ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ, ಬಜ್ಪೆ ಠಾಣೆಯ ಮುಸ್ಲಿಂ ಪೇದೆ ಭಾಗಿ ಶಂಕೆ

ಮಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಮತಾಂಧ ಶಕ್ತಿಗಳಿಂದ ದಾರುಣವಾಗಿ ಹತ್ಯೆಗೊಳಗಾದ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಬಜಪೆ ಠಾಣೆಯ ಮುಖ್ಯಪೇದೆಯೊಬ್ಬರು ಭಾಗಿಯಾದ ಶಂಕೆ ವ್ಯಕ್ತವಾಗಿದೆ. ಸುಹಾಶ್ ಶೆಟ್ಟಿ ಮೇಲಿನ ಭೀಕರ ತಲವಾರ್ ದಾಳಿ ಹಾಗೂ ಕೊಲೆ ಪ್ರಕರಣ ಸಂಬಂಧ 8 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಈ ನಡುವೆ ಕೆಲವೊಂದು ಸ್ಪೋಟಕ ಮಾಹಿತಿಗಳು ಹೊರಬೀಳುತ್ತಿದೆ. ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಬಜ್ಪೆ ಪೊಲೀಸ್ ಮುಖ್ಯ ಪೇದೆ ರಶೀದ್ ಭಾಗಿಯಾಗಿದ್ದಾನೆ ಎನ್ನುವ ಗಂಭೀರ ಆರೋಪವನ್ನು ಹಿಂದೂ ಜಾಗರಣ ವೇದಿಕೆಯ ಪ್ರಮುಖ ನಾಯಕ ಕೆಟಿ ಉಲ್ಲಾಸ್ ಹೊರಿಸಿದ್ದಾರೆ.
ಬಜ್ಪೆ ಠಾಣೆಯ ಪೊಲೀಸ್ ಮುಖ್ಯ ಪೇದೆ ರಶೀದ್ ಹಲವು ಬಾರಿ ಸುಹಾಸ್ ಶೆಟ್ಟಿಗೆ ಕರೆ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಉಲ್ಲಾಸ್ ಆರೋಪಿಸಿದ್ದಾರೆ. ಜೀವ ಬೆದರಿಕೆ ಎದುರಿಸುತ್ತಿದ್ದ ಸುಹಾಸ್ ಶೆಟ್ಟಿ ಆತ್ಮರಕ್ಷಣೆಗಾಗಿ ತಮ್ಮ ವಾಹನದಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದು, ಪೊಲೀಸರು ಕಾನೂನು ಕ್ರಮದ ಬೆದರಿಕೆ ಒಡ್ಡಿ ಸುಹಾಸ್ ಶೆಟ್ಟಿಯನ್ನು ನಿರಾಯುಧನನ್ನಾಗಿ ಮಾಡಿದ್ದಾರೆ ಮತ್ತು ಜೀವ ರಕ್ಷಣೆ ಎದುರಿಸುತ್ತಿದ್ದ ಸುಹಾಸ್ ಶೆಟ್ಟಿಗೆ ಸೂಕ್ತ ರಕ್ಷಣೆಯನ್ನೂ ನೀಡಿಲ್ಲ.
ಸುಹಾಸ್ ಶೆಟ್ಟಿ ಬಳಿ ಯಾವುದೇ ಆಯುಧ ಇಲ್ಲ, ನಿರಾಯುಧನಾಗಿ ಬಜ್ಪೆ ಮಾರ್ಗವಾಗಿ ಸಾಗುತ್ತಿದ್ದಾನೆ ಎನ್ನುವ ಮಾಹಿತಿ ಪೊಲೀಸ್ ಮುಖ್ಯ ಪೇದೆ ರಶೀದ್ ಮೂಲಕ ರವಾನೆಯಾಗಿದೆ, ಹೀಗಾಗಿ ವ್ಯವಸ್ಥಿತವಾಗಿ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಎಂದು ಕೆಟಿ ಉಲ್ಲಾಸ್ ಆರೋಪಿಸಿದ್ದಾರೆ.