ವಕ್ಫ್ ಮಂಡಳಿಯನ್ನು ಬೆಂಬಲಿಸುತ್ತಿವೆಯಾ ಕನ್ನಡಪರ ಸಂಘಟನೆಗಳು? ಕರವೇ ದಿವ್ಯ ಮೌನದ ವಿರುದ್ಧ ಕನ್ನಡಿಗರ ಆಕ್ರೋಶ!
ಕರ್ನಾಟಕದಲ್ಲಿ ವಕ್ಫ್ (Waqf) ಆಸ್ತಿ ವಿವಾದ ಭಾರೀ ಸದ್ದು ಮಾಡುತ್ತಿದೆ. ವಿಜಯಪುರದಿಂದ (Vijayapur) ಆರಂಭವಾದ ವಿವಾದ ರಾಜ್ಯಾದ್ಯಂತ ಹಬ್ಬಿಕೊಂಡಿದೆ. ಆರಂಭದಲ್ಲಿ ರೈತರ ಜಮೀನಿನಿಂದ (Farmers Land) ಆರಂಭವಾದ ಈ ವಕ್ಫ್ ಆಸ್ತಿ ವಿವಾದ ಬಳಿಕ ಮಠಕ್ಕೆ ಹಾಗೂ ಹಿಂದೂ ದೇವಾಲಯಗಳಿಗೂ ನೋಟಿಸ್ (Notice) ನೀಡುವ ಮೂಲಕ ಆತಂಕ ಹೆಚ್ಚಿಸಿತ್ತು. ಇದೀಗ ಈ ವಕ್ಫ್ ಬೋರ್ಡ್‌ನಿಂದಾಗಿ ಐತಿಹಾಸಿಕ ದೇವಾಲಯಗಳಿಗೂ (Temple) ಕಂಟಕ ಎದುರಾಗಿದೆ.
ತಲೆ ತಲಾಂತರದಿಂದ ಬಾಳಿ ಬದುಕಿದ ನಮ್ಮ ಮನೆಯನ್ನು ಇನ್ನೊಬ್ಬರು ಬಂದು ತಮ್ಮದು ಎನ್ನುತ್ತಿದ್ದಾರೆ. ರೈತರು, ಬಡವರು, ಶೋಷಿತರು ಎನ್ನದೇ ಎಲ್ಲರ ಆಸ್ತಿಗಳ ಮೇಲೆ ಕಣ್ಣು ಹಾಕಿರುವ ವಕ್ಫ್ ಮಂಡಳಿಗೆ ಬೆಂಬಲವಾಗಿ ಕಾಂಗ್ರೆಸ್ ಸರ್ಕಾರ (Congres Gvt) ಬಲವಾಗಿ ನಿಂತಿದೆ.
ವಕ್ಫ್ ಮಂಡಳಿಯ ಮೂಲಕ ಕಾಂಗ್ರೆಸ್ ನಡೆಸುತ್ತಿರುವ ಲ್ಯಾಂಡ್ ಜಿಹಾದ್ (Land Jihad) ಈಗ ಬೆಂಗಳೂರಿಗೂ ಕಾಲಿಟ್ಟಿದೆ. ಕೆಂಪೇಗೌಡರು (Kempe Gowda) ಕಟ್ಟಿದ ಕೋಟೆಯನ್ನೇ ವಕ್ಫ್ ಭೂತ ನುಂಗುತ್ತಿದೆ. ವಕ್ಫ್ ಮಂಡಳಿಯ ಆಟಾಟೋಪ ಮಿತಿ ಮೀರಿದೆ. ಕಣ್ಣಿಗೆ ಕಂಡ ಭೂಮಿಯನ್ನೆಲ್ಲಾ ತನ್ನದು ಎನ್ನುವ ಮೂಲಕ ಭಾರತದ ಭೂಮಿಯ (Indias land) ಮೇಲೆ ಹಕ್ಕುಸ್ವಾಮ್ಯ ಸ್ಥಾಪಿಸುತ್ತಿದ್ದಾರೆ.
ರಾಜ್ಯದಲ್ಲಿ ವಕ್ಫ್ ಮಂಡಳಿಯ ಉಪಟಳ ಮಿತಿ ಮೀರುತ್ತಿದ್ದರೂ, ಕನ್ನಡ ನಾಡು ನುಡಿ ಜಲದ ರಕ್ಷಕರು ಎಂದು ಕರೆಸಿಕೊಳ್ಳುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ. ಕರವೇಯ ಈ ದಿವ್ಯ ಮೌನದ ವಿರುದ್ಧ ರಾಜ್ಯದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social Media) ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡ, ಕರ್ನಾಟಕದ ಹೆಸರಿನಲ್ಲಿರುವ ಸಂಘಟನೆಗಳನ್ನು ಪ್ರಶ್ನಿಸುತ್ತಿದ್ದಾರೆ.
ರಾಜ್ಯವನ್ನೇ ನುಂಗಿ ನೀರು ಕುಡಿಯುತ್ತಿರುವ ವಕ್ಫ್ ಮಂಡಳಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಯಾಕೆ ಧ್ವನಿ ಎತ್ತುತ್ತಿಲ್ಲ ? ಎಲ್ಲಿಂದಲೋ ಬಂದವರು ಕರ್ನಾಟಕದ (Karnataka) ನೆಲವನ್ನು ತಮ್ಮದು ಎನ್ನುತ್ತಿದ್ದಾಗಲೂ ಕರವೇ ಮೌನ ವಹಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಪಾಪದ ಕೂಸಾಗಿರುವ ವಕ್ಫ್ ದೇಶವನ್ನೇ ನುಂಗಿ ನೀರು ಕುಡಿಯಲು ಹವಣಿಸುತ್ತಿದೆ. ದೇಶದ ಯಾವುದೇ ಧರ್ಮ, ಮತ, ಸಂಘ, ಸಂಸ್ಥೆ, ಸರ್ಕಾರಿ ಸಂಸ್ಥೆಗಳಿಗೆ ಇರದ ಕಾನೂನಿನ ಮಾನ್ಯತೆಯನ್ನು ವಕ್ಫ್ ಮಂಡಳಿಗೆ ನೀಡಿ ದೇಶದ ಆಸ್ತಿಯನ್ನು ಕಬಳಿಸಲು ಕಾಂಗ್ರೆಸ್ ಅನುವು ಮಾಡಿಕೊಟ್ಟಿದೆ. ಬೆಂಗಳೂರಿನ (Bengaluru) ಮೆಜೆಸ್ಟಿಕ್ (Majestic), ಲಾಲ್‌ಬಾಗ್, ಅವೆನ್ಯೂ ರೋಡ್, ಚಿಕ್ಕಪೇಟೆ ಸೇರಿದಂತೆ ಹಲವು ಪ್ರದೇಶಗಳನ್ನು ತನ್ನದೆಂದು ಘೋಷಿಸಲು ಆರಂಭಿಸಿದೆ. ಕೆಂಪೇಗೌಡರು (Kempe Gowda) ಕಟ್ಟಿ ಬೆಳೆಸಿದ ಬೆಂದಕಾಳೂರು ವಕ್ಫ್ ಲ್ಯಾಂಡ್ ಜಿಹಾದ್‌ನ ಕಪಿಮುಷ್ಠಿಯಲ್ಲಿ ಸಿಲುಕಿ ಬೇಯುತ್ತಿದೆ.
ಕನ್ನಡೇತರ ಭಾಷೆ ಮಾತನಾಡುವವರ ಮೇಲೆ ದೌರ್ಜನ್ಯ ಎಸಗುವ, ನಾಮಫಲಕಗಳು ಕನ್ನಡೇತರ ಭಾಷೆಯಲ್ಲಿದ್ದರೆ ದಾಳಿ ಮಾಡುವ ಕನ್ನಡಪರ ಸಂಘಟನೆಗಳು ಈಗ ರಾಜ್ಯದ ಭೂಮಿ ಅನ್ಯರ ಪಾಲಾಗುತ್ತಿದ್ದರು, ಕೆಂಪೇಗೌಡರು ಕಟ್ಟಿದ ಕೋಟೆಯನ್ನೇ ತನ್ನದೆಂದು ವಕ್ಫ್ ವಾದಿಸುತ್ತಿದ್ದರೂ ಕರವೇಯಂತಹ ಕನ್ನಡ ಸಂಘಟನೆಗಳು ಮೌನವಾಗಿರುವುದರ ಹಿಂದೆ ಷಡ್ಯಂತ್ರವೂ ಕೂಡ ಅಡಗಿದೆ. ಕನ್ನಡ ಪರ ಸಂಘಟನೆಗಳು ಕನ್ನಡದ ರೈತರ, ದಲಿತರ ಭೂಮಿ ಕಬಳಿಸುತ್ತಿರುವ ವಕ್ಫ್ ಮಂಡಳಿಗೆ ಪರೋಕ್ಷ ಬೆಂಬಲ ನೀಡುತ್ತಿದೆಯಾ ಎನ್ನುವ ಅನುಮಾನವೂ ಕೂಡ ರಾಜ್ಯದ ಜನರನ್ನು ಕಾಡುತ್ತಿದೆ.