ಸೌಜನ್ಯ ಪರವಾಗಿ ಇದ್ದೇವೆ ಎಂದು ತೋರಿಸಿಕೊಳ್ಳುವ ರಕ್ಷಿತ್ ಶಿವರಾಮ್, ನೇಹಾ ಪ್ರಕರಣದ ವಿರುದ್ಧ ಹೋರಾಡಿದ ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್ ದಾಖಲಿಸಲು ಒತ್ತಡ ಹೇರಿದ್ದೇಕೆ?
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹಿಂದೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಕ್ಷಿತ್ ಶಿವರಾಮ್ ಅವರು ಈ ಹಿಂದೆ ನಾನು ಸೌಜನ್ಯ ಪರವಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಅದರಂತೆ ವಿಧಾನಸಭಾ ಚುನಾವಣೆಯಲ್ಲಿ ರಕ್ಷಿತ್ ಶಿವರಾಮ್ ಬೆಂಬಲಿಸುವಂತೆ ಸೌಜನ್ಯ ಹೋರಾಟಗಾರರು ಕರೆ ನೀಡಿದ್ದರು. ಹೆಣ್ಣುಮಕ್ಕಳ ಸ್ವಾಭಿಮಾನ, ರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದ ರಕ್ಷಿತ್ ಅವರ ದ್ವಂದ್ವ ನಿಲುವು ಈಗ ಬಹಿರಂಗವಾಗಿದೆ.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಹತ್ಯೆಯನ್ನು ಖಂಡಿಸಿ ಉಜಿರೆಯಲ್ಲಿ ಎಬಿವಿಪಿ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಅನ್ಯಾಯದ ವಿರುದ್ಧ ಘೋಷಣೆ ಕೂಗಿದ್ದ ಪ್ರತಿಭಟನೆಕಾರರು ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಆದರೆ ವಿದ್ಯಾರ್ಥಿಗಳು ಒಂದು ಕಡೆ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದರೆ, ಪೊಲೀಸರು ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಏಪ್ರಿಲ್ 22ರಂದು ನಡೆದ ಈ ಪ್ರತಿಭಟನೆಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಗುಂಪು ಸೇರಲಾಗಿದೆ, ಜೊತೆಗೆ ಅನುಮತಿಯನ್ನು ಪಡೆದಿಲ್ಲ ಎಂದು ವಿದ್ಯಾರ್ಥಿ ನಾಯಕರಾದ ಸುವಿತ್ ಶೆಟ್ಟಿ, ಸುಮಂತ್ ನೆರಿಯ, ಸನಲ್ ಶೆಟ್ಟಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.
ಚುನಾವಣಾ ನೀತಿ ಸಂಹಿತೆ ಇದ್ದರೂ ಕೂಡ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಸಾಕಷ್ಟು ಸಂದರ್ಭದಲ್ಲಿ ಚುನಾವಣಾ ನೀತಿ ಸಮಿತಿ ಉಲ್ಲಂಘನೆಯಾಗಿದ್ದರೂ , ಯಾವುದೇ ಕ್ರಮಗಳನ್ನು ವಹಿಸಿರಲಿಲ್ಲ. ಪ್ರತಿಭಟನೆ ಹಮ್ಮಿಕೊಂಡಿದ್ದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಇದು ನಡುವೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಕಾರ್ಯಕರ್ತರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ರಕ್ಷಿತ್ ಶಿವರಾಮ ಅವರ ಒತ್ತಡದಿಂದ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎನ್ನುವಂತೆ ಪೊಲೀಸ್ ಇಲಾಖೆ ವರ್ತಿಸುತ್ತಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅವರ ಒತ್ತಡದಿಂದಾಗಿ ಪೊಲೀಸರು ಎಬಿಪಿ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಲಾಗಿದೆ. ತಾನು ಸೌಜನ್ಯ ಪರವಾಗಿದ್ದೇನೆ ಎಂದು ತೋರಿಸಿಕೊಳ್ಳುವ ರಕ್ಷಿತ್ ಶಿವರಾಮ್ ಅವರು ದಾರುಣವಾಗಿ ಹತ್ಯೆಯಾದ ನೇಹ ಪರವಾಗಿ ನಡೆದ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾದರು ವಿರುದ್ಧ ಕೆಸು ದಾಖಲಿಸಿದ್ದು ಏಕೆ? ರಕ್ಷಿತ್ ಶಿವರಾಮ ಅವರ ಈ ರೀತಿಯ ದ್ವಂದ್ವ ನಿಲುವು ಬೆಳ್ತಂಗಡಿಯ ಜನತೆಯಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ.