Latest Newsಪರಂಪರೆ

ಜಗತ್ತಿನ ಅತಿದೊಡ್ಡ ಹಿಂದೂ ದೇವಾಲಯ‌ ಎಲ್ಲಿದೆ, ಹೇಗಿದೆ ಗೊತ್ತಾ?

Share News

ಜಗತ್ತಿನಲ್ಲಿ ಹಿಂದೂ ಪರಂಪರೆಯ ಹೆಜ್ಜೆಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತದೆ. ವಿಶ್ವದಾದ್ಯಂತ ಅನೇಕ ಧರ್ಮ, ಮತಗಳು ಚಾಲ್ತಿಯಲ್ಲಿದ್ದರೂ ಭರತಭೂಮಿಯ ಸಾಂಸ್ಕೃತಿಕ ತುಣುಕುಗಳು ಜಗತ್ತಿನ ಮೂಲೆಮೂಲೆಯಲ್ಲೂ ಕಾಣಸಿಗುತ್ತದೆ. ಹಿಂದೂ ಧರ್ಮ ಎಂದಾಗ ಅಲ್ಲಿ ಆಚಾರ ವಿಚಾರ, ಪರಂಪರೆಯದ್ದೇ ಇತಿಹಾಸ. ನಂಬಿಕೆಗಳ ಮೇಲೆಯೇ ಹಿಂದೂ ಧರ್ಮದ ತಳಹದಿ ನಿಂತಿದೆ. ದೈವ, ದೇವರು ಪ್ರಧಾನವಾಗಿರುವ ಭಾರತದಲ್ಲಿ ಭಾರತದಲ್ಲಿ ಗಲ್ಲಿ ಗಲ್ಲಿಗಳಲ್ಲೂ ದೇವಸ್ಥಾನಗಳಿವೆ. ಹಿಂದೂ ದೇವಾಲಯಗಳು ಕೇವಲ ಭಾರತದಲ್ಲಷ್ಟೇ ಅಲ್ಲ, ಹೊರ ದೇಶದಲ್ಲೂ ಕಾಣಸಿಗುತ್ತವೆ. ಭಾರತ ಬಹುದೊಡ್ಡ ಹಿಂದೂ ರಾಷ್ಟ್ರವಾದರೂ ಬೃಹತ್‌ ಹಿಂದೂ ದೇವಾಲಯ ಇರುವುದು ಮಾತ್ರ ಭಾರತದಲ್ಲಲ್ಲ ಎಂಬ ಸತ್ಯವನ್ನು ನಾವು ನಂಬಲೇಬೇಕು.

ಕಾಂಬೋಡಿಯಾದಲ್ಲಿದೆ ಬೃಹತ್‌ ಹಿಂದೂ ದೇವಾಲಯ :

ಕಾಂಬೋಡಿಯಾದ ಅಂಕೋರ್ ವಾಟ್ ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿರುವ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ದೇವಾಲಯವನ್ನು ವಿಶ್ವದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ವಿಷ್ಣುವಿನ ದೇವಾಲಯದ ವಿಸ್ತೀರ್ಣ 8 ಲಕ್ಷ 20 ಸಾವಿರ ಚದರ ಮೀಟರ್. ಈ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ.

ಅಂಕೋರ್‌ ವಾಟ್ ವಿಷ್ಣು ದೇವಾಲಯವು ಎತ್ತರದ ವೇದಿಕೆಯ ಮೇಲೆ ನೆಲೆಗೊಂಡಿದ್ದು, ಮೂರು ವಿಭಾಗಗಳನ್ನು ಹೊಂದಿದೆ. ಈ ಮೂರು ವಿಭಾಗಗಳಲ್ಲಿ ಶಿಲ್ಪಗಳನ್ನು ಕೆತ್ತಲಾಗಿದೆ. ಪ್ರತಿ ವಿಭಾಗದಲ್ಲಿ 8 ಗುಮ್ಮಟಗಳಿದ್ದು ಇವುಗಳ ಎತ್ತರ ಬರೋಬ್ಬರಿ 180 ಅಡಿ. ಮುಖ್ಯ ದೇವಾಲಯವು ಮೂರನೇ ವಿಭಾಗದ ಛಾವಣಿಯ ಮೇಲೆ ನೆಲೆಗೊಂಡಿದೆ. ಸುಮಾರು 1000 ಅಡಿ ಅಗಲವಿರುವ ದೇವಾಲಯಕ್ಕೆ ಪ್ರವೇಶಿಸಲು ಬೃಹತ್ ದ್ವಾರ ಮಾಡಲಾಗಿದೆ. ದೇವಾಲಯವು ಮೂರೂವರೆ ಕಿಲೋಮೀಟರ್ ಉದ್ದದ ಕಲ್ಲಿನ ಗೋಡೆಗಳಿಂದ ಆವೃತವಾಗಿದೆ. ಗೋಡೆಯ ನಂತರ 700 ಅಡಿ ಅಗಲದ ಕಂದಕವಿದ್ದು, ಅದರ ಮೇಲೆ ಒಂದೇ ಸ್ಥಳದಲ್ಲಿ 36 ಅಡಿ ಅಗಲದ ಸೇತುವೆಯಿದೆ. ಈ ಸೇತುವೆಯಿಂದ ದೇವಾಲಯದ ಮೊದಲ ಭಾಗವನ್ನು ತಲುಪಬಹುದು.

ಕಾಂಬೋಡಿಯಾದ ಮೆಕಾಂಗ್ ನದಿಯ ದಡದಲ್ಲಿರುವ ಸಿಮ್ರಿಪ್ ನಗರದಲ್ಲಿ ನಿರ್ಮಿಸಲಾದ ಈ ದೇವಾಲಯವು ನೂರಾರು ಚದರ ಮೈಲುಗಳಷ್ಟು ಹರಡಿದ್ದು ವಾರ್ಷಿಕ 2 ಮಿಲಿಯನ್ ಪ್ರವಾಸಿಗರು ಇದನ್ನು ನೋಡಲು ಬರುತ್ತಾರೆ. ದೇವಾಲಯವು ಮೂಲತಃ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪವಿತ್ರ ಸ್ಥಳವಾಗಿತ್ತು. ಆನಂತರ ಇದನ್ನು ಬೌದ್ಧ ಧರ್ಮಕ್ಕೆ ಪರಿವರ್ತಿಸಲಾಯಿತು.

ಇತಿಹಾಸ ಕೆದಕಿದರೆ ಸುಮಾರು 27 ರಾಜರು ಕಾಂಬೋಡಿಯಾ ದೇಶವನ್ನು ಆಳಿದ್ದಾರೆ. ಅವರಲ್ಲಿ ಕೆಲವರು ಹಿಂದೂಗಳು ಮತ್ತು ಕೆಲವರು ಬೌದ್ಧರು. ಕಾಂಬೋಡಿಯಾದಲ್ಲಿ ಹಿಂದೂ ಮತ್ತು ಬೌದ್ಧ ಎರಡಕ್ಕೂ ಸಂಬಂಧಿಸಿದ ಶಿಲ್ಪಗಳು ಕಂಡುಬರಲು ಇದೇ ಕಾರಣವಾಗಿದೆ. ಗೋಡೆಗಳ ಮೇಲೆ ಪೌರಾಣಿಕ ಕಥೆಗಳ ಚಿತ್ರಗಳು ಕಾಣುತ್ತವೆ. ದೇವಾಲಯದ ಗೋಡೆಗಳ ಮೇಲೆ ಅನೇಕ ಧಾರ್ಮಿಕ ಮತ್ತು ಪೌರಾಣಿಕ ಕಥೆಗಳನ್ನು ವರ್ಣಚಿತ್ರಗಳು ಮತ್ತು ಶಿಲ್ಪಗಳ ಮೂಲಕ ಕೆತ್ತಲಾಗಿದೆ. ಇದರಲ್ಲಿ ಹಿಂದೂ ಧರ್ಮದ ಜೊತೆಗೆ ಬೌದ್ಧ ಧರ್ಮದ ಪೌರಾಣಿಕ ಕಥೆಗಳನ್ನು ಸಹ ಕೆತ್ತಲಾಗಿದೆ.

Related Articles

Leave a Reply

Your email address will not be published. Required fields are marked *

Back to top button