Latest Newsಪ್ರಚಲಿತರಾಜಕೀಯ

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಸರ್ಕಾರದ ವಿರುದ್ಧ ಮಾಯಾವೀ ಯುದ್ಧ ಘೋಷಿಸಿದ್ದ ನಮೋ!!!

Share News

ಭಾರತಕ್ಕೆ ತುರ್ತು ಪರಿಸ್ಥಿತಿ ಘೋಷಿಸಿ 5 ವರ್ಷಗಳು ಪೂರ್ಣಗೊಂಡಿದೆ. ಅಧಿಕಾರದ ಅಮಲಿನಲ್ಲಿ, ಕುರ್ಚಿಗೆ ಗೂಟ ಹೊಡೆದು ಕೂರಲು ದ 1975, ಜೂನ್ 25 ರಂದು ದೇಶಕ್ಕೆ ತುರ್ತುಪರಿಸ್ಥಿತಿ ಹೇರಿದ್ದರು ಭಾರತದ ಹಿಟ್ಲರ್, ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿಯ ವೇಳೆಯಲ್ಲಿ ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವದ ಇವೆಲ್ಲವನ್ನೂ ಕಾಲಕಸ‌ ಮಾಡಿದ್ದರು ಇಂದಿರೆ.

ವಿರೋಧ ಪಕ್ಷದ ನಾಯಕರನ್ನು ಬಂಧಿಸಿ ಹೆಡೆಮುರಿ ಕಟ್ಟಿ ಜೈಲಿಗಟ್ಟುತ್ತಿದ್ದ ಕಾಲವದು. ಸಣ್ಣಪುಟ್ಟ ಕಾರ್ಯಕರ್ತರನ್ನು, ಸ್ವಯಂ ಸೇವಕರಿಗೆ ಪೊಲೀಸ್ ಬಲದ ಮೂಲಕ ಕಾಂಗ್ರೆಸ್ ನಾಯಕರು ತೊಂದರೆ ಕೊಡಲು ಆರಂಭಿಸಿದ್ದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸುತ್ತಿದ್ದ ನಾಯಕರನ್ನು ಬಂಧನ ಮಾಡಲಾಗಿತ್ತಿತ್ತು, ಆದರೆ ಈಗಿನ ಪ್ರಧಾನಿ, ಆಗ ಸಾಮಾನ್ಯ ಕಾರ್ಯಕರ್ತರಾಗಿದ್ದ ಮೋದಿ ಅವರನ್ನು ಮಾತ್ರ ಬಂಧನ ಮಾಡಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ನಮೋ!

ಈ ಬಾರಿಯ ಲೋಕಸಭಾ ಕಲಾಪದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಖಂಡನಾ ನಿರ್ಣಯ ಕೂಡಾ ಅಂಗೀಕರಿಸಲಾಗಿದೆ. ಇಡೀ ದೇಶದಲ್ಲಿ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದರ ಮಧ್ಯೆ ಒಂದು ಫೋಟೋ ಭಾರಿ ವೈರಲ್​​ ಆಗುತ್ತಿದೆ. ಅದು ನರೇಂದ್ರ ಮೋದಿ ಅವರ ಅಂದಿನ ಫೋಟೋ. 1975ರಲ್ಲಿ ಭಾರತದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಈ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನಾಯಕರನ್ನು ಬಂಧಿಸಲಾಗಿತ್ತು. ಆದರೆ ನರೇಂದ್ರ ಮೋದಿ ಅವರನ್ನು ಮಾತ್ರ ಬಂಧಿಸಲು ಸಾಧ್ಯವಾಗಿಲ್ಲ. ಇವರು ಕೂಡ ಈ ಹೋರಾಟದಲ್ಲಿ ಪ್ರಮುಖರಾಗಿದ್ದರು. ಮೋದಿ ಅವರನ್ನು ಯಾಕೆ ಬಂಧಿಸಿಲ್ಲ ಅಥವಾ ಯಾವ ಕಾರಣಕ್ಕೆ ಅವರು ಪೊಲೀಸರ ಕೈಗೆ ಸಿಕ್ಕಿಲ್ಲ ಎಂಬುದಕ್ಕೆ ಕಾರಣವೂ ಇದೆ.

ಹೌದು ಮೋದಿ ಅವರು ಈ ಹೋರಾಟದಲ್ಲಿ ಸಕ್ರಿಯವಾಗಿದ್ದರು. ಅವರು ದಿನಕ್ಕೊಂದು ವೇಷವನ್ನು ಧರಿಸಿಕೊಂಡು ಎಲ್ಲರನ್ನೂ ಸಂಘಟನೆ ಮಾಡುತ್ತಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಲು ಹಾಗೂ ಆರ್‌ಎಸ್​​ಎಸ್​​​​ ಸ್ವಯಂ ಸೇವಕರನ್ನು ಸಂಪರ್ಕಿಸಲು ಮೋದಿ ಅವರು ದಿನಕ್ಕೂಂದು ವೇಷವನ್ನು ಹಾಕಿದ್ದರು.

ಒಂದು ದಿನ ಕೇಸರಿ ಉಡುಪಿನಲ್ಲಿ ಸ್ವಾಮೀಜಿಯಂತೆ, ಮತ್ತೊಂದು ದಿನ ಪೇಟವನ್ನು ಹೊಂದಿರುವ ಸಿಖ್‌ ವ್ಯಕ್ತಿಯಂತೆ ವೇಷವನ್ನು ಧರಿಸುತ್ತಿದ್ದರು. ಈ ವೇಷವನ್ನು ಹಾಕಿಕೊಂಡು ಪೊಲೀಸರ ಕಣ್ತಪ್ಪಿಸಿಕೊಂಡು ಹೋಗುತ್ತಿದ್ದರು. ಹೀಗಾಗಿ ಪೊಲೀಸರಿಗೆ ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ.

Related Articles

Leave a Reply

Your email address will not be published. Required fields are marked *

Back to top button