಂದಿತ್ತು. ಯುಪಿಎ ಸರ್ಕಾರದ ಸಂದರ್ಭದಲ್ಲಿ ರಾಮಸೇತು ಅಸ್ಥಿತ್ವದ ಬಗ್ಗೆ ಸಾಕಷ್ಟು ವಾದವಿವಾದಗಳು ನಡೆದಿದ್ದವು. ರಾಮ ಸೇತುವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ರಾಮ ಸೇತುವನ್ನು ರಾಮ ಕಟ್ಟಿದ ಸೇತುವೆ ಎನ್ನಲು ಪುರಾವೆಯೂ ಇಲ್ಲ ಎಂದು ಯುಪಿಎ ಸರ್ಕಾರ ಹೇಳಿತ್ತು.
ಇದೀಗ ಇಸ್ರೋ ಬಿಡುಗಡೆಗೊಳಿಸಿದ ನಕ್ಷೆ ಕಾಂಗ್ರೆಸ್ ಪಕ್ಷದೊಳಗೆ ಸಂಚಲನ ಸೃಷ್ಟಿಸಿದೆ. ಇದುವರೆಗೆ ತಾವು ಸುಳ್ಳು ಎನ್ನುತ್ತಿದ್ದ ರಾಮ ಸೇತುವನ್ನು ವೈಜ್ಞಾನಿಕ ದಾಖಲೆಗಳ ಮೂಲಕ ಇಸ್ರೋ ಸಂಸ್ಥೆ ರಾಮಸೇತುವಿನ ಅಸ್ತಿತ್ವವನ್ನು ತೋರಿಸಿದೆ. ಇದು ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ಮಾಡುವುದು ನಿಶ್ಚಿತವಾಗಿದೆ.