Latest Newsರಾಜಕೀಯ

ನೋಟಾ ಪರವಾದ ಮುಖವಾಡ ಹಾಕಿದ್ದ ಕಾಂಗ್ರೆಸ್‌ ಕಾರ್ಯಕರ್ತನ ಅಸಲಿಯತ್ತು ಬಯಲು

Share News

ಲೋಕಸಭಾ ಚುನಾವಣೆ (Loksbha Election) ಕಳೆದು ಹಲವು ತಿಂಗಳುಗಳಾಗಿವೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ (BJP) ಜಯಭೇರಿ ಬಾರಿಸಿಯೂ ಆಗಿದೆ. ಈ ಬಾರಿ ಶತಾಯಗತಾಯ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಟೊಂಕಕಟ್ಟಿ ನಿಂತಿದ್ದ ಕಾಂಗ್ರೆಸ್ಸಿಗೆ ಸೌಜನ್ಯ ಹೋರಾಟಗಾರರು (Sowjanya) ಬಲ ತುಂಬಿದ್ದರು. ನೋಟಾ ಮತದಾನ (NOTA) ಮಾಡುವಂತೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಹೋರಾಟವನ್ನೇ ಮಹೇಶ್‌ ಶೆಟ್ಟಿ ತಿಮರೋಡಿ (Mahesh Shetty Thimarody) ಗ್ಯಾಂಗ್‌ ನಡೆಸಿತ್ತು. ಅದನ್ನು ಜಿಲ್ಲೆಯ ಜನತೆ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎನ್ನುವುದು ಬೇರ ವಿಚಾರ. ಇದೇ ಹೋರಾಟದಲ್ಲಿ ಸೌಜನ್ಯ ಪರವಾದ ಮುಖವಾಡ ಹಾಕಿದ್ದ ಕಾಂಗ್ರೆಸ್‌ (Congress) ಕಾರ್ಯಕರ್ತನ ಮುಖವಾಡ ಬಯಲಾಗಿದೆ.

ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸಲೇಬೇಕೆಂದು ಪಣತೊಟ್ಟಿದ್ದ ತಿಮರೋಡಿಯ ಗ್ಯಾಂಗಲ್ಲಿ ಆತನ ಅಣ್ಣನ ಮಗ ತನುಷ್‌ ಶೆಟ್ಟಿಯೂ (Tanush Shetty) ಸೇರಿಕೊಂಡಿದ್ದ. ನ್ಯೂಟ್ರಲ್ ಮತದಾರರನ್ನು, ಬಿಜೆಪಿ ಪರ ಒಲವಿರುವವರ ನಡುವೆ ಸೌಜನ್ಯ ಪರವಾದ ಅನುಕಂಪ ಸೃಷ್ಟಿಸಿ ಭಾವನಾತ್ಮಕವಾಗಿ ವಂಚಿಸುವ ಷಡ್ಯಂತ್ರ ಹೆಣೆದಿದ್ದ ತಿಮರೋಡಿ ಬಣ ಜಿಲ್ಲೆಯ ಹಲವಾರು ಕಡೆ ಪ್ರಚಾರ ಸಭೆ ನಡೆಸಿ ನೋಟಾಕ್ಕೆ ಮತ ಹಾಕುವಂತೆ ಬೊಬ್ಬೆ ಹಾಕಿದ್ದರು. ಈ ಸಭೆಗಳಲ್ಲಿ, ಪ್ರಚಾರ ಕಾರ್ಯದಲ್ಲಿ, ನೋಟಾ ಪರವಾದ ಕ್ಯಾಂಪೇನ್‌ನಲ್ಲಿ (Campaign) ತನುಷ್‌ ಶೆಟ್ಟಿಯೂ ಸಕ್ರಿಯವಾಗಿದ್ದು.

ಹೇಳಿಕೇಳಿ ತನುಷ್‌ ಶೆಟ್ಟಿ ಮೂಲತಃ ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದರೂ ಸೌಜನ್ಯ ಪರವಾದ ಮುಖವಾಡ ಹಾಕಿ ಜನರನ್ನು ವಂಚಿಸಿದ್ದ. ಒಳಗಿಂದೊಳಗೆ ಕಾಂಗ್ರೆಸ್‌ ಅಭ್ಯರ್ಥಿಗೆ (Congress candidate) ಮತಹಾಕುವಂತೆ ಜನರಿಗೆ ಹೇಳುತ್ತಿದ್ದರೂ ಹೊರ ಪ್ರಪಂಚಕ್ಕೆ ತಾನು ನೋಟಾ ಹೋರಾಟಗಾರ, ತಾನು ನೋಟಾಕ್ಕೆ ಮತ ಒತ್ತುವುದು ಎಂದೆಲ್ಲ ಪುಂಗಿ ಬಿಡುತ್ತಿದ್ದ.

ಇದೀಗ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಕಾಂಗ್ರೆಸ್‌ ನಾಯಕನೊಂದಿಗೆ ತನುಷ್‌ ಶೆಟ್ಟಿ ವೇದಿಕೆ ಹಂಚಿಕೊಳ್ಳುವ ಮೂಲಕ ತಾನು ಲೋಕಸಭಾ ಚುನಾವಣೆಯಲ್ಲಿ ಜನರನ್ನು ವಂಚಿಸಿದ್ದನ್ನು ಬಹಿರಂಗಗೊಳಿಸಿದ್ದಾನೆ. ಸಭೆಯಲ್ಲಿ ಎನ್‌ಎಸ್‌ಯುಐ  (NSUI) ಕಾರ್ಯಕರ್ತನೊಬ್ಬ ನಮ್ಮದೇ ಕಾಂಗ್ರೆಸ್‌ ಸರ್ಕಾರವಿದೆ. ಎಲ್ಲ ಡಿಪಾರ್ಟ್‌ಮೆಂಟ್‌ ಕೂಡಾ ಯುವನಾಯಕ ರಕ್ಷಿತರ್‌ ಶಿವರಾಮ್‌ ಕೈಯಲ್ಲಿದೆ, ಧೈರ್ಯದಿಂದಿರಿ ಎಂದೆಲ್ಲಾ ಬೊಗಳೆ ಬಿಟ್ಟದ್ದಾನೆ. ಇದನ್ನು ಪ್ರಶ್ನಿಸುತ್ತಿರುವ ಜನತೆ ಸರ್ಕಾರ ಬಂದು ಇಷ್ಟು ಸಮಯವಾದರೂ ಎಲ್ಲಾ ಇಲಾಖೆಗಳ ನಿಯಂತ್ರಣ ಹೊಂದಿರುವ ಇವರು ಸೌಜನ್ಯಳ ಪರವಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button