Latest Newsರಾಜಕೀಯ

ಬಂಗೇರರ ಸಾವಿನ ನಂತರವೂ ರಾಜಕೀಯ ದ್ವೇಷ ಮುಂದುವರಿಸಿದ ರಕ್ಷಿತ್ ಶಿವರಾಮ್

Share News

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿದ್ದ ವಸಂತ ಬಂಗೇರರು ಅವರು ಇಹಲೋಕ ತ್ಯಜಿಸಿ ಹಲವು ಸಮಯ ಕಳೆದಿದೆ. ಬಂಗೇರರ ನಿಧನಾನಂತರ ಬೆಳ್ತಂಗಡಿಯಲ್ಲಿ ಬೇರೂರಲು ಪ್ರಯತ್ನಿಸುತ್ತಿರುವ, ಫೇಕ್ ಫೇಸ್ಬುಕ್ ಖಾತೆಗಳಿಂದ ಫೇಮಸ್ ಆಗಿ, ನಿನ್ನೆ ಮೊನ್ನೆಯಷ್ಟೇ ಬೆಳ್ತಂಗಡಿಗೆ ಅಂಬೆಗಾಲಿಕ್ಕುತ್ತಾ ಬಂದಿರುವ ಎಳಸು ರಕ್ಷಿತ್ ಶಿವರಾಮ್ ಅಂಧಾ ದರ್ಬಾರ್ ಆರಂಭಿಸಲು ಶುರು ಮಾಡಿದ್ದಾರೆ.

ಇದುವರೆಗೆ ಬೆಳ್ತಂಗಡಿಯಲ್ಲಿ ತೂಕದ ರಾಜಕಾರಣ ಮಾಡಿದ್ದ ಬಂಗೇರ ಅವರ ವಿರುದ್ಧ ರಾಜಕಾರಣದಲ್ಲಿ ಇನ್ನೂ ಬಚ್ಚಾ ಎನಿಸಿಕೊಂಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರು ಬಂಗೇರರು ಇನ್ನಿಲ್ಲದ ಮೇಲೂ ಅವರ ಕುಟುಂಬಕ್ಕೆ ಕಾಟ ಕೊಡುತ್ತಿದ್ದಾರೆ ಎನ್ನುವ ಗುಸುಗುಸು ಆರಂಭವಾಗಿದೆ.

ಬೆಳ್ತಂಗಡಿ ಬಸ್ಸು ನಿಲ್ದಾಣದ ಪಕ್ಕದಲ್ಲಿರುವ ನಾರಾಯಣ ಗುರು ಟ್ರಸ್ಟ್ ಒಡೆತನದ ಕಟ್ಟಡದ ನೆಲಮಹಡಿಯಲ್ಲಿ ವಸಂತ ಬಂಗೇರ ಅವರ ಮಾಲಿಕತ್ವದಲ್ಲಿ 3 ಸ್ಟಾರ್ ವೈನ್ ಶಾಪ್ ಕಾರ್ಯಾಚರಿಸುತ್ತಿತ್ತು. ಇದರ ಪರವಾನಗಿ ಬಂಗೇರರ ಹೆಸರಿನಲ್ಲೇ ಇತ್ತು. ಅಬಕಾರಿ ಕಾನೂನಿನ ಪ್ರಕಾರ ಅಬಕಾರಿ ಲೈಸನ್ಸ್ ಪಡೆದ ಮಾಲೀಕ ಮರಣದ 45 ದಿನದ ಒಳಗಡೆ ಪರವಾನಗಿ ಬದಲಿಸಬೇಕಾಗುತ್ತದೆ.

ಈ ಸುದ್ದಿ ತಿಳಿದ ರಕ್ಷಿತ್ ಶಿವರಾಮ್ ಬಂಗೇರರ ಮೇಲಿನ ದ್ವೇಷವನ್ನು ಅವರ ಕುಟುಂಬದ ಮೇಲೆ ತೋರಿಸಲು ಹೊಂಚು ಹಾಕಿದ್ದರು. ಬಂಗೇರರ ಧರ್ಮಪತ್ನಿ ಸುಜಿತಾ ವಿ.ಬಂಗೇರ ಅವರು ವೈನ್ಸ್‌ ಶಾಪ್ ಮಾಲೀಕತ್ವ ಬದಲಾವಣೆಗೆ ಮಂಗಳೂರು ಅಬಕಾರಿ ಡಿಸಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು ಕೂಡಾ, ಆದರೆ ರಕ್ಷಿತ್‌ ಶಿವರಾಮ್‌ ಎಂಟ್ರಿಯಿಂದ ಕುಟುಂಬದಲ್ಲಿ ಉಂಟಾದ ಗೊಂದಲದಿಂದ 45 ದಿನ ದಾಟಿಯೇ ಹೋಯಿತು.

ಬಂಗೇರರ ಮೇಲಿನ ದ್ವೇಷಕ್ಕೆ ವೈನ್ ಶಾಪ್ ಬಂದ್ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ವೈನ್ ಶಾಪ್ ಮಾಲಿಕತ್ವ ಬದಲಾಗದೇ ಇದ್ದರೆ ತನಗೆ ಬೇಕಾದ ಹಾಗೆ ಮಾಡಬಹುದು ಎಂದು ಮೊದಲೇ ಅರಿತಿದ್ದ ರಕ್ಷಿತ್ ಶಿವರಾಮ್ 45 ಕಳೆಯುತ್ತಲೇ ತನ್ನ ಅಸಲೀ ಆಟ ತೋರಿಸಿದರು. ಅಬಕಾರಿ ಇಲಾಖೆಯ ಮೂಲಕ ವಸಂತ ಬಂಗೇರರ ವೈನ್‌ ಶಾಪ್‌ ಮೇಲೆ ದಾಳಿ ಮಾಡಿಸಿ ವೈನ್ ಶಾಪನ್ನು ಬಂದ್ ಮಾಡಿಸಿದರು. ಈ ಮೂಲಕ ವಸಂತ ಬಂಗೇರರ ಮೇಲಿನ ರಾಜಕೀಯ ದ್ವೇಷವನ್ನು ತೀರಿಕೊಂಡರು.

ಕೇವಲ ನೋಟಿಸ್ ಅಥವಾ ಬಾಯಿ ಮಾತಿನಲ್ಲೇ ಮುಗಿದು ಹೋಗಬೇಕಿದ್ದ ಈ ವಿಚಾರ, ಮಾಜಿ ಶಾಸಕ ಅದರಲ್ಲೂ ಪ್ರಭಾವಿಯಾಗಿದ್ದ ವಸಂತ ಬಂಗೇರರ ಮದ್ಯದಂಗಡಿಗೆ ದಾಳಿ ಮಾಡಿಸಿ, ಬೀಗ ಹಾಕಿಸುವಷ್ಟರ ಮಟ್ಟಿಗೆ ಮುಂದುವರೆದಿದ್ದು ಮಾತ್ರ ವಿಪರ್ಯಾಸ. ಈ ಬೆಳವಣಿಗೆಯ ಹಿಂದೆ  ರಕ್ಷಿತ್ ಶಿವರಾಂ ಅವರ ಪ್ರಭಾವ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ ಎಂದು ವಸಂತ ಬಂಗೇರರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ‌. ಬಂಗೇರರ ಮದ್ಯದಂಗಡಿ ಬಳಿ ಸುಳಿಯಲೂ ಹೆದರುತ್ತಿದ್ದ ಅಬಕಾರಿ ಅಧಿಕಾರಿಗಳು ಈಗ ದಿಢೀರನೇ ದಾಳಿ ಮಾಡಿ ಬೀಗ ಹಾಕುವಷ್ಟು ಧೈರ್ಯ ತೋರಿದ್ದಾರೆಂದರೆ ಅಲ್ಲಿ ಮಲ್ಲೇಶ್ವರಂ ಮೂಲದವರ ಕೈವಾಡ ಇದ್ದೇ ಇದೆ ಎನ್ನುವುದು ಸ್ಪಷ್ಟ.

ರಕ್ಷಿತ್‌ ಶಿವರಾಮನಿಗೇಕೆ ಬಂಗೇರರ ಮೇಲೆ ಈ ಪರಿಯ ದ್ವೇಷ, ಇಲ್ಲಿದೆ ಕಾರಣ

ರಕ್ಷಿತ್ ಶಿವರಾಮ್ ಅವರು ಬಂಗೇರರ ವಿರುದ್ಧ ದ್ವೇಷ ಕಾರುವುದಕ್ಕೂ ಕಾರಣಗಳಿವೆ, ಈ ಹಿಂದೆ ವಸಂತ ಬಂಗೇರರು ರಕ್ಷಿತ್ ಶಿವರಾಮ್ ಅವರು ಸಾರ್ವಜನಿಕ ಸಭೆಯಲ್ಲೇ ಗದರಿದ ದಾಟಿಯಲ್ಲಿ ಟೀಕಿಸಿದ್ದರು, ಬೈದಾಡಿದಿದ್ದರು. ರಕ್ಷಿತ್ ಶಿವರಾಮ್ ಅವರು ಬೆಳ್ತಂಗಡಿಯ ಟಿಕೆಟ್ ಗಿಟ್ಟಿಸುವ ಯತ್ನ ನಡೆಸುವಾಗ ಬಂಗೇರರು ತಮ್ಮ ಹಿರಿಯ ಪುತ್ರಿಯನ್ನು ರಾಜಕಾರಣಕ್ಕೆ ಕರೆತಂದು ಬೆಳ್ತಂಗಡಿಯ ಟಿಕೆಟ್‌ ಕೊಡಿಸುವ ಪ್ರಯತ್ನವನ್ನೂ ಮಾಡಿದ್ದರು. ಇದೆಲ್ಲವೂ ರಕ್ಷಿತ್ ಶಿವರಾಮ್ ಅವರ ಕೆಂಗಣ್ಣಿಗೆ ಕಾರಣವಾಗಿತ್ತು. ಅದಕ್ಕಾಗಿ ಬಂಗೇರರನ್ನು ಅವಮಾನಿಸುವ ದಾರಿ ಹಿಡಿದಿದ್ದಾರೆ. ಈ ರೀತಿಯ ರಾಜಕಾರಣಕ್ಕೆ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಅಸಮಾಧಾನ ತೋರ್ಪಡಿಸುತ್ತಿದ್ದಾರೆ. ವಸಂತ ಬಂಗೇರ ಅವರ ಅಭಿಮಾನಿಗಳಂತೂ ರಕ್ಷಿತ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ‌

Related Articles

Leave a Reply

Your email address will not be published. Required fields are marked *

Back to top button