ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳ ಸಾಧನೆ ಶೂನ್ಯ, ಹರೀಶ್ ಪೂಂಜ ಆರೋಪ
ಪುಂಜಾಲಕಟ್ಟೆ ಮತ್ತು ಚಾರ್ಮಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ (Harish Poonja) ಹಾಗೂ ಕ್ಯಾಪ್ಟನ್ ಬ್ರಿಜೇಶ್ ಚೌಟ (Brijesh Chowta) ಅವರು ಟೆಂಡರ್ ಪಡೆದುಕೊಂಡಿದ್ದ ಡಿಪಿ ಜೈನ್ (DP Jain) ಕಂಪನಿಯ ಪ್ರಮುಖರೊಂದಿಗೆ, ಅಧಿಕಾರಿಗಳೊಂದಿಗೆ ಸಂವಹನ ನಡೆಸಿ ಜಿಲ್ಲೆಯ ಹೆಸರಾಂತ ಸಂಸ್ಥೆ ಎಂಸಿಕೆ (MCK )ಸಂಸ್ಥೆಗೆ ಉಪಗುತ್ತಿಗೆಯಾಗಿ ನೀಡಲಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರ (Congress Leaders) ರಸ್ತೆ ರಾಜಕೀಯದ ಬಗ್ಗೆ ಹರಿಹಾಯ್ದ ಶಾಸಕರು, ರಸ್ತೆ ವಿಚಾರದ ಕುರಿತು ಸಾರ್ವಜನಿಕರನ್ನು ಪ್ರಚೋದಿಸುತ್ತಿರುವ, ಜನರನ್ನು ಬಿಜೆಪಿ ನಾಯಕರ ವಿರುದ್ಧ ಎತ್ತಿಕಟ್ಟುವ ಕಾಂಗ್ರೆಸ್ ನಾಯಕರ ಪ್ರಯತ್ನಗಳು ತಾತ್ಕಾಲಿಕ,ನಾವು ಅಭಿವೃದ್ಧಿಯ ಮೂಲಕ ಶಾಶ್ವತ ಉತ್ತರ ನೀಡುತ್ತೇವೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ವಾತಾವರಣದ (Weather) ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರದ ಕಾರಣ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗುತ್ತಿಗೆದಾರರು ವಿಫರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಗುವುದರಿಂದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಇಡೀ ವರ್ಷಕ್ಕೆ ಸಮನಾಗುವ ಕಾಮಗಾರಿ ನಡೆಸುವ ಒತ್ತಡಕ್ಕೆ ಸಿಲುಕಿ, ಒತ್ತಡ ತಡೆದುಕೊಳ್ಳಲಾರದೆ ಸೋಲುತ್ತಿದ್ದಾರೆ.
ಈಗ ಹೆದ್ದಾರಿ ಬಗ್ಗೆ ಭಾರೀ ಕಾಳಜಿ ತೋರುತ್ತಿರುವ ಕಾಂಗ್ರೆಸ್ ನಾಯಕರು ಒಂದು ತಿಳಿದುಕೊಳ್ಳಬೇಕು, ಜಿಲ್ಲೆಯ ಹೆದ್ದಾರಿಗಳು ಅಭಿವೃದ್ಧಿಯಾಗಿದ್ದೇ ಬಿಜೆಪಿ ಸಂಸದರ ((BJP MP) ಅವಧಿಯಲ್ಲಿ. ಕಾಂಗ್ರೆಸ್ ಸಂಸದರು, ಶಾಸಕರ ಅವಧಿಯಲ್ಲಿ ಜಿಲ್ಲೆಯ ಹೆದ್ದಾರಿಗಳು ದುಸ್ಥಿತಿಯಲ್ಲಿದ್ದವು, ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿಯ ಬಗ್ಗೆ ಚಿಂತೆಯಿಲ್ಲ, ಅವರಿಗೆ ರಾಜಕೀಯದ್ದೇ ಚಿಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಕಾಮಗಾರಿಯ ಬಗ್ಗೆ ಫೇಸ್‌ಬುಕ್‌ನಲ್ಲಿ, ಬೆಳ್ತಂಗಡಿ ತಾಲೂಕಿನ ಮುಖ್ಯ ರಸ್ತೆ ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ (Charmady-Punjalakatte) ಕಾಮಗಾರಿಯು ಮಳೆ ಹಾಗು ಅನೇಕ ಕಾರಣಗಳಿಂದ ನಿಧಾನವಾಗಿ ಸಾಗಿದ ಪರಿಣಾಮ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಮನಗೊಂಡು ಇದನ್ನು ಬಗೆಹರಿಸಲು ಸಂಸದರ ಜೊತೆಸೇರಿ ಎರಡು ತಿಂಗಳುಗಳಿಂದ ನಿರಂತರ ಸಭೆಗಳನ್ನು ನಡೆಸಿದ ಬಳಿಕ ಇದೀಗ ರಾಷ್ಟ್ರೀಯ ಹೆದ್ದಾರಿಯ ಬ್ಯಾಕ್ ಟು ಬ್ಯಾಕ್ ಮಾದರಿಯ ಅಡಿಯಲ್ಲಿ ಕಾಮಗಾರಿಯನ್ನು ಗುತ್ತಿಗೆದಾರರಾದ ಡಿ.ಪಿ ಜೈನ್ ಅವರಿಂದ ಮುಗ್ರೋಡಿ ಕನ್ಸ್ಟ್ರಕ್ಷನ್ ಕಾವೂರು ಇವರಿಗೆ ವಹಿಸಲಾಗಿದ್ದು ಬೆಳ್ತಂಗಡಿಯ ಕಾಶಿಬೆಟ್ಟುವಿನಲ್ಲಿ ಕಾಮಗಾರಿಯ ಪರಿಶೀಲನೆ ನಡೆಸಲಾಯಿತು” ಎಂದು ಶಾಸಕ ಹರೀಶ್ ಪೂಂಜ ಅವರುಮಾಹಿತಿ ನೀಡಿದ್ದಾರೆ.