ರನ್ ಮಶಿನ್ ಎಂದೇ ಕರೆಯಲ್ಪಡುತ್ತಿದ್ದ ಆ ಕ್ರಿಕೆಟ್ ದಿಗ್ಗಜನನ್ನು ಕಾಡುತ್ತಿದ್ದ ಪೆಡಂಭೂತದ ಬಗ್ಗೆ ನಿಮಗೆ ಗೊತ್ತೇ?
ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ಕ್ರಿಕೆಟ್ ಹಲವಾರು ಅಚ್ಚರಿಗಳನ್ನು ಮೈಹೊದ್ದುಕೊಂಡಿದೆ ಮತ್ತು ದಿನನಿತ್ಯವೂ ಅಚ್ಚರಿಯ ಸುದ್ದಿಗಳನ್ನು ಹೊತ್ತು ತರುವ ಆಟವಾಗಿದೆ. ಇಂತಹ ಕ್ರಿಕೆಟ್ ಭಾರತದಲ್ಲಂತೂ ಗಲ್ಲಿಗಲ್ಲಿಗಳಲ್ಲೂ ಪ್ರಚಲಿತವಾಗಿದೆ. ಕ್ರಿಕೆಟ್ ಆಟದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದು ಅಭಿಮಾನಿಗಳ ಹೃದಯದಲ್ಲಿ ಕ್ರಿಕೆಟ್ ದೇವರು ಎಂದು ಆರಾಧನೆ ಪಡೆಯುವ ಭಾರತದ ಏಕಮಾತ್ರ ಕ್ರಿಕೆಟಿಗ ಅದು ಸಚಿನ್ ರಮೇಶ್ ತೆಂಡುಲ್ಕರ್!
ಸಚಿನ್ ಎಂದರೆ ರನ್ ಮಶಿನ್ ಎಂದೇ ಕರೆಸಿಕೊಳ್ಳುತ್ತಿದ್ದ ಸಮಯವದು, ಆತ ಕ್ರೀಸಿಗೆ ಬಂದರೆ ರನ್ ಹೊಳೆಯೇ ಹರಿಯುತ್ತಿತ್ತು. ಎದುರಾಳಿ ತಂಡಗಳು ಇಡೀ ಭಾರತವನ್ನು ಕಟ್ಟಿಹಾಕುವುದು ಹೇಗೆ ಎಂದು ರಣತಂತ್ರ ಹೆಣೆಯುವ ಬದಲು ಸಚಿನ್ ಎಂಬ ಕ್ರಿಕಟ್ ಮಾಂತ್ರಿಕನನ್ನು ತಡೆಯುವುದು ಹೇಗೆ ಎಂಬುದರ ಲೆಕ್ಕಾಚಾರಕ್ಕೆ ಆದ್ಯತೆ ನೀಡುತ್ತಿದ್ದವು. ವಿಶ್ವದ ಬಲಿಷ್ಠ ಬೌಲರ್‌ಗಳೂ ಸಚಿನ್‌ಗೆ ಬೌಲಿಂಗ್ ಮಾಡುವ ಬಗ್ಗೆ ಗೊಂದಲ ಮಾಡಿಕೊಳ್ಳುತ್ತಿದ್ದರು, ಹಾಗಿತ್ತು ಆ ದೈತ್ಯನ ಆಟದ ಖದರ್. ಇಂತತಹ ಆಟಗಾರನನ್ನೂ ಬಿಟ್ಟೂಬಿಡದೆ ಕಾಡಿದ ಪೆಡಂಭೂತವೊಂದರ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕು.
ಸಚಿನ್ ಬೆನ್ನು ಬಿಡದೆ ಕಾಡುತ್ತಿದ್ದ ನರ್ವಸ್ ನೈಂಟಿ!
ಸಚಿನ್ ತೆಂಡುಲ್ಕರ್ ಅವರ ಕ್ರಿಕೆಟ್ ಪಯಣದಲ್ಲಿ ದಾಖಲೆಗಳ ಮೇಲೆ ದಾಖಲೆಗಳ ಬರೆದ ಇತಿಹಾಸವಿದೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಸಂಗ್ರಹ, ಎರಡು ಸ್ವರೂಪಗಳಲ್ಲಿ ಅತಿ ಹೆಚ್ಚು ಶತಕ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕಗಳು ಸೇರಿದಂತೆ ಬಹುತೇಕ ಹೆಚ್ಚಿನ ದಾಖಲೆಗಳು ಸಚಿನ್ ತೆಂಡುಲ್ಕರ್ ಅವರ ಹೆಸರಲ್ಲಿದೆ.
ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅದೇನೇ ಒತ್ತಡದಲ್ಲಿದ್ದರೂ ರನ್ ಗಳಿಸುವ ಸಾಮರ್ಥ್ಯ ಅವರ ವೃತ್ತಿಜೀವನದ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ. ಆದರೂ ಇಂತಹ ಸವ್ಯಸಾಚಿ ನರ್ವಸ್ ನೈಂಟಿ ಎಂಬ ವೈರಸ್‌ಗೆ ಬಲಿಯಾಗಿ ಆಗಾಗ್ಗೆ ನಿರಾಸೆ ಮೂಡಿಸುತ್ತಿದ್ದರು.
ನರ್ವಸ್ ನೈಂಟಿ ಎಂದರೆ 90 ಮತ್ತು 99 ರ ನಡುವಿನಲ್ಲಿ ಮುಗ್ಗರಿಸುವ ಒಂದು ಸಹಜ ಆಟ. 90 ರನ್ ಗಳಿಸಿದ ಬಳಿಕ ಅದನ್ನು ಶತಕವಾಗಿ ಪರಿವರ್ತಿಸಲು ವಿಫಲರಾಗುತ್ತಿದ್ದರು. ಒಂದೆರಡು ಬಾರಿ ಆದರೆ ಆಟದಲ್ಲಿ ಇದೆಲ್ಲಾ ಸಹಜ ಎನ್ನಬಹುತ್ತೇನೋ, ಆದರೆ ಇದೇ ಒಂದು ದೊಡ್ಡ ತಡೆಗೋಡೆಯಾಗಿ ನಿಂತು ಶಚಿನ್ ರ ಶತಕದ ಕನಸನ್ನು ಅನೇಕ ಬಾರಿ ನನಸು ಮಾಡಲು ಬಿಡುತ್ತಿರಲಿಲ್ಲ, ಸಹಜವಾಗಿ ಇದು ಸಚಿನ್ ಅವರ ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳಲ್ಲಿ ಉದ್ವೇಗ ಸೃಷ್ಟಿಸುತ್ತಿತ್ತು.
ನರ್ವಸ್ ನೈಂಟಿಗೆ ಅತಿಹೆಚ್ಚು ಬಾರಿ ಬಲಿಯಾದ ವಿಶ್ವದ ಏಕೈಕ ಆಟಗಾರ!
ಸಚಿನ್ ಅನೇಕ ದಾಖಲೆಗಳೊಂದಿಗೆ ಅತಿಹೆಚ್ಚು ಬಾರಿ 90 ಮತ್ತು 100 ರ ನಡುವೆ ಎಡವಿದ್ದರ ದಾಖಲೆಯನ್ನೂ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡುಲ್ಕರ್ 28 ಬಾರಿ ನರ್ವಸ್ ನೈಂಟಿಗೆ ಬಲಿಯಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 18 ಬಾರಿ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ 10 ಬಾರಿ ಈ ನರ್ವಸ್ ನೈಂಟಿ ಎಂಬ ಭೂತಕ್ಕೆ ಬಲಿಯಾಗಿದ್ದಾರೆ. ಒಂದು ವೇಳೆ ಇದೆಲ್ಲವೂ ಶತಕವಾಗಿ ಪರಿವರ್ತನೆಯಾಗುತ್ತಿದ್ದರೆ ಮತ್ತೊಬ್ಬ ಕ್ರಿಕೆಟ್ ಆಟಗಾರನಿಗೆ ಸಚಿನ್ ತೆಂಡುಲ್ಕರ್ ಅವರ ಶತಕದ ದಾಖಲೆಗಳ ಸನಿಹ ಬರಲೂ ಆಗುತ್ತಿರಲಿಲ್ಲವೇನೋ!
Hi, this is a comment.
To get started with moderating, editing, and deleting comments, please visit the Comments screen in the dashboard.