Latest News

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಅಂದರ್, ನಿಷೇಧದ ತೂಗುಗತ್ತಿಯಲ್ಲಿ ಮತಾಂಧ ರಾಜಕೀಯ ಪಕ್ಷ!

Share News

ದೇಶದಲ್ಲಿ ಮತಾಂಧತೆಯನ್ನು ಬಿತ್ತುವ ರಾಜಕೀಯ ಪಕ್ಷದ ರೂಪದಲ್ಲಿದ್ದ ಎಸ್‌ಡಿಪಿಐ ಎಂಬ ನರ ರಾಕ್ಷಸರ ಕೂಪದ ನಾಯಕನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಇದರ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿಯನ್ನು ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಬಂಧಿಸಲಾಗಿದೆ. ವಿದೇಶಕ್ಕೆ ಪಲಾಯನ ಮಾಡಿ, ಭೂಗತನಾಗುವ ಉಪಾಯ ಮಾಡಿದ್ದ ಬೆನ್ನಲ್ಲೇ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾನೆ.

ಹಣಕಾಸು ವಂಚನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜಕೀಯ ಅಂಗಸಂಸ್ಥೆಯಾಗಿರುವ ಎಸ್‌ಡಿಪಿಐ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಇಡಿ ಮತ್ತು ಎಎನ್‌ಐ ತನಿಖೆ ಎದುರಿಸುತ್ತಿದೆ.

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷನನ್ನು ಬಂಧಿಸಿದ ಬೆನ್ನಲ್ಲೇ ಎಸ್‌ಡಿಪಿಐ ನಿಷೇಧಿಸಲು ದೇಶದ ಜನರು ಒತ್ತಾಯಿಸಿದ್ದಾರೆ. ಹವಾಲಾ ಪ್ರಕರಣಗಳಲ್ಲಿ ಎಸ್‌ಡಿಪಿಐ ತೊಡಗಿಸಿಕೊಂಡಿರುವುದು ಸಾಬೀತಾದಲ್ಲಿ ಪಕ್ಷವನ್ನೇ ನಿಷೇಧಿಸುವ ತೀರ್ಮಾನ ಮೋದಿ ಸರ್ಕಾರದಿಂದ ಹೊರಬಿದ್ದರೂ ಅಚ್ಚರಿಯಿಲ್ಲ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.

Related Articles

Leave a Reply

Your email address will not be published. Required fields are marked *

Back to top button