ಪರಶುರಾಮ ಮೂರ್ತಿ ನಿರ್ಮಿಸಿದ ಕಲಾವಿದನ ಮೇಲೆ ಕಾಂಗ್ರೆಸ್ ಪ್ರಾಯೋಜಿತ ಹಲ್ಲೆ
ಕಾರ್ಕಳ ತಾಲ್ಲೂಕಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕ್ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಪರಶುರಾಮನ ಮೂರ್ತಿ ಈಗ ರಾಜಕೀಯದ ಕೇಂದ್ರವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಶುರಾಮ ಮೂರ್ತಿಯ ಗೊಂದಲದ ಬೆಂಕಿಗೆ ತುಪ್ಪ ಸುರಿದ ಬಳಿಕ ಈಗ ಮತ್ತೊಂದು ಹಂತಕ್ಕೆ ತಲುಪಿದೆ.
ಕಲಾವಿದನ ಮೇಲೆ ಕಾಂಗ್ರೆಸ್ ನಾಯಕರಿಂದ ದೌರ್ಜನ್ಯ
ಪರಶುರಾಮ ಮೂರ್ತಿ ನಿರ್ಮಾಣ ಮಾಡುತ್ತಿರುವ ಕೃಷ್ಣ ನಾಯ್ಕ್ ಅವರು ತನ್ನ ಮೇಲೆ ಪೊಲೀಸರು ಹಾಗೂ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಸೇರಿಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ ಎಂಬ ಫೇಸ್ಬುಕ್ ಲೈವ್ ಮೂಲಕ ತಮ್ಮ ಆತಂಕ ಶೇರ್ ಮಾಡಿಕೊಂಡಿದ್ದಾರೆ.
ಕೃಷ್ಣ ನಾಯ್ಕ್ ಅವರ ಮೂರ್ತಿ ನಿರ್ಮಾಣದ ಶೆಡ್‌ಗೆ ತೆರಳಿದ ಪೊಲೀಸರು ಕೃಷ್ಣ ನಾಯ್ಕ್ ಅವರು ಮಾಡಿದ್ದ ಕೆಲವೊಂದು ಕಲಾಕೃತಿಗಳಿಗೆ ಹಾನಿ ಮಾಡಿ ದೌರ್ಜನ್ಯ ಎಸಗಿದ್ದಾರೆ. ಕಾಂಗ್ರೆಸ್ ನಾಯಕನೊಬ್ಬ ಪೊಲೀಸರೊಂದಿಗೆ ತೆರಳಿ ಕಲಾವಿದನ ಮೇಲೆ ದೌರ್ಜನ್ಯ ಎಸಗಿ ಕಾಂಗ್ರೆಸ್ ನಾಯಕರ ಆರೋಪವನ್ನು ಒಪ್ಪಿಕೊಳ್ಳುವಂತೆ ಬೆದರಿಕೆ ಒಡ್ಡಿದ್ದಾರೆ ಎಂದು ಸ್ವತಃ ಕೃಷ್ಣ ನಾಯ್ಕ್ ಹೇಳಿದ್ದಾರೆ.
ಸುನೀಲ್ ಕುಮಾರ್ ಸಿಲುಕಿಸಲು ಕಲಾವಿದನ ಮೇಲೆ ಹಲ್ಲೆ?
ರಾಜಕೀಯ ನಡೆಗಳು ಏನೇ ಇದ್ದರೂ ಅದು ರಾಜಕಾರಣಿಗಳ ನಡುವೆ ನಡೆಯಬೇಕೇ ಹೊರತು ಈ ರೀತಿ ಮೂರ್ತಿ ನಿರ್ಮಿಸಿದ ಕಲಾವಿದನ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್ ನಾಯಕರ ಆರೋಪವನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿ ಮಾಜಿ ಸಚಿವ ಸುನೀಲ್ ಕುಮಾರ್ ಅವರನ್ನು ಸಿಲುಕಿಸಲು ಕಾಂಗ್ರೆಸ್ ಷಡ್ಯಂತ್ರ ರೂಪಿಸುತ್ತಿರುವುದು ಕಣ್ಣಿಗೆ ರಾಚುತ್ತಿದೆ.
ದೌರ್ಜನ್ಯಕ್ಕೆ ಒಳಗಾದ ಕಲಾವಿದ ಈ ಬಗ್ಗೆ ಎಸ್‌ಪಿ, ಡಿಸಿಗೆ ದೂರು ನೀಡಿ ಧರಣಿ ಕೂರುವುದಾಗಿ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಮೂರ್ತಿ ಕೆತ್ತನೆಯ ಕಲಾವಿದರು, ಕುಶಲ ಕರ್ಮಿಗಳು ಈ ದೌರ್ಜನ್ಯದ ವಿರುದ್ಧ ಬೃಹತ್ ಮಟ್ಟದಲ್ಲಿ ಧ್ವನಿ ಎತ್ತುವ ಸೂಚನೆ ನೀಡಿದ್ದಾರೆ. ಇದು ಸರ್ಕಾರಕ್ಕೆ ಕಗ್ಗಂಟಾಗುವುದು ನಿಶ್ಚಿತವಾಗಿದೆ