Latest Newsರಾಜಕೀಯ
ರಕ್ಷಿತ್ ಶಿವರಾಂ ಆಪ್ತನಿಂದ ಸೈನಿಕನ ಜಾಗ ಒತ್ತುವರಿ!?
ಬೆಳ್ತಂಗಡಿ ತಾಲ್ಲೂಕಿನ ಕಣಿಯೂರು ಪೇರ್ದಡ್ಕ ಎಂಬಲ್ಲಿ ಸೈನಿಕರಿಗೆ ಮೀಸಲಾದ ಜಾಗವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆಪ್ತ ಗಣೇಶ್ ಕಣಿಯೂರು ಎಂಬ ವ್ಯಕ್ತಿ ಒತ್ತುವರಿ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮಾಜಿ ಸೈನಿಕರೊಬ್ಬರ ಜಾಗವನ್ನೂ ಮುಕ್ಕಿ ತಿನ್ನಲು ಹೊರಟಿರುವ ಕಾಂಗ್ರೆಸ್ ಜಾಲತಾಣ ಪ್ರಮುಖರೂ ಆಗಿರುವ ಗಣೇಶ್ ಕಾಣಿಯೂರು ವಿರುದ್ಧ ರಾಜಕೀಯ ಒತ್ತಡಕ್ಕೆ ಒಳಗಾಗಿ ಯಾವುದೇ ಕ್ರಮ ಕೈಗೊಳ್ಳದ ತಾಲ್ಲೂಕು ಆಡಳಿಒತ ವಿರುದ್ಧ ಕಣಿಯೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.