ಪರಂಪರೆ

ಮಾವಿನೆಲೆಯ ತೋರಣದ ಮಹತ್ವವೇನು ಗೊತ್ತೇ?

Share News

ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿ ಆರಾಧನೆ ಪ್ರಾಮುಖ್ಯತೆ ಪಡೆದಿದೆ. ಹಿಂದೂ ಸಂಸ್ಕೃತಿ, ಪರಂಪರೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಹಬ್ಬ ಹರಿದಿನಗಳು ಹಿಂದೂ ಪರಂಪರೆಯಲ್ಲಿ ಸಂಭ್ರಮವನ್ನು ಹೆಚ್ಚಿಸುತ್ತೇವೆ. ಈ ಸಂಭ್ರಮದ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿರುವ ಒಂದಂಶವೆಂದರೆ ಅದು ತಳಿರು ತೋರಣ. ತೋರಣಗಳೇ ಮನೆಮನದಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತದೆ. ಪ್ರವೇಶ ದ್ವಾರ, ಊರ ಹೆಬ್ಬಾಗಿಲು, ದೇವಸ್ಥಾನದ ಮುಖ್ಯ ದ್ವಾರ, ಮನೆಯ ಮುಂಬಾಗಿಲು, ದೇವರ ಕೋಣೆಯ ಪ್ರವೇಶದ ಬಾಗಿಲು ಇಲ್ಲೆಲ್ಲಾ ಮಾವಿನ ತಳಿರು ತೋರಣ ಕಂಗೊಳಿಸುತ್ತಿರುತ್ತದೆ. ಮಾವಿನ ಎಲೆಯ ತೋರಣವನ್ನೇ ಏಕೆ ಕಟ್ಟಬೇಕು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಹಿಂದೂ ಪರಂಪರೆಯ ಎಲ್ಲಾ ಆಚರಣೆಗಳ ಹಿಂದೆ ವೈಜ್ಞಾನಿಕ ಸತ್ಯಗಳಿರುತ್ತದೆ. ನಮ್ಮ ಪೂರ್ವಜರು ಸಂಪ್ರದಾಯದ ಹೆಸರಿನಲ್ಲಿ ವೈಜ್ಞಾನಿಕ ಸತ್ಯಗಳನ್ನು ಪರೋಕ್ಷವಾಗಿ ನಮ್ಮ ನಡುವೆ ಬಿತ್ತಿದ್ದಾರೆ. ತೋರಣದ ವಿಚಾರಕ್ಕೆ ಬರುವುದಾದರೆ, ಮರಗಳ ಹಸಿರು ಎಲೆಗಳು ದ್ಯುತಿ ಸಂಶ್ಲೇಷಣ ಕ್ರಿಯೆಯ ಮೂಲಕ ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಅದರ ಬದಲಿಗೆ ಆಮ್ಲಜನಕ ಬಿಡುಗಡೆ ಮಾಡುತ್ತವೆ. ಆಮ್ಜನಕ ಮನುಷ್ಯ ಜೀವಕ್ಕೆ ಅತಿಮುಖ್ಯ. ಶುಭ-ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು ಒಂದೆಡೆ ಸೇರಿದಾಗ, ಜನದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು ಹಾಗಾಗಿ ಅಂತಹ ಆಮ್ಲಜನಕದ ಕೊರತೆಯನ್ನು ಈ ತೋರಣಗಳು ನೀಗಿಸುತ್ತವೆ. ಹೀಗಾಗಿ ಸಮಾರಂಭದ ಮಂಟಪದ ಸುತ್ತಮುತ್ತಲೂ ತೋರಣ ಕಟ್ಟುವ ಸಂಪ್ರದಾಯವಿದೆ.

ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಯು ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳಸಲಾಗುತ್ತದೆ.

ಇನ್ನು ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ. ಅದೆ ರೀತಿ ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ ಮತ್ತು ಮನೆಯ ವಾತವಾರಣ ಶುಭ್ರವಾಗಿದ್ದು ಆ ವ್ಯಕ್ತಿಯ ಮನಸ್ಸು ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ.

Leave a Reply

Your email address will not be published. Required fields are marked *

Back to top button