ಯೂ-ಟ್ಯೂಬ್ ದಂಧೆಕೋರರಿಗೆ ‘ಲಕ್ಷ್ಮಿ’ ಯಾದ ಧರ್ಮಸ್ಥಳದ ಸೌಜನ್ಯ, ಭಯಾನಕ ಸತ್ಯದ ಅನಾವರಣ!!!

ಓದುಗ ಮಿತ್ರರೇ, ಕಳೆದ ಹಲವಾರು ವರ್ಷಗಳಿಂದ ಕರಾವಳಿ ಭಾಗದಲ್ಲಿ ಸದ್ದು ಮಾಡುತ್ತಿದ್ದ ಧರ್ಮಸ್ಥಳ ಸೌಜನ್ಯ ಪ್ರಕರಣ ಈಗ ತನ್ನ ವ್ಯಾಪ್ತಿ ಹಿಗ್ಗಿಸಿಕೊಂಡು ರಾಜ್ಯವನ್ನು ವ್ಯಾಪಿಸಿದೆ. ಮೊತ್ತ ಮೊದಲನೆಯದಾಗಿ ಮುಗ್ಧೆ ಸೌಜನ್ಯಳ ಆತ್ಮಕ್ಕೆ ಶಾಂತಿ ಕೋರುತ್ತಾ, ಮರೀಚೀಕೆ ಎನಿಸಿರುವ ನ್ಯಾಯ ಪುನಃಸ್ಥಾಪನೆಗೊಂಡು ನ್ಯಾಯ ಸಿಗಲಿ ಎಂಬುದು ನಮ್ಮ ಪ್ರಾರ್ಥನೆ.
ಸೌಜನ್ಯ, ಹೌದು ಈ ಹೆಸರು ಇತ್ತೀಚೆಗಿನ ದಿನಮಾನದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಸೌಜನ್ಯಳಿಗೆ ನ್ಯಾಯ ಕೊಡಿಸುತ್ತೇವೆ ಎಂದು ಹೋರಾಟದ ಮುಂಚೂಣಿಗೆ ಬಂದವರು ಸೌಜನ್ಯ ಪ್ರಕರಣವನ್ನು ಜೀವಂತವಾಗಿ ಇಟ್ಟರೇ ವಿನಃ ನ್ಯಾಯ ಕೊಡಿಸಲಿಲ್ಲ. ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಹಣ ಸಂಪಾದನೆಯ ದಾರಿ ಹುಡುಕಿದರೆ ವಿನಃ ಸೌಜ್ಯನ್ಯಳ ಆತ್ಮಕ್ಕೆ ಮುಕ್ತಿ ಸಿಗಲಿಲ್ಲ.
ಸೌಜನ್ಯ ಪ್ರಕರಣ ಹಲವಾರು ಮಜಲುಗಳನ್ನು ದಾಟಿದೆ. ನ್ಯಾಯ ವ್ಯವಸ್ಥೆಯ ಉನ್ನತ ಹಂತವನ್ನೂ ದಾಟಿ ಬಂದಿದೆ. ಆದರೂ ತಾರ್ಕಿಕ ಅಂತ್ಯ ಕಾಣಲಿಲ್ಲ, ಏಕೆ ಗೊತ್ತೇ!? ಆಕೆಯ ಮನೆಯವರ ನಿಲುವುಗಳು ಮತ್ತು ಹೋರಾಟಗಾರರ ಒತ್ತಡಗಳೇ ಸೌಜನ್ಯಗಳಿಗೆ ನ್ಯಾಯ ಮರಿಚೀಕೆಯಾಗುವಂತೆ ಮಾಡಿದ್ದು. ವಾಸ್ತವದಲ್ಲಿ ಸೌಜನ್ಯ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಧರ್ಮದೈವ ಅಣ್ಣಪ್ಪ ಪಂಜುರ್ಲಿ 24 ಗಂಟೆಯ ಒಳಗಾಗಿ ಬಂಧಿಸುವಂತೆ ಮಾಡಿದ್ದಾರೆ. ಆದರೆ ದುಡ್ಡು, ಅಂತಸ್ತು, ತೇಜೋವಧೆ ಇದರ ಹಿಂದೆ ಬಿದ್ದ ಸೌಜನ್ಯ ಕುಟುಂಬ ಹೋರಾಟಗಾರರ ತಾಳಕ್ಕೆ ತಕ್ಕಂತೆ ಕುಣಿಯಿತು. ಹೋರಾಟಗಾರರ ಹಿಂದೆ ದೊಡ್ಡ ದೊಡ್ಡ ಶಕ್ತಿಗಳು ತೆರೆಮರೆಯಲ್ಲಿ ಆಟವಾಡತೊಡಗಿದರು, ಕಾರಣ ಅದು ಧರ್ಮಸ್ಥಳ, ಹಿಂದೂ ಧಾರ್ಮಿಕ ಸ್ಥಳ.
ಅದೆಲ್ಲಾ ಪಕ್ಕಕ್ಕಿಟ್ಟು ಯೂ-ಟ್ಯೂಬ್ ದಂಧೆಕೋರರ ಬಗ್ಗೆ ಮಾತನಾಡೋಣ. ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಿ ಹಾಕುವ ಯೂ-ಟ್ಯೂಬ್ ಚಾನೆಲ್ ಮತ್ತು ಆ ವಿಡಿಯೋಗಳತ್ತ ಒಮ್ಮೆ ಕಣ್ಣಾಡಿಸಿ, ಬಹುತೇಕ ವಿಡಿಯೋಗಳು ಲಕ್ಷಗಟ್ಟಲೆ ವೀವ್ಸ್ ಆಗಿರುತ್ತದೆ ಇದರ ಹಿಂದೆ ಹಿಡನ್ ಅಜೆಂಡಾ ಮತ್ತು ವ್ಯವಸ್ಥಿತವಾದ ಸಂಚು ಇದೆ. ಬಹುತೇಕ ಯೂ-ಟ್ಯೂಬ್ ಚಾನೆಲ್ ಗಳಿಗೆ ಸೌಜನ್ಯ ಪ್ರಕರಣ ಸಬ್‌ಸ್ಕ್ರೈಬರ್ ಜಾಸ್ತಿ ಮಾಡಿಕೊಳ್ಳುವ, ವೀವ್ಸ್ ಮೂಲಕಹಣ ಗಳಿಸುವ ವಿಷಯವಾಗಿದೆ. ಕರ್ನಾಟಕದ ಪ್ರಮುಖ ಯೂ-ಟ್ಯೂಬ್ ಚಾನೆಲ್‌ಗಳಲ್ಲಿ ಒಂದಾಗಿರುವ ಥರ್ಡ್-ಐ ಯೂ-ಟ್ಯೂಬ್ ಚಾನೆಲ್ ಇದರ ಆ್ಯಂಕರ್ ಒಬ್ಬರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ “ಕೆಲವೊಂದು ಸಬ್ಜೆಕ್ಟ್‌ಗಳು ನಮಗೆ ಹೆಚ್ಚು ವೀವ್ಸ್ ತಂದುಕೊಡುತ್ತದೆ, ಅಂತಹ ಸಬ್ಜೆಕ್ಟ್‌ಗಳ ಮೇಲೆ ಹೆಚ್ಚು ಒತ್ತು ನೀಡಬೇಕು, ಉದಾಹರಣೆ ಸೌಜನ್ಯ ಪ್ರಕರಣ” ಎಂದು ಹೇಳುತ್ತಾರೆ.
ಇದರ ಅರ್ಥವನ್ನು ನೀವೇ ಊಹಿಸಿಕೊಳ್ಳಿ, ಇವರಿಗೆ ಸೌಜನ್ಯ ಪ್ರಕರಣ ವೀವ್ಸ್ ತಂದುಕೊಡುವ ಸಬ್ಜೆಕ್ ಮಾತ್ರವೇ ಆಗಿದೆ ಹೊರತು ನ್ಯಾಯ ಒದಗಿಸುವ ಉದ್ದೇಶವೇ ಇವರ ಬಳಿಯಿಲ್ಲ. ಅದೇ ಥರ್ಡ್-ಐ ನಲ್ಲಿ ತಿಂಗಳ ಹಿಂದೆ ಮಟ್ಟಣ್ಣನವರ್ ಎಂಬ ಉತ್ತರ ಕರ್ನಾಟಕದ ಕ್ರಿಮಿಯನ್ನು ತಂದು ಮತ್ತೆ ವಿಡಿಯೋ ಮಾಡಿದ್ದಾರೆ. ಅದೂ ಲಕ್ಷಗಟ್ಟಲೆ ವೀವ್ಸ್ ಪಡೆದಿದೆ. ಇದು ಕೇವಲ ಒಂದು ಯೂ-ಟ್ಯೂಬ್ ಚಾನೆಲ್ ಒಂದರ ಕಥೆಯಲ್ಲ, ಬಹುತೇಕ ಎಲ್ಲಾ ಯೂ-ಟ್ಯೂಬ್ ಚಾನೆಲ್‌ಗಳ ಹಣೇಬರಹ ಇದೇ ಆಗಿದೆ. ಕುಡ್ಲದಲ್ಲೊಬ್ಬ ಮಳೆಗಾಲದ ಅಣಬೆ ಹುಟ್ಟಿಕೊಂಡ ರಾಂಪೇಜ್ ಎನ್ನುವವ ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಯೂ-ಟ್ಯೂಬ್ ಚಾನೆಲ್ ಹುಟ್ಟಿಸಿ, ಸುಳ್ಳುಗಳನ್ನೇ ಬಿತ್ತರಿಸಿ ಈಗ ದೊಡ್ಡ ಮಟ್ಟದಲ್ಲಿ ಕಮಾಯಿಸುತ್ತಿದ್ದಾನೆ.
ಸುಮ್ಮನೇ ಒಮ್ಮೆ ಕಣ್ಣಾಡಿಸಿದರೂ ಸೌಜನ್ಯ ವಿಚಾರದ ವಿಡಿಯೋಗಳು ಲಕ್ಷಗಟ್ಟಲೇ, ಮಿಲಿಯನ್ ಗಟ್ಟಲೇ ವೀವ್ಸ್ ಪಡೆದಿರಿತ್ತದೆ. ಇದರ ಹಿಂದೆ ದೊಡ್ಡದಾದ ಷಡ್ಯಂತ್ರವಿದೆ. ನೀವು ಗಮನಿಸಿರಬಹುದು, ಇತ್ತೀಚೆಗೆ All Eyes On Rafa ಎಂಬ ದೊಡ್ಡಮಟ್ಟದ ಟ್ರೆಂಡ್ ನಡೆಯಿತು. ಇದರಲ್ಲಿ ಭಾರತದ ಬಾಲಿವುಡ್ ತಾರೆಗಳಿಂದ ಹಿಡಿದು ನಮ್ಮ ನಿಮ್ಮ ಪಕ್ಕದ ಮನೆಯ ಹುಡುಗ, ಹುಡುಗಿಯರೂ ಸ್ಟೇಟಸ್ ಹಾಕಿಕೊಂಡಿದ್ದರು. ಅದು ಏನು, ಯಾವ ವಿಚಾರ ಎಂಬುದರ ಬಗ್ಗೆ ಕೆಲವರಿಗೆ ಅರಿವೂ ಕೂಡಾ ಇರಲಿಲ್ಲ. ನೈಜತೆ ತಿಳಿದ ಕೂಡಲೇ ಕೆಲವರು ತಮ್ಮ ಸ್ಟೋರಿ, ಸ್ಟೇಟಸ್‌ಗಳಿಂದ ರಿಮೂವ್ ಮಾಡಿದರು. ಆದರೆ ಅಷ್ಟರಲ್ಲಾಗಲೇ ಅದು ಸಂಚಲನ ಸೃಷ್ಟಿಸಿಯಾಗಿತ್ತು. ಇದಕ್ಕಾಗಿ ವಿದೇಶಿ ಶಕ್ತಿಗಳು ಕೋಟಿಗಟ್ಟಲೆ ಬಂಡವಾಳ ಹೂಡಿದ್ದರು. ಅರೇ, ಆಲ್ ಅಯಿಸ್ ಆನ್ ರಾಫಾ ವಿಚಾರಕ್ಕೂ ಸೌಜನ್ಯ ಪ್ರಕರಣಕ್ಕೂ ಏನು ಸಂಬಂಧ ಎಂದು ನೀವು ಭಾವಿಸಬಹುದು, ಅಲ್ಲೇ ಇರುವುದು ಅಸಲೀ ವಿಷಯ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಯೂ ಟ್ಯೂಬ್ ಚಾನೆಲ್‌ಗಳು ಧರ್ಮಸ್ಥಳದ ವಿರುದ್ಧ ಮಾತನಾಡಿ ವಿಡಿಯೋ ಮಾಡಿದರೆ ಅದಕ್ಕೆ ಲಕ್ಷಗಟ್ಟಲೆ, ಮಿಲಿಯನ್ ಗಟ್ಟಲೇ ವೀವ್ಸ್ ಪಡೆಯುತ್ತವೆ. ಇದರ ಹಿಂದೆ ಟೂಲ್ ಕಿಟ್ ಗ್ಯಾಂಗ್ ಕೆಲಸ ಮಾಡುತ್ತಿದೆ. ಯೂ ಟ್ಯೂಬ್ ನಲ್ಲಿ ಕೇವಲ ಹತ್ತದಿನೈದು ವಿಡಿಯೋ ಹಾಕಿ ಸಿಲ್ಲಿ ವೀವ್ಸ್ ಪಡೆದಿದ್ದ ಧೂತ ಎಂಬ ಧೂರ್ತನ ಸೌಜನ್ಯ ವಿಡಿಯೋ ಒಮ್ಮಿಂದೊಮ್ಮೆಲೇ ಮಿಲಿಯನ್ ವೀವ್ಸ್ ಪಡೆಯುವಲ್ಲಿ ಟೂಲ್ ಕಿಟ್ ಗ್ಯಾಂಗ್ ನ ಸಹಕಾರವಿದೆ. ಈ ಟೂಲ್ ಕಿಟ್ ಗ್ಯಾಂಗ್ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ. ಸೌಜನ್ಯ ಸಂಬಂಧಿತ, ಧರ್ಮಸ್ಥಳ ವಿರೋಧಿ ವಿಡಿಯೋಗಳು ರಾಷ್ಟ್ರಮಟ್ಟದಲ್ಲಿ ಬಿಕರಿಯಾಗುವಂತೆ ಈ ಟೂಲ್ ಕಿಟ್ ಗ್ಯಾಂಗ್ ನೋಡಿಕೊಳ್ಳುತ್ತದೆ. ನಿಗದಿತ ವಿಡಿಯೋಗಳು ಲಕ್ಷಗಟ್ಟಲೇ ವೀವ್ಸ್ ಪಡೆದುಕೊಳ್ಳಲು Paid Views, Fake Views ಮೂಲಕ ಸಹಕಾರ ನೀಡುತ್ತದೆ. ಇದರಿಂದ ಯೂ-ಟ್ಯೂಬ್ ಚಾನೆಲ್ ಗಳಿಗೂ ದುಡ್ಡೂ ಬರುತ್ತದೆ, ಧರ್ಮಸ್ಥಳದ ವಿರುದ್ಧ ಮಾತನಾಡಲು ಇನ್ನಷ್ಟು ಮೋಟಿವೇಶನ್ ಸಿಗುತ್ತದೆ.
ಸೌಜನ್ಯ ಪ್ರಕರಣದಲ್ಲಿ ಲೆಫ್ಟ್-ಥಿಂಕಿಂಗ್ ಸೊಸೈಟಿ ಆಳವಾಗಿ ಬೇರೂರಿದೆ. ಧರ್ಮಸ್ಥಳವನ್ನು ಟೀಕಿಸಿದರೆ ಎಡಪಂಥೀಯರಿಗೆ ಲಾಭವಾಗುತ್ತದೆ ಎನ್ನುವುದಕ್ಕೆ ಸೌಜನ್ಯ ಪ್ರಕರಣದಲ್ಲಿ ಮೈಸೂರಿನ ಸ್ಟ್ಯಾನ್ಲಿ, ಧೂತ ಯೂ ಟ್ಯೂಬ್ ಚಾನೆಲ್ಲಿನ ಸಮೀರ್ ಎಂಡಿ ಇವರ ಇನ್ವಾಲ್ವ್‌ಮೆಂಟ್ ಸಾಕ್ಷಿಯಾಗಿದೆ. ಸಮೀರ್ ಸೌಜನ್ಯ ಪ್ರಕರಣದ ವಿಡಿಯೋದಲ್ಲಿ ಸುಳ್ಳಿನ ಸರಮಾಲೆಯನ್ನೇ ಪೋಣಿಸಿ ಸತ್ಯದ ನೆತ್ತಿಗೆ ಸುತ್ತಿಗೆಯಲ್ಲಿ ಬಡಿದಂತೆ ಜನರ ಮುಂದೆ ಇರಿಸಿದ್ದಾನೆ. ಜನರು ಭಾವೋದ್ವೇಗಕ್ಕೆ ಒಳಗಾಗಿ ಸೌಜನ್ಯಳಿಗೆ ನ್ಯಾಯ ಕೊಡಿಸಲಾಗದ ಮಂಜುನಾಥ ನಮಗೆ ನ್ಯಾಯ ಒದಗಿಸುವನೇ ಎಂದು ಹಲುಬುತ್ತಿದ್ದಾರೆ.
ದಾಖಲೆ, ಸತ್ಯಗಳಿದ್ದಿದ್ದರೆ ಸೌಜನ್ಯಳಿಗೇಕೆ ನ್ಯಾಯ ಸಿಗಲಿಲ್ಲ!?
ಬಹುತೇಕ ಜನರನ್ನು ಈ ಪ್ರಶ್ನೆ ಈಗಲೂ ಕಾಡುತ್ತಿದೆ. ಮೈಕ್ ಸಿಕ್ಕಕಡೆ, ಯೂ ಟ್ಯೂಬ್ ಚಾನೆಲ್ಲುಗಳಲ್ಲಿ ನಮ್ಮಲ್ಲಿ ಆ ಸಾಕ್ಷಿ ಇದೆ, ಈ ಸಾಕ್ಷಿ ಇದೆ ಎಂದು ಖಾಲಿ ಡಬ್ಬ ಬಡಿದು ಸದ್ದು ಮಾಡುವ ಚಾಳಿಯನ್ನು ಮಹೇಶ್ ಶೆಟ್ಟಿ ತಿಮರೋಡಿ, ವಿಧಾನ ಸೌಧಕ್ಕೆ ಬಾಂಬ್ ಇಟ್ಟ ಗಿರೀಶ್ ಮಟ್ಟಣ್ಣನವರ್ ಈಗಲೂ ಮಾಡುತ್ತಿದ್ದಾರೆ. ಅವರು ಹೇಳಿದ ಸುಳ್ಳುಗಳನ್ನೇ ಪೋಣಿಸಿ ಯೂ ಟ್ಯೂಬ್ ಚಾನೆಲ್ಲಿನವರು ವಿಡಿಯೋ ಮಾಡಿ, ವೀವ್ಸ್ ಗಳಿಸಿ ಲಕ್ಷಗಟ್ಟಲೇ ದುಡ್ಡು ಮಾಡುತ್ತಿದ್ದಾರೆ. ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಏಕೆ ಕೊಡುತ್ತಿಲ್ಲ. ಏಕೆಂದರೆ ಸೌಜನ್ಯ ಪ್ರಕರಣ ತಾರ್ಕಿಕ ಅಂತ್ಯ ಕಾಣಬಾರದು ಎಂಬುದೇ ಅವರ ಉದ್ದೇಶವಾಗಿದೆ.
ನ್ಯಾಯಯುತವಾಗಿ ಹೋರಾಡುವ ಯಾವುದೇ ಇರಾದೆ ಹೋರಾಟಗಾರರಲ್ಲಾಗಲಿ, ಯು-ಟ್ಯೂಬ್ ಶೂರರಲ್ಲಾಗಲಿ ಇಲ್ಲ. ಯೂಟ್ಯೂಬ್ ವಿಡಿಯೋಗಳಿಂದ ಲೈಕು, ಕಮೆಂಟು, ಹಣ, ಚಂದಾದಾರರನ್ನು ಗಳಿಸಬಹುದೇ ಹೊರತು ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಲು ಖಂಡಿತಾ ಸಾಧ್ಯವಿಲ್ಲ. ಆರೋಪ ಹೊತ್ತುಕೊಂಡವರು ಮತ್ತು ಆರೋಪಿಸಿದವರು ಮಂಪರು ಪರೀಕ್ಷೆಗೆ ಒಳಗಾಗಿದ್ದರೆ ಸೌಜನ್ಯಳಿಗೆ ನ್ಯಾಯ ನಿರಾಯಾಸವಾಗಿ ಸಿಗುತ್ತಿತ್ತು. ಆದರೆ ಏನು ಮಾಡುವುದು ಉದಯ ಜೈನ್, ಧೀರಜ್ ಜೈನ್ ಮತ್ತು ಮಲ್ಲಿಕ್ ಜೈನ್ ಹೊರತಾಗಿ ಯಾರೂ ಕೂಡಾ ಮಂಪರು ಪರೀಕ್ಷೆಗೆ ತಯಾರಿಲ್ಲ. ಈ ಮೂವರ ಮಂಪರು ಪರೀಕ್ಷೆ ನಡೆದಿದೆ, ಅವರು ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಸಾಬೀತು ಕೂಡಾ ಆಗಿದೆ ಮುಂದುವರೆದು ಈಗಲೂ ಮತ್ತೊಮ್ಮೆ ಮಂಪರು ಪರೀಕ್ಷೆ ಎದುರಿಸಲು ಸಿದ್ಧರಿದ್ದಾರೆ. ಅತ್ಯಾಚಾರ ಎಸಗಿರುವ ಪ್ರಮುಖ ಆರೋಪ ಇರುವ ಸಂತೋಷ್ ರಾವ್ ಏಕೆ ಮಂಪರು ಪರೀಕ್ಷೆಗೆ ತಯಾರಿಲ್ಲ? ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಕುಸುಮಾವತಿ, ಸಂತೋಷ್ ರಾವ್, ಮಾವ ವಿಠ್ಠಲ, ಹೊಸದಾಗಿ ಸೇರಿಕೊಂಡಿರುವ ಬಾಂಬ್ ತಜ್ಞ ಮಟ್ಟಣ್ಣನವರ್ ಇವರೆಲ್ಲರು ಏಕೆ ಮಂಪರು ಪರೀಕ್ಷೆಗೆ ಒಪ್ಪಿಗೆ ಸೂಚಿಸುತ್ತಿಲ್ಲ? ಅಸಲೀ ಸತ್ಯ ಹೊರಬೀಳುವ ಭಯ ಕಾಡುತ್ತಿದೆಯೇ?
ನಿನ್ನೆ ಮೊನ್ನೆ ಹುಟ್ಟಿದ ಕೂಸುಗಳೆಲ್ಲಾ ಯೂ ಟ್ಯೂಬ್ ಚಾನೆಲ್ ತೆಗೆದು ಅದರಲ್ಲಿ ಸೌಜನ್ಯ ಪ್ರಕರಣದ ವಿಡಿಯೋ ಮಾಡಿ ಈಗ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಜನರಿಗೆ ಸುಲಭವಾಗಿ ಸಾಲ ನೀಡುತ್ತಿದ್ದ ಧರ್ಮಸ್ಥಳ ಸಂಘವನ್ನು ಜನರ ವಿರುದ್ಧ ಎತ್ತಿಕಟ್ಟಿ ಯೂ- ಟ್ಯೂಬ್ ವಿಡಿಯೋ ಮಾಡಿ ಯಾವುದೇ ಆಯಾಸವಿಲ್ಲದೆ ಲಕ್ಷಗಟ್ಟಲೇ ಕಮಾಯಿಸುತ್ತಿದ್ದಾರೆ, ಒಟ್ಟಿನಲ್ಲಿ ಸೌಜನ್ಯ ಮತ್ತು ಧರ್ಮಸ್ಥಳ ವಿಚಾರ ಈಗ ದುಡ್ಡು ಮಾಡುವ ವಿಷಯವಾಗಿ ಮಾರ್ಪಟ್ಟಿದೆ.
ಇನ್ನಷ್ಟು ಭಯಾನಕ ಸತ್ಯಗಳೊಂದಿಗೆ ಮತ್ತೆ ನಿಮ್ಮ ಮುಂದೆ ಬರುತ್ತೇವೆ……!