Latest Newsಪ್ರಚಲಿತ

ಮೋದಿ ದೂಷಿಸಲು ಹೋಗಿ ಟ್ರೋಲ್‌ಗೊಳಗಾದ ಕಾಂಗ್ರೆಸ್!

Share News

ದೆಹಲಿಯಲ್ಲಿ ಸುರಿದ ಭಾರಿ ಮಳೆಗೆ ದೆಹಲಿಯ ಇಂಧಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತಗೊಂಡ ಘಟನೆ ನಡೆದಿದ್ದು ಘಟನೆಯಲ್ಲಿ ಓರ್ವ ಮೃತಪಟ್ಟು ಹಲವಾರು ಜನ ಗಾಯಗೊಂಡಿದ್ದಾರೆ, ಹಲವು ವಾಹನಗಳೂ ಜಖಂಗೊಂಡಿದೆ.

ಈ ನಡುವೆ ಘಟನೆಯನ್ನು ಮೋದಿ ತಲೆಗೆ ಕಟ್ಟುವ ವ್ಯವಸ್ಥಿತ ಪ್ರಯತ್ನವೂ ನಡೆಯಿತು. ದುರಂತವನ್ನು ಮೋದಿ ಮೇಲೆ ಎತ್ತಿಕಟ್ಟಲು ಹೋಗಿ ಕಾಂಗ್ರೆಸ್ ಈಗ ಇಂಗು ತಿಂದ ಮಂಗನಂತಾಗಿದೆ.

ಕೇರಳ ಕಾಂಗ್ರೆಸ್, ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿ ವಿಮಾನ ನಿಲ್ದಾಣ ಒಂದೇ ಒಂದು ಮಳೆಯನ್ನು ಎದುರಿಸಲಾಗದಷ್ಟು ನಿಶ್ಯಕ್ತವಾಗಿದೆ. 2024ರ ಮಾರ್ಚ್ ನಲ್ಲಿ ವಿಸ್ತರಿತ ಟರ್ಮಿನಲ್ ನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದರು, ಕೆಲವೇ ತಿಂಗಳಲ್ಲಿ ಈ ಟರ್ಮಿನಲ್ ಕುಸಿದು ಬಿದ್ದಿದೆ, ಒಂದು ಜೀವ ಹೋಗಿದೆ, ಹಲವರು ಗಾಯಗೊಂಡಿದ್ದಾರೆ. ಇದೇನಾ ಬಿಜೆಪಿಯ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಆತ್ಮನಿರ್ಬರ್ ಭಾರತ? ಎಂದು ಬಿಜೆಪಿಯನ್ನು ಪ್ರಶ್ನಿಸಿತ್ತು.

ವಾಸ್ತವದಲ್ಲಿ ಈಗ ಸಂಭವಿಸಿರುವ ದುರಂತದ ನಿಲ್ದಾಣದ ಟರ್ಮಿನಲ್ ಯುಪಿಎ -2 ರ ಅವಧಿಯಲ್ಲಿ ಕಾಂಗ್ರೆಸ್‌ ಸರ್ಕಾರವೇ GMR ಸಂಸ್ಥೆಯ ಮೂಲಕ ಕಿಕ್ ಬ್ಯಾಕ್ ಪಡೆದು ನಿರ್ಮಿಸಿದ್ದ ಕಟ್ಟಡವಾಗಿದೆ. ಜಿಎಂಆರ್‌ ಸಂಸ್ಥೆಯ ಮುಖ್ಯಸ್ಥ ಸೋನಿಯಾ ಗಾಂಧಿ ಅವರ ನಿಕಟವರ್ತಿಯಾಗಿದ್ದರು. GMR Infra ಗೆ ಕಾಂಗ್ರೆಸ್‌ ಸರ್ಕಾರ ಗುತ್ತಿಗೆ ನೀಡಿ ಇಂದು ಕುಸಿದು ಬಿದ್ದ ಟರ್ಮಿನಲ್‌ ನಿರ್ಮಿಸಿತ್ತು. ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದ ಭಾಗ ಯಾವುದೇ ಹಾನಿಗೆ ಒಳಗಾಗದೆ ದೃಢವಾಗಿದೆ‌.

ಒಟ್ಟಿನಲ್ಲಿ ಕುಸಿದು ಬಿದ್ದ ಟರ್ಮಿನಲ್ ವಿಚಾರದಲ್ಲಿ ಮೋದಿಯನ್ನು ಸಿಲುಕಿಸಲು ಯತ್ನಿಸಿದ ಕಾಂಗ್ರೆಸ್ ಕೊನೆಗೆ ತಾನು ಹೆಣೆದ ಬಲೆಗೆ ತಾನೇ ಬಿದ್ದು ವಿಲವಿಲ ಒದ್ದಾಡುತ್ತಿದೆ.

Related Articles

Leave a Reply

Your email address will not be published. Required fields are marked *

Back to top button