ದೈವ ನಂಬಿಕೆ ಅವಮಾನದ ವಿರುದ್ಧ ಸಿಡಿದೆದ್ದ ತುಳುವರು
ತುಳುನಾಡಿನ ಶ್ರೇಷ್ಠ ಪರಂಪರೆಯಾಗಿರುವ ದೈವಾರಾಧನೆಯಲ್ಲಾಗುತ್ತಿರುವ (Daivaradhane) ಅನಗತ್ಯ ಬದಲಾವಣೆ, ದೈವ ನಂಬಿಕೆಗಳ ಅವಹೇಳನ, ಸಿನೇಮಾ ನಾಟಕಗಳಲ್ಲಿ ದೈವಗಳ ಪ್ರದರ್ಶನದ ವಿರುದ್ಧ ತುಳುನಾಡ ದೈವರಾಧನೆ ಸಂರಕ್ಷಣಾ ವೇದಿಕೆ (ರಿ) ಮಂಗಳೂರು ಇವರು ಮಂಗಳೂರಿನ (Mangalore) ಕಾವೂರು ಸಹಕಾರಿ ಸದನದಲ್ಲಿ ದೈವರಾಧನೆಗೆ ಒಂಜಿ ದಿನ – ನಂಬಿಕೆ ಒರಿಪಾಗ (Nambike Oripaga) ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹಿಂದೂ ಮುಖಂಡರು, ದೈವ ನರ್ತಕರು, ಮಧ್ಯಸ್ಥರು, ಚಿಂತಕರು ಭಾಗಿಯಾಗಿ ದೈವಾರಾಧನಾ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ, ಅದನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಿದರು.
ಸಿನೇಮಾ (Kantara), ನಾಟಕ (Shivadoota Guliga), ಯಕ್ಷಗಾನಗಳಲ್ಲಿ ದೈವಗಳನ್ನು ಪ್ರದರ್ಶಿಸುವುದರಿಂದ ದೈವ ನಂಬಿಕೆಗೆ ಅವಮಾನವಾಗುತ್ತಿದೆ ಎಂದು ದೂರಿದ ದೈವ ಭಕ್ತರು ಸಿನೇಮಾ ನಾಟಕಗಳಲ್ಲಿ ದೈವದ ಕಥೆಗಳನ್ನು ಮಾಡಲೇ ಬೇಕೆಂದಿದ್ದರೆ ದೈವಗಳನ್ನು ಯಥಾವತ್ತಾಗಿ ತೋರಿಸದೆ, ಸಾಂಕೇತಿಕವಾಗಿ ತೋರಿಸುವಂತೆ ಆಗ್ರಹಿಸಿದರು ಮತ್ತು ಟ್ಯಾಬ್ಲೋ (Tablow), ಶಾಲಾ ಕಾರ್ಯಕ್ರಮಗಳಲ್ಲಿ ದೈವಗಳನ್ನು ಪ್ರದರ್ಶನದ ವಸ್ತು, ಸಾಂಸ್ಕೃತಿಕ ಕಾರ್ಯಕ್ರಮವಾಗಿ ತೋರಿಸುವುದನ್ನು ನಿಲ್ಲಿಸಿ ಎಂದು ಒತ್ತಾಯಿಸಿದರು.
ಪೊಸತ್ ತೋಡಡೆ, ಪರತ್ ನಿಗಿಪಡೆ ಎಂಬ ದೈವ ನುಡಿಯಂತೆ ಕಾರ್ಯಕ್ರಮಕ್ಕೆ ಬಂದವರಿಂದ ಪೊಸತೆನ್ ತೋಡುಜಾ, ಪರತೆನ್ ನಿಗಿಪುಜಾ ಎಂಬ ವಾಗ್ದಾನದ ರೂಪದಲ್ಲಿ ಸಹಿ ಸಂಗ್ರಹ (Signature Campaign) ಮಾಡಲಾಗಿದ್ದು, ಆಗಮಿಸಿದವರು ಮೆಚ್ಚುಗೆ ಸೂಚಿಸಿದರು.
ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ನಿರ್ಧಾರವನ್ನು ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ ಕೈಗೊಂಡಿದ್ದು, ಹಿಂದೂ ಸಂಘಟನೆಗಳ ಪ್ರಮುಖರಾದ ಶರಣ್ ಪಂಪ್ವೆಲ್ (Sharan Pompwell), ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಸಂಘಟನೆಯ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿಗಳು ಹಾಗೂ ಹಿಂದೂ ಸಂಘಟನೆಯ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್ವೆಲ್, ಹಿರಿಯ ದೈವ ನರ್ತಕರಾದ ಲೋಕಯ್ಯ ಸೇರಾ, ಚಂದು ನಲಿಕೆ, ಎನ್‌ಕೆ ಸಾಲಿಯಾನ್, ಮಧ್ಯಸ್ಥರಾದ ಮನ್ಮಥ ಶೆಟ್ಟಿ ಪುತ್ತೂರು, ಶಾಸಕರಾದ ವೇದವ್ಯಾಸ್ ಕಾಮತ್, ಮುಂಬೈಯ ಚಂದ್ರಕಾಂತ್ ಶೆಟ್ಟಿ ಬೆರ್ಮೊಟ್ಟು, ಖ್ಯಾತ ವಕೀಲರಾದ ಸಹನಾ ಕುಂದರ್ ಸೂಡಾ, ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಯಾನಂದ್ ಕತ್ತಲ್ಸಾರ್, ಸಾಂಸ್ಕೃತಿಕ ವಿಮರ್ಶಕರಾದ ತಮ್ಮಣ್ಣ ಶೆಟ್ಟಿ, ತುಳುನಾಡ ದೈವರಾಧನೆ ಸಂರಕ್ಷಣಾ ವೇದಿಕೆ ಇದರ ಗೌರವಾಧ್ಯಕ್ಷರಾದ ದಿಲ್‌ರಾಜ್ ಆಳ್ವ, ಅಧ್ಯಕ್ಷರಾದ ಭರತ್ ಬಳ್ಳಾಲ್‌ಭಾಗ್, ಕಾರ್ಯಕ್ರಮದ ಸಂಯೋಜಕರಾದ ಧನುಷ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು