ವಿಶೇಷ

ಕಾಂಗ್ರೆಸ್‌ ಸರ್ಕಾರದ ತುಘಲಕ್‌ ನೀತಿ ವಿರುದ್ಧ ಸಿಡಿದೆದ್ದ ಹಿಂದೂಗಳು!

Share News

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ದಿನಗಳಾಗುವಷ್ಟರಲ್ಲಿ ತುಘಲಕ್‌ ದರ್ಬಾರ್‌ ಆರಂಭಿಸಿದೆ. ಹಿಂದೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲೂ ಬಿಬಿಎಂಪಿ ಅನುಮತಿ ಪಡೆದುಕೊಳ್ಳಬೇಕು ಎನ್ನುವ ನಿಯಮವನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನತೆ ಅಸಮಾಧಾನ ಹೊರಹಾಕುತ್ತಿದ್ದಾರೆ.

ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರಿಗೆ ಉಪ್ಪಾರಪೇಟೆ ಪೊಲೀಸ್‌ ಠಾಣೆಯಿಂದ ನೋಟಿಸ್‌ ನೀಡಲಾಗಿದ್ದು, ನೋಟೀಸಿನಲ್ಲಿ, ಈ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ, ತಾವುಗಳು ದಿನಾಂಕ 09/07/2023 ರಿಂದ ಪ್ರತಿ ಭಾನುವಾರ ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 01.00 ಗಂಟೆವರೆಗೆ ಸಂಕಲ್ಪ ಹಿಂದೂ ರಾಷ್ಟ್ರ ಇದರ ವತಿಯಿಂದ ಶ್ರೀ. ಪುನೀತ್ ಕೆರೆಹಳ್ಳಿ ಆದ ನಿಮ್ಮ ನೇತೃತ್ವದಲ್ಲಿ ಬೆಂಗಳೂರು ನಗರ, ಮೆಜೆಸ್ಟಿಕ್ ಬಳಿ ಇರುವ ಬಿಬಿಎಂಪಿ ಗ್ರೌಂಡ್ ಪಕ್ಕದಲ್ಲಿರುವ ಪುರಾತನ ನಾಗರಕಟ್ಟೆ ಯ ಬಳಿ ನಾಗ ದೇವರ ಪೂಜೆಯನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬ ಹಿಂದೂ ಕಾರ್ಯಕರ್ತರು ಮರೆಯದೇ ತಮ್ಮ ಕುಟುಂಬ ಸಮೇತವಾಗಿ ಭಾಗವಹಿಸಬೇಕೆಂದು ತಮ್ಮ ಸಾಮಾಜಿಕ ಜಾಲತಾಣದ ಪೇಜ್‌ನಲ್ಲಿ ಹಂಚಿಕೊಂಡಿರುತ್ತೀರಿ. ಸದರಿ ವಿಚಾರಕ್ಕೆ ಸಂಬಂಧಿಸಿದಂತೆ, ತಾವುಗಳು ಬಿಬಿಎಂಪಿ ಗ್ರೌಂಡ್ ಪಕ್ಕದಲ್ಲಿರುವ ಪುರಾತನ ನಾಗರಕಟ್ಟೆಯ ಬಳಿ ಪೂಜೆಯನ್ನು ಮಾಡಲು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳಿಂದ ಅನುಮತಿಯನ್ನು ಪಡೆದಿರುತ್ತೀರಾ? ಪಡೆದಿದ್ದಲ್ಲಿ ಅನುಮತಿ ಪತ್ರದ ಒಂದು ಪ್ರತಿಯನ್ನು ನೀಡಲು ತಮಗೆ ಸೂಚಿಸಿದೆ ಎಂದು ತಿಳಿಸಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕತವಾಗುತ್ತಿದ್ದು ಬಿಜೆಪಿ ನಾಯಕರು, ಹಿಂದೂ ಸಂಘಟನೆಗಳು, ರಾಷ್ಟ್ರೀಯವಾದಿಗಳು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮುಗಿಬೀಳುತ್ತಿದ್ದಾರೆ. ಈ ಕುರಿತು ಇಂದು ಟ್ವೀಟ್ ಮಾಡಿರುವ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ. ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಿಂದೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲೂ ಅನುಮತಿ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಕಾನೂನು ಸುವ್ಯವಸ್ಥೆಯ ದೃಷ್ಠಿಯಿಂದ ಪೋಲಿಸರ ಗಮನಕ್ಕೆ ತರಬೇಕೆನ್ನುವುದನ್ನು ಒಪ್ಪಬಹುದು, ಆದರೆ ಪೂಜೆ ಸಲ್ಲಿಸಲು BBMP ಅನುಮತಿ ಪಡೆದುಕೊಳ್ಳಬೇಕೆನ್ನುವ ನಿಯಮ ‘ತುಘಲಕ್’ ಆಡಳಿತ ನೆನಪಿಗೆ ತರಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಬಿಜೆಪಿಯ ಮತ್ತೊಬ್ಬ ಫಯರ್‌ ಬ್ರ್ಯಾಂಡ್ ಶಾಸಕ ಬಸವನಗೌಡ ಯತ್ನಾಳ್‌, ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಅಲ್ಲಿರುವ ನಾಗರಕಟ್ಟೆಯ ಪೂಜೆ ಮಾಡುವ ಹಿಂದುಗಳಿಗೆ ನೋಟಿಸ್ ಜಾರಿ ಮಾಡಿರುವುದು ಪೊಲೀಸರು ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸಂದೇಹ ಮೂಡಿಸಿದೆ. ಬಿಬಿಎಂಪಿ ಅನುಮತಿ ಪಡೆಯಬೇಕಾದರೆ ಬಿಬಿಎಂಪಿಯವರು ನೋಟಿಸ್ ಜಾರಿ ಮಾಡುವುದನ್ನು ಹೊರತು, ಪೊಲೀಸರು ಕೊಟ್ಟಿರುವುದು ಬಿಬಿಎಂಪಿಯ ಆಪ್ತ ಸಹಾಯಕರ ಎಂಬ ಸಂಶಯ ಮೂಡಿಸುತ್ತಿದೆ. ಹಿಂದೂಗಳು ಈ ರಾಜ್ಯದಲ್ಲಿ ಪೂಜೆ ಮಾಡಲು ಪೊಲೀಸರ ಹಾಗು ಬಿಬಿಎಂಪಿಯವರ ಅನುಮತಿ ಪಡೆಯಬೇಕೇ ಎಂದು ಟ್ವಟ್ಟರ್‌ ಮೂಲಕ ಕಿಡಿ ಕಾರಿದ್ದಾರೆ.

ಯುವಾ ಬ್ರಿಗೇಡ್‌ ಮಾರ್ಗದರ್ಶಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಟ್ವೀಟ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ಈ ನಿರ್ಧಾರ ಉಲ್ಲೇಖಿಸಿ ಸಿದ್ದರಾಮಯ್ಯ ಸರ್ಕಾರವನ್ನು ಹಿಟ್ಲರ್‌ ಸರ್ಕಾರ ಎಂದು ಜರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ರಾಷ್ಟ್ರೀಯವಾದಿಗಳು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬರಹದ ಚಾಟಿ ಬೀಸುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button