ಬಾಂಗ್ಲಾ ಮಾದರಿ, ಎಚ್ಚರಿಗೆ ನೀಡಿದ ಯೋಗಿ ಆದಿತ್ಯನಾಥ್
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಾಂಗ್ಲಾದೇಶದಲ್ಲಿ ನಡೆದ ಘಟನೆಗಳನ್ನು ಉದಾಹರಣೆಯಾಗಿ ನೀಡಿ ದೇಶದ ಜನರನ್ನು ಎಚ್ಚರಿಸಿದ್ದಾರೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ರ‍್ಯಾಲಿಯಲ್ಲಿ ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ದೇಶಕ್ಕಿಂತ ಮಿಗಿಲು ಬೇರಾವುದೂ ಇಲ್ಲ. ನಾವು ಒಗ್ಗಟ್ಟಾಗಿದ್ದರೆ ಮಾತ್ರ ದೇಶ ಕೂಡಾ ಶಕ್ತಿಶಾಲಿಯಾಗಿರುತ್ತದೆ ಎಂದರು.
ಪಕ್ಕದ ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಅಲ್ಲಿನ ತಪ್ಪುಗಳು ಭಾರತದಲ್ಲಿ ಆಗಬಾರದು. ಬಾಟೇಂಗೇ ತೋ ಕಟೇಂಗೆ, ಏಕ್ ರಹೇಂಗೇ ತೋ ನೇಕ್ ರಹೇಂಗೆ (ಪಾಲು ಮಾಡಿದಲ್ಲಿ ತುಂಡಾಗುತ್ತೇವೆ, ಒಂದಾಗಿದ್ದರೆ ಗಟ್ಟಿಯಾಗಿರುತ್ತೇವೆ) ಎಂದು ದೇಶದ ಜನರಿಗೆ ಸಭೆಯ ಮೂಲಕ ಕಿವಿಮಾತು ಹೇಳಿದ್ದಾರೆ.
ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ಪದಚ್ಯುತರಾದ ಬಳಿಕ ಅಲ್ಲಿನ ಹಿಂದೂಗಳ ಪರಿಸ್ಥಿತಿ ಶೋಚನೀಯವಾಗಿದೆ. ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ಧಾರ್ಮಿಕ ನೆಲೆಗಟ್ಟಿನಲ್ಲಿ ಹಿಂಸಾಚಾರ ನಡೆಯುತ್ತಿದೆ. ಭಾರತದಲ್ಲೂ ಇಂತಹ ಪರಿಸ್ಥಿತಿ ಉದ್ಭವವಾದರೆ ಹಿಂದೂಗಳು ಸಂಕಷ್ಟಕ್ಕೀಡಾಗಲಿದ್ದಾರೆ ಎಂಬುದು ಯೋಗಿ ಅವರ ಎಚ್ಚರಿಕೆಯಾಗಿದೆ.