ತಂತ್ರಜ್ಞಾನ

ಗಣಿತ ಲೋಕವನ್ನೇ ಅಚ್ಚರಿಯ ಕಡಲಿನಲ್ಲಿ ತೇಲಾಡಿಸಿದ ಭಾರತದ ಆ ಸಾಧಕ ತನ್ನ 32 ನೇ ವಯಸ್ಸಿನಲ್ಲಿ ಗತಿಸಿದ್ದು ಹೇಗೆ ಗೊತ್ತೇ!?

Share News

ಆತ ಅಪ್ರತಿಮ ಸಾಧಕ ಎನ್ನುವುದನ್ನು ಜಗತ್ತು ಆಗಲೇ ಒಪ್ಪಿಕೊಂಡಿತ್ತು. ಆತನ ಗಣಿತ ಪಟ್ಟುಗಳನ್ನು ಅರಗಿಸಿಕೊಳ್ಳಲು ಶ್ರೇಷ್ಠರು ಎನಿಸಿಕೊಂಡವರೆಲ್ಲಾ ಮೂಗಿನ ಮೇಲೆ ಬೆರಳಿಡುತ್ತಿದ್ದರು. ಅಂತಹ ಸಾಧಕ ಅಪಪ್ರಾಯದಲ್ಲಿ ಈ ಲೋಕವನ್ನೇ ತ್ಯಜಿಸಿದರು. ಈ ವ್ಯಕ್ತಿ “The Man Who Knew Infinity” (ಅಂತ್ಯವಿಲ್ಲದಷ್ಟು ತಿಳಿದವರು) ಎಂದೇ ಪ್ರಖ್ಯಾತರಾಗಿದ್ದ ಇವರ ಬಗ್ಗೆ ತಿಳಿಯೋಣ.

ಹೆಸರು ಶ್ರೀನಿವಾಸ ರಾಮಾನುಜನ್‌, ಹುಟ್ಟಿದ್ದು 22 ಡಿಸೆಂಬರ್ 1887 ರಂದು ತಮಿಳುನಾಡಿನ ಈರೋಡ್ ಪ್ರದೇಶದಲ್ಲಿ. ತಮ್ಮ ಶಾಲಾ ದಿನಗಳಲ್ಲಿಯೇ ಉನ್ನತ ಮಟ್ಟದ ಗಣಿತದ ಉತ್ತಮ ಜ್ಞಾನ ಹೊಂದಿದ್ದ ರಾಮಾನುಜನ್ ಗಣಿತಶಾಸ್ತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ಸಂಶೋಧನೆಗಳನ್ನು ಮಾಡುತ್ತಿದ್ದರು. ನಾವು ನೀವೆಲ್ಲ ಕಬ್ಬಿಣದ ಕಡಲೆ ಎಂದು ಭಾವಿಸುವ ಗಣಿತದ ಲೆಕ್ಕಗಳು ಈ ಮಾಂತ್ರಿಕನಿಗೆ ಬಾಳೆಹಣ್ಣಿನ ಸಿಪ್ಪೆ ಸುಲಿದಂತೆ ಸುಲಲಿತವಾಗಿದ್ದವು.

ಗಣಿತ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ರಾಮಾನುಜನ್‌ ತಮ್ಮ ಕೆಲವು ಅಭಿಮಾನಿಗಳು ಮತ್ತು ಸ್ನೇಹಿತರ ಸಹಾಯದಿಂದ ಪ್ರೊಫೆಸರ್ ಶೇಷು ಅಯ್ಯರ್ ಅವರಿಗೆ ತಮ್ಮ ಗಣಿತದ ಸಿದ್ಧಾಂತದ ಸೂತ್ರಗಳನ್ನು ತೋರಿಸಿದರು, ಇವರ ಗಣಿತದ ಮೇಲಿ ಹುಚ್ಚು ಪ್ರಸಿದ್ಧ ಗಣಿತಜ್ಞ ಪ್ರೊಫೆಸರ್ ಹಾರ್ಡಿ ಅವರ ಸಂಪರ್ಕ ಗಳಿಸುವಂತೆ ಮಾಡಿತ್ತು. ರಾಮಾನುಜನ್ ಅವರು ಪ್ರೊಫೆಸರ್ ಹಾರ್ಡಿಗೆ ತಮ್ಮ ಪ್ರಮೇಯಗಳ ಪಟ್ಟಿಯನ್ನು ಕಳುಹಿಸಿದರು, ಅದು ಹಾರ್ಡಿಗೆ ಮೊದಲು ಅರ್ಥವಾಗಲಿಲ್ಲ, ಆದರೆ ನಂತರ ಅವರು ರಾಮಾನುಜನ್ ಅವರ ಗಣಿತ ಶಾಸ್ತ್ರದ ಅದ್ಭುತ ಪ್ರತಿಭೆಯ ಬಗ್ಗೆ ಅರಿವಾಯಿತು.

ಮುಂದೆ ಪ್ರೊಫೆಸರ್ ಹಾರ್ಡಿ ಅವರು ರಾಮಾನುಜನ್ ಅವರನ್ನು ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ ಗಣಿತಶಾಸ್ತ್ರದ ಸಂಶೋಧನೆ ಮಾಡಲು ಕೇಳಿಕೊಂಡರು. ಇದಾದ ನಂತರ ರಾಮಾನುಜನ್ ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿಗೆ ಹೋಗಿ ಹಾರ್ಡಿ ಜೊತೆಗೂಡಿ ಸಂಶೋಧನೆ ನಡೆಸಿ ಹಲವು ಲೇಖನಗಳನ್ನು ಪ್ರಕಟಿಸಿದರು. ಗಣಿತಶಾಸ್ತ್ರದಲ್ಲಿ ವಿಶೇಷ ಸಂಶೋಧನೆಗಾಗಿ ಶ್ರೀನಿವಾಸ ರಾಮಾನುಜನ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಬಿಎ ಪ್ರಶಸ್ತಿಯನ್ನು ಪಡೆದರು. ಗಣಿತ ಕ್ಷೇತ್ರದಲ್ಲಿ ಅವರ ಅಸಾಧಾರಣ ಪ್ರತಿಭೆಯ ದೃಷ್ಟಿಯಿಂದ, ಅವರನ್ನು ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆ ಮಾಡಲಾಯಿತು. ರಾಯಲ್ ಸೊಸೈಟಿಯ ಅತ್ಯಂತ ಕಿರಿಯ ಸದಸ್ಯ ಎಂಬ ಖ್ಯಾತಿಗೆ ರಾಮಾನುಜನ್‌ ಭಾಜನರಾದರು. ಟ್ರಿನಿಟಿ ಕಾಲೇಜಿನ ಫೆಲೋಶಿಪ್ ಪಡೆದ ಮೊದಲ ಭಾರತೀಯ ಎಂಬ ಹೆಮ್ಮೆಯೂ ಇವರದ್ದೇ ಆಗಿದೆ. ಇದರೊಂದಿಗೆ ಅವರು ಕೇಂಬ್ರಿಡ್ಜ್ ಫಿಲಾಸಫಿಕ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು.

ಇದಾದ ಬಳಿಕ ತಮ್ಮ ಅದ್ಭುತ ಕಲ್ಪನಾ ಶಕ್ತಿಯಿಂದ ಗಣಿತದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬಂದ ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದರು.
ಅತಿಸಣ್ಣ ವಯಸ್ಸಿನಲ್ಲೇ ಗಣಿತಜ್ಞರಾಗಿ ಬೆಳೆದ ಶ್ರೀನಿವಾಸ ರಾಮಾನುಜನ್ ಅವರು ತಮ್ಮ ಜೀವನವನ್ನು ಮಾತ್ರ ಅಕಾಲದಲ್ಲಿ ಅಂತ್ಯಗೊಳಿಸಿದರು. ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ರಾಮಾನುಜನ್ ಅವರು 26 ಏಪ್ರಿಲ್ 1920 ರಂದು ತಮ್ಮ 33 ನೇ ವಯಸ್ಸಿನಲ್ಲಿ ನಿಧನರಾದರು.

ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ ಡಿಸೆಂಬರ್ 22, ಈ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ‘ರಾಷ್ಟ್ರೀಯ ಗಣಿತ ದಿನ’ (National Mathematics Day) ಎಂದು ಆಚರಣೆ ಮಾಡಲಾಗುತ್ತದೆ. 2012 ರಿಂದ ಡಿಸೆಂಬರ್ 22 ನ್ನು ‘National Mathematics Day’ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವವವನ್ನೇ ಬೆರಗುಗೊಳಿಸಿದ ನಮ್ಮ ನೆಲದ ಸಾಧಕನನ್ನು ಈ ಕ್ಷಣದಲ್ಲಿ ಮತ್ತೊಮ್ಮೆ ನೆನಪಿಸೋಣ.‌

One Comment

Leave a Reply

Your email address will not be published. Required fields are marked *

Back to top button