ರಾಹುಲ್ ಗಾಂಧಿಯ ಕೆಪ್ತಂಡೆಗೆ ಬಾರಿಸಬೇಕು ಎಂದಾಗ ರೊಚ್ಚಿಗೆದ್ದಿದ್ದೇಕೆ ಕಾಂಗ್ರೆಸ್?
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ಮಾತುಗಳು ಕಾಂಗ್ರೆಸ್ ಪಾಳಯವನ್ನು ಕೆರಳಿಸಿದೆ. ಹಿಂದೂ ಹಿಂಸೆ ಮಾಡುತ್ತಾನೆ ಎಂದಾಗ ಮೌನವಾಗಿದ್ದ ಕಾಂಗ್ರೆಸ್, ಈಗ ರಾಹುಲ್ ಗಾಂಧಿಯ ಕೆನ್ನೆಗೆ ಬಾರಿಸಬೇಕು ಎಂದಾಗ ರೊಚ್ಚಿಗೆದ್ದಿದೆ.
ಭರತ್ ಶೆಟ್ಟಿಯವರ ಹೇಳಿಕೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಮನವಿ ನೀಡಿದ್ದರು ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ಕೂಡಾ ನಡೆಸಿದ್ದರು, ಎಫ್ಐಆರ್ ಕೂಡಾ ದಾಖಲಾಗಿದೆ. ಕಾಂಗ್ರೆಸ್ ನಾಯಕರ ಈ ದ್ವಂದ್ವ ನಿಲುವಿಗೆ ಬಿಜೆಪಿ ಕಿಡಿಕಾರಿದೆ. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಪೋಸ್ಟ್ ವಾರ್ ನಡೆಸುತ್ತಿದ್ದಾರೆ.
ಫೇಸ್ಬುಕ್, ವಾಟ್ಸ್ಯಾಪ್ ಮೂಲಕ ಭರತ್ ಶೆಟ್ಟಿಯವರ ಹೇಳಿಕೆಯನ್ನು ಬಿಜೆಪಿ ಪಾಳಯ ಸಮರ್ಥಿಸಿಕೊಳ್ಳುತ್ತಿದೆ. “ಒಬ್ಬ ಪ್ರಜ್ಞಾವಂತ ಹಿಂದೂವಾಗಿ ರಾಹುಲ್ ಗಾಂಧಿಯಂತಹ ಹಿಂದೂ ವಿರೋಧಿಗೆ ಯಾವ ರೀತಿ ಉತ್ತರ ಕೊಡಬೇಕೋ ಆ ರೀತಿಯ ಉತ್ತರವನ್ನು ಶಾಸಕ ಭರತ್ ಶೆಟ್ಟಿಯವರು ಕೊಟ್ಟಿದ್ದಾರೆ. ರಾಹುಲ್ ಗೆ ಹೊಡಿಯುವ ಮೊದಲು ಇವರ ಹೇಳಿಕೆಯನ್ನು ವಿರೋಧಿಸುವ ಕೆಲವು ಲಾಟ್ ಪೊಟ್ ಕಾಂಗ್ರೆಸ್ ಲೀಡರ್ ಗಳ ಕೆನ್ನೆಗೆ ಹೊಡಿಬೇಕು” ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಬೋಳಿಯಾರಿನಲ್ಲಿ ಭಾರತ ಮಾತೆಗೆ ಜಯಕಾರ ಕೂಗಿದ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಹಾಕಿದ ಡಿಕೆಶಿ ಬ್ರದರ್ಸ್ ಬಗ್ಗೆ ರಮಾನಾಥ ರೈ ಮಾತಾಡಿಲ್ಲ. ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿಯನ್ನು ಹತ್ಯೆಗೈದ (ಅ)ಶಾಂತಿದೂತರ ಬಗ್ಗೆ ಅಭಯಚಂದ್ರ ಜೈನ್ ಮಾತಾಡಿಲ್ಲ. ಹಿಂದೂ ಧರ್ಮವನ್ನು ಅವಹೇಳನ ಮಾಡಿದ ರಾಹುಲ್ ಗಾಂಧಿಗೆ ನಮ್ಮ ಶಾಸಕ ಭರತ್ ಶೆಟ್ಟಿಯವರು ಬೈದಾಗ ನವರಂದ್ರದಲ್ಲೂ ಉರಿಯಿಟ್ಟಾಗೆ ಆಗುತ್ತದೆ, ನೆಹರು ಪರಿವಾರದ ಜೀತದಾಳುಗಳ ಪರಿಸ್ಥಿತಿ ಇದು, ಎಂದು ಬಿಜೆಪಿ ದಕ್ಷಿಣ ಕನ್ನಡದ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಪಾಪಿಸ್ತಾನಕ್ಕೆ ಜೈ ಅಂದಾಗ ನೋವಾಗಿಲ್ಲ, ರಾಮ ಮಂದಿರ ಧ್ವಂಸ ಮಾಡುತ್ತೇವೆ ಅಂದಾಗ ನೋವಾಗಿಲ್ಲ, ಹಿಂದೂ ಎಂದರೆ ಹಿಂಸೆ, ಅಸತ್ಯ ಎಂದು ಸದನದಲ್ಲೇ ನುಡಿದಾಗ ನೋವಾಗಿಲ್ಲ. ಅದೇ ನೆಹರು ಪರಿವಾರದ ಕುಡಿಗೆ ಕೆನ್ನೆಗೆ ಬಾರಿಸಬೇಕು ಎಂದಾಗ ಎಷ್ಟೊಂದು ನೋವಾಗುತ್ತದೆ ಅಲ್ವಾ ಕಾಂಗ್ರೆಸ್ ನಾಯಕರೇ? ಕಾಂಗ್ರೆಸ್ಸಿಗರೇ ದೇಶದ್ರೋಹಿಗಳ ಪರವಾಗಿ ನೀವು ನಿಲ್ಲುವಿರಾದರೆ ನಾವು ನಮ್ಮ ಶಾಸಕರ ಪರ ನಿಲ್ಲುತ್ತೇವೆ ಎಂದು ಕಾರ್ಯಕರ್ತರು ಅಭಿಮಾನ ತೋರಿಸುತ್ತಿದ್ದಾರೆ.
ಒಟ್ಟಾರೆಯಾಗಿ ಕಾಂಗ್ರೆಸ್ ನಿಲುವುಗಳು ಅದಕ್ಕೆ ಮುಳುವಾಗುತ್ತಿದೆ. ಹಿಂದೂ ಸಮಾಜದ ವಿರುದ್ಧ ತಮ್ಮ ನಾಯಕ ರಾಹುಲ್ ಗಾಂಧಿ ಮಾತನಾಡಿದರೂ ಅದನ್ನು ಸಮರ್ಥಿಸಿಕೊಳ್ಳುವಷ್ಟು ಗುಲಾಮಗಿರಿಯನ್ನು ಕಾಂಗ್ರೆಸ್ ನಾಯಕರು ಬೆಳೆಸಿಕೊಂಡಿರುವುದು ಅಪಾಯಕಾರಿ ನಡೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.