ರಕ್ಷಿತ್ ಶಿವರಾಮ್ ವಿರುದ್ಧ ತಿರುಗಿಬಿದ್ದ ಮೂಲ ಕಾಂಗ್ರೆಸ್ ಕಾರ್ಯಕರ್ತರು, ರಾಜಕೀಯ ಅಸ್ತಿತ್ವ ಸ್ಥಾಪಿಸುವರೇ ಬಂಗೇರರ ಪುತ್ರಿ?
ಲೋಕಸಭಾ ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಮಹತ್ತರ ಸುದ್ದಿಗಳು ಹೊರಬರುತ್ತಿದೆ. ಗೆದ್ದವರದ್ದು ಒಂದು ಸಂಭ್ರಮದ ಕಥೆಯಾದರೆ, ಸೋತವರದ್ದು ಇನ್ನೊಂದು ಮತ್ತೊಂದು ಎನ್ನುವ ವ್ಯಥೆ. ಸೋಲಿಗೆ ಹೊಣೆಗಾರರನ್ನು ಹುಡುಕುವ ಕೆಲಸವಾಗುತ್ತಿದೆ. ದೆಹಲಿಯಲ್ಲಿ (Dellhi) ಅಧಿಕಾರದ ಗದ್ದುಗೆ ಏರಲು ಸರ್ಕಸ್ ನಡೆಯುತ್ತಿದೆ.
ಬೆಳ್ತಂಗಡಿ (Belthangady) ವಿಧಾನಸಭಾ ಕ್ಷೇತ್ರದಿಂದ ಇದೀಗ ಬಿಸಿಬಿಸಿ ಸುದ್ದಿ ಕೇಳಿ ಬರುತ್ತಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿಯಲ್ಲಿ ನೆಲೆಯೂರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ರಕ್ಷಿತ್ ಶಿವರಾಮ್ ವಿರುದ್ಧ ಸ್ವಪಕ್ಷೀಯರೇ ತಿರುಗಿ ಬಿದ್ದಿರುವ ಸುದ್ದಿ ಹೊರಬಿದ್ದಿದೆ. ದಿವಂಗತ ವಸಂತ ಬಂಗೇರರು (Vasantha bangera) ನಿಷ್ಕ್ರಿಯರಾಗಿದ್ದ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಮುನ್ನಡೆಸಿದ್ದು ರಕ್ಷಿತ್ ಶಿವರಾಮ್ (Rakshith Shivaram) ಎಂಬ ಎಳಸು ರಾಜಕಾರಣಿ. ಲೋಕಸಭೆಯ ಫಲಿತಾಂಶ ರಕ್ಷಿತ್ ಶಿವರಾಮ್ ವೈಫಲ್ಯವನ್ನು ಜಗಜ್ಜಾಹೀರುಗೊಳಿಸಿದೆ.
ಶತಾಯಗತಾಯ ಮುನ್ನಡೆ ಒದಗಿಸಲೇ ಬೇಕು ಎಂದು ಹಠಕ್ಕೆ ಬಿದ್ದಿದ್ದ ರಕ್ಷಿತ್ ಶಿವರಾಮ್ ಬಣಕ್ಕೆ ಈಗ ನಿರಾಸೆಯಾಗಿದೆ. ಜಾತಿ ರಾಜಕಾರಣಕ್ಕೆ ಜೋತು ಬಿದ್ದು ಜಾತಿಯ ವಿಷಬೀಜ ಬಿತ್ತಿಯಾದರೂ ಲೀಡ್ ಒದಗಿಸುತ್ತೇನೆ ಎಂದು ಹಠಕ್ಕೆ ಬಿದ್ದಿದ್ದ ರಕ್ಷಿತ್ ಶಿವರಾಮ್ ಅವರಿಗೆ ನಿರಾಸೆಯಾಗಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಹರೀಶ್ ಪೂಂಜ (Harish Poonja) ಹವಾದೆದುರು ರಕ್ಷಿತ್ ಶಿವರಾಮ್ ಮತ್ತೊಮ್ಮೆ ಮಂಡಿಯೂರಿದ್ದಾರೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ (Brijesh Chowta) ಅವರಿಗೆ 23,307 ಮತಗಳ ಮುನ್ನಡೆ ಒದಗಿಸುವಲ್ಲಿ ಪೂಂಜಾ ಸಫಲರಾಗಿದ್ದು, ರಕ್ಷಿತ್ ಶಿವರಾಮ್ ತೀವ್ರ ಮುಖಭಂಗ ಎದುಸಿದ್ದಾರೆ.
ಈ ಸುದ್ದಿ ಹೊರಬರುತ್ತಿದ್ದಂತೆ ರಕ್ಷಿತ್ ಶಿವರಾಮ್ ವಿರುದ್ಧ ಬೆಳ್ತಂಗಡಿ ಕಾಂಗ್ರೆಸ್ಸಿನ ಮೂಲ ಮತ್ತು ಹಿರಿಯ ನಾಯಕರು ಮುಗಿಬಿದ್ದಿದ್ದು, ರಕ್ಷಿತ್ ಶಿವರಾಮ್ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ.
ದಿವಂಗತ ವಸಂತ ಬಂಗೇರರ ಪುತ್ರಿಗೆ ರಾಜಕೀಯ ಸ್ಥಾನಮಾನ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿರುವ ನಡುವೆಯೇ ಬೆಂಗಳೂರಿನ ಮಲ್ಲೇಶ್ವರಂ (Malleshwaram) ನಿಂದ ಬೆಳ್ತಂಗಡಿಗೆ ಆಗಮಿಸಿ ಬೆಳ್ತಂಗಡಿಯಲ್ಲಿ ರಾಜಕಾರಣ ಮಾಡುತ್ತಿರುವ ರಕ್ಷಿತ್ ಶಿವರಾಮ್ ಅವರ ವಿಫಲತೆಯು ಹೆಚ್ಚು ಮಹತ್ವ ಪಡೆದಿದೆ. ರಕ್ಷಿತ್ ಶಿವರಾಮ್ ಅವರ ವಿಫಲತೆಯನ್ನು ಮುಂದಿಟ್ಟುಕೊಂಡು ಬಂಗೇರರ ಪುತ್ರಿ ಬೆಳ್ತಂಗಡಿ ರಾಜಕಾರಣದಲ್ಲಿ ಅಸ್ತಿತ್ವ ಸಾಧಿಸುವ ಎಲ್ಲಾ ಲಕ್ಷಣಗಳು ದಟ್ಟವಾಗಿದೆ, ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನವು ರಕ್ಷಿತ್ ಶಿವರಾಮ್ ಅವರಿಗೆ ಮುಳ್ಳಾಗಿ ಕಾಡುವುದು ನಿಶ್ಚಿತವಾಗಿದೆ.