ಒಂದು ಭೇಟಿ ಹಲವು ಆಯಾಮ, ಇದು ನಮೋ ಯುಗ!
ಮೋದಿ ಅಮೇರಿಕಾ ಪ್ರವಾಸ ಮುಗಿಸಿ ಇತ್ತೀಚೆಗಷ್ಟೇ ಮರಳಿದ್ದಾರೆ, ವಿಪಕ್ಷಗಳು ಇನ್ನೂ ಊಳಿಡುತ್ತಿದ್ದಾವೆ. ಜಗತ್ತು ಕಣ್ಣರಳಿಸಿ ಭಾರತದ ಕಡೆಗೆ ಎವೆಯಿಕ್ಕದೆ ಅಚ್ಚರಿಗಣ್ಣಿನಿಂದ ನೋಡುತ್ತಿದೆ. ಅಮೇರಿಕಾದಂತಹ ಅಮೇರಿಕಾದಲ್ಲಿ ಭಾರತದ ಪ್ರಧಾನಿಯೊಬ್ಬರಿಗೆ ಲಭಿಸಿದ ಅಭೂತಪೂರ್ವ ಗೌರವಕ್ಕೆ ರಾಹುಲ್ ಗಾಂಧಿ ಆದಿಯಾಗಿ ವಿಪಕ್ಷ ನಾಯಕರುಗಳು ಗಲಿಬಿಲಿಗೊಂಡಿದ್ದಾರೆ. ಮೋದಿ ಅಮೇರಿಕಾ ಭೇಟಿಯಿಂದಾಗಿ ಅಂತದ್ದೇನಾಯಿತು!?, ಇಲ್ಲಿದೆ ಉತ್ತರ.
ವಿಶ್ವದ ದೊಡ್ಡಣ್ಣ ಎಂದು ಒಂದು ಕಾಲದಲ್ಲಿ ಕರೆಸಿಕೊಳ್ಳುತ್ತಿದ್ದ ಅಮೆರಿಕಾ ನೆಲದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಈ ಮೂಲಕ ಭಾರತದ ತಾಕತ್ತು ಏನು ಎಂಬುದು ಜಗತ್ತಿಗೆ ಮನವರಿಕೆ ಆಗಿದೆ. ಅಮೆರಿಕದ ಶಕ್ತಿಕೇಂದ್ರ ಎಂದೇ ಬಿಂಬಿತವಾಗಿರುವ ವೈಟ್ ಹೌಸ್‌ನಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಅಮೇರಿಕಾ ಅಧ್ಯಕ್ಷನಿಗೆ ಮೋದಿಯಿಂದ ಹಿಂದೂ ಪರಂಪರೆಯಂತೆ ದಶದಾನ!
ಅಮೆರಿಕ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಉಡುಗೊರೆ ಜಗತ್ತಿನಾದ್ಯಂತ ಸದ್ದು ಮಾಡಿದೆ. ಬೆಳ್ಳಿ ತೆಂಗಿನಕಾಯಿ (ಗೋದಾನದ ಪ್ರತೀಕ), ಶ್ರೀಗಂಧ (ಭೂದಾನದ ಪ್ರತೀಕ), ಬಿಳಿ ಎಳ್ಳು, ಚಿನ್ನದ ನಾಣ್ಯ, ತುಪ್ಪ, ವಸ್ತ್ರ, ಅಕ್ಕಿ, ಬೆಲ್ಲ , ಬೆಳ್ಳಿ ನಾಣ್ಯ, ಮತ್ತು ಉಪ್ಪು ಇವುಗಳನ್ನು ಒಳಗೊಂಡ ಮೈಸೂರು ಶ್ರೀಗಂಧದ ಪೆಟ್ಟಿಗೆಯನ್ನು ದಾನಾರ್ಥವಾಗಿ ನೀಡಿದರು. ಪ್ರಧಾನಿ ಅವರ ಈ ನಡೆ ಹಿಂದೂ ವಿರೋಧಿಗಳ ಕಣ್ಣು ಕೆಂಪಾಗಿಸಿದ್ದು ಸುಳ್ಳಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಭೇಟಿಯನ್ನು ಭಾರತದ ಶತ್ರು ರಾಷ್ಟ್ರಗಳು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿವೆ. ಪಾಕ್ ಪ್ರೇರಿತ ಉಗ್ರವಾದಕ್ಕೂ ಮೋದಿ ಅಮೇರಿಕಾದ ನೆಲದಲ್ಲಿ ನಿಂತು ಚಾಟಿ ಬೀಸಿದ್ದು ನೆರೆಯ ಪಾಕಿಸ್ಥಾನಕ್ಕೂ ಉರಿ ತರಿಸಿದೆ. ಅಮೆರಿಕ ಮತ್ತು ಭಾರತದ ಮಧ್ಯೆ ಹಲವು ಪ್ರಮುಖ ಒಪ್ಪಂದಗಳು ನಡೆದಿರುವುದರಿಂದಾಗಿ ಭಾರತ ವಿರೋಧಿ ಶಕ್ತಿಗಳಿಗೂ ಜೇನು ಕಚ್ಚಿದ ಅನುಭವವಾಗಿದೆ.
ಜಗತ್ತು ಕಣ್ಣರಳಿಸಿ ನೋಡಿದ್ದು ಸುಮ್ಮನೆಯಲ್ಲ, ನಡೆದಿದೆ ಭಾರೀ ಒಪ್ಪಂದ!
ಗುಜರಾತ್‌ನಲ್ಲಿ ಸೆಮಿಕಂಡಕ್ಟರ್ (ಚಿಪ್) ಜೋಡಣೆ ಮತ್ತು ಪರೀಕ್ಷಾ ಘಟಕ ಅರಂಭಿಸುವುದಾಗಿ ಅಮೆರಿಕ ಮೂಲದ ಮೈಕ್ರಾನ್ ಟೆಕ್ನಾಲಜಿ ಘೋಷಣೆ ಮಾಡಿದೆ. ಇದರಿಂದ ಭಾರತದಲ್ಲಿ 22,540 ಕೋಟಿ ಬಂಡವಾಳ ಹೂಡಿಕೆಯಾಗಲಿದೆ.
ಭಾರತ-ನಾಸಾ ನಡುವೆ ಅಂತರಿಕ್ಷ ಒಪ್ಪಂದ ಏರ್ಪಟ್ಟಿದ್ದು, ನಾಸಾ-ಇಸ್ರೋದಿಂದ 2024ರಲ್ಲಿ ಅಂತರಿಕ್ಷ ಕೇಂದ್ರಕ್ಕೆ ಮಾನವ ಸಹಿತ ಜಂಟಿ ಯಾನ ಕೈಗೊಳ್ಳಲಿದೆ. ಜಂಟಿಯಾಗಿ ವಿವಿಧ ಬಾಹ್ಯಾಕಾಶ ಅನ್ವೇಷಣೆಗೂ ಸಮ್ಮತಿ ದೊರಕಿದೆ.
ಬೆಂಗಳೂರಿನ ಎಚ್ಎಎಲ್ ಹಾಗೂ ಅಮೆರಿಕದ ಜಿಇ ಏರೋಸ್ಪೇಸ್ ಒಪ್ಪಂದ ಮಾಡಿಕೊಂಡಿದ್ದು ಇನ್ನು ಮುಂದೆ ಸ್ವದೇಶಿ ತೇಜಸ್ ಯುದ್ಧವಿಮಾನಗಳಿಗೆ ಭಾರತದಲ್ಲೇ ಎಫ್ 414 ಎಂಜಿನ್ ಉತ್ಪಾದನೆಯಾಗಲಿದೆ.
ಎಚ್1ಬಿ ವೀಸಾ ನವೀಕರಣ ಬಹುನಿರೀಕ್ಷಿತ ನಿಯಮ ಸಡಿಲಗೊಳಿಸಲಾಗಿದೆ. ಭಾರತೀಯ ಟೆಕ್ಕಿಗಳು ವೀಸಾ ನವೀಕರಣಕ್ಕಾಗಿ ಸ್ವದೇಶಕ್ಕೇ ಹೋಗಬೇಕು ಎಂಬ ನಿಮಯ ಬದಲಾಗಿದ್ದು ಇದರಿಂದ 4.42 ಲಕ್ಷ ಟೆಕ್ಕಿಗಳಿಗೆ ಅನುಕೂಲವಾಗಲಿದೆ.
ಅಮೆರಿಕದಿಂದ ಅತ್ಯಾಧುನಿಕ ಎಂಕ್ಯು-9 ರೀಪರ್ ಸಶಸ್ತ್ರ ಡ್ರೋನ್ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು ಈ ಡ್ರೋನ್ಗಳು ಹಳೆಯ ಡ್ರೋನ್ಗಳಿಗಿಂತ 9 ಪಟ್ಟು ಹೆಚ್ಚು ಬಲಶಾಲಿ, 500 ಪಟ್ಟು ಹೆಚ್ಚು ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರಲಿವೆ.
ಉಭಯ ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಅಹಮದಾಬಾದ್‌ಗಳಲ್ಲಿ ಅಮೆರಿಕದ ದೂತಾವಾಸ ತೆರೆಯಲು ಹಾಗೂ ಸಿಯಾಟಲ್‌ನಲ್ಲಿ ಭಾರತದ ದೂತವಾಸ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಇದರಿಂದಾಗಿ ಕರ್ನಾಟಕದ ಜನರಿಗೆ ಇನ್ನು ಬೆಂಗಳೂರಿನಲ್ಲೇ ಅಮೆರಿಕದ ವೀಸಾ ಪಡೆಯಲು ಸಾಧ್ಯವಾಗಲಿದೆ. ಈವರೆಗೆ ಕರ್ನಾಟಕದ ಜನತೆ ಅಮೆರಿಕದ ವೀಸಾ ಪಡೆಯಲು ಚೆನ್ನೈ ಅಥವಾ ಹೈದರಾಬಾದ್‌ಗೆ ತೆರಳಬೇಕಿತ್ತು.
ಹೀಗೆ ಒಪ್ಪಂದದಿಂದ ಹಿಡಿದು ವಿದೇಶಾಂಗ ನೀತಿ, ಮಿತ್ರತ್ವ, ಭಾರತದ ಘನತೆ ಎಲ್ಲವನ್ನೂ ನರೇಂದ್ರ ಮೋದಿ ಎಂಬ ಶಕ್ತಿಯೊಂದು ಅಮೋಘವಾಗಿಸಿದೆ. ಮೋದಿಯ ಇದೇ ಶಕ್ತಿ ದೇಶದ ಹೊರಗಿನ ಮತ್ತು ಒಳಗಿನ ಶತ್ರುಗಳ ನಿದ್ದೆಗೆಡಿಸಿದೆ. ಭಾರತವನ್ನು ವಿಶ್ವವಂದ್ಯವಾಗಿಸುವ ನಿಟ್ಟಿನಲ್ಲಿ ನಮ್ಮ ದೇಶದ ಪ್ರಧಾನಿ ಸವೆಸುವ ಪ್ರತಿಹೆಜ್ಜೆಗಳೂ ಫಲಪ್ರದವಾಗಿರಲಿ ಎಂಬುದು ನ್ಯೂಸ್ ನಿರಂತರದ ಆಶಯ.
Hi, this is a comment.
To get started with moderating, editing, and deleting comments, please visit the Comments screen in the dashboard.