ಅಧಿಕಾರಕ್ಕೇರಿದ ಕೆಲವೇ ಗಂಟೆಗಳಲ್ಲಿ ಚುನಾವಣೆಯ ಭರವಸೆ ಈಡೇರಿಸಿದ ಒಡಿಶಾ ಬಿಜೆಪಿ ಸರ್ಕಾರ!
ಅಧಿಕಾರಕ್ಕೆ ಬರುತ್ತಿದ್ದಂತೆಯೇ ಒಡಿಶಾ ಬಿಜೆಪಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಒಡಿಶಾದಲ್ಲಿ ಹೊಸ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಪುರಿ ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳನ್ನು ಭಕ್ತರಿಗಾಗಿ ತೆರೆಯಲಾಗಿದೆ. ಕೋವಿಡ್ ಕಾರಣದಿಂದಾಗಿ ಈ ದ್ವಾರಗಳನ್ನು ಬಂದ್ ಮಾಡಲಾಗಿತ್ತು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನುಡಿದಂತೆ ಪುರಾಣ ಪ್ರಸಿದ್ದ ಪುರಿ ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳನ್ನು ಇಂದಿನಿಂದ (ಜೂನ್ 13) ತೆರೆಯಲಾಗಿದೆ. ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸರ್ಕಾರ ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.
ಭಕ್ತಾದಿಗಳು ಇನ್ನು ಮುಂದೆ ಎಲ್ಲಾ ನಾಲ್ಕು ದ್ವಾರಗಳ ಮೂಲಕ ಪುರಿ ಜಗನ್ನಾಥನ ದರ್ಶನ ಪಡೆಯಬಹುದಾಗಿದೆ ಎಂದು ಸಿಎಂ ಮೋಹನ್ ಚರಣ್ ಮಾಜ್ಹಿ ಹೇಳಿದ್ದಾರೆ. ದೇವಾಲಯದ ನಾಲ್ಕೂ ದ್ವಾರಗಳನ್ನು ತೆರೆಯುವುದು ಬಿಜೆಪಿ ಪ್ರಣಾಳಿಕೆಯ ಅಂಶವಾಗಿತ್ತು. ಗೇಟ್ ಗಳನ್ನು ಮುಚ್ಚಿದ್ದರಿಂದ ಭಕ್ತಾದಿಗಳಿಗೆ ಅನನುಕೂಲವಾಗಿತ್ತು.
ಹಿಂದಿನ BJD ಆಡಳಿತವು COVID-19 ಸಾಂಕ್ರಾಮಿಕ ರೋಗದಿಂದ ದೇವಾಲಯದ ನಾಲ್ಕು ದ್ವಾರಗಳನ್ನು ಮುಚ್ಚುವುದನ್ನು ಮುಂದುವರೆಸಿತ್ತು. ಭಕ್ತರು ಒಂದು ಗೇಟ್ ಮೂಲಕ ಮಾತ್ರ ಪ್ರವೇಶಿಸಬಹುದಾಗಿತ್ತು. ಅನಾನುಕೂಲವಾಗುತ್ತಿದ್ದ ಕಾರಣ ಎಲ್ಲಾ ದ್ವಾರಗಳನ್ನು ತೆರೆಯಬೇಕು ಎಂಬ ಒತ್ತಾಯ ಕೇಳಿಬಂದಿತ್ತು.