ತಟ್ಟಿತಾ ಸೌಜನ್ಯಳಾ ಶಾಪ!! ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ಜೈಲಿನ ಕಂಬಿ ಎಣಿಸುತ್ತಿರುವ ತಿಮರೋಡಿ ಅಣ್ಣನ ಮಗ, ರಕ್ಷಿತ್ ಶಿವರಾಮ್ ಆಪ್ತ!
ಮಹೇಶ್ ಶೆಟ್ಟಿ ತಿಮರೋಡಿಯ ಬಲಗೈ ಬಂಟ, ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಮ್ ಆಪ್ತ, ನೋಟಾ ಹೋರಾಟಗಾರ, ಸೌಜನ್ಯಳ ನ್ಯಾಯಕ್ಕಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದ ತನುಷ್ ಶೆಟ್ಟಿ ಎಂಬಾತನನ್ನು ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬರ್ಕೆ ಪೊಲೀಸರು ಬಂಧಿಸಿ ಲಾಕಪ್‌ನಲ್ಲಿ ಇರಿಸಿದ್ದಾರೆ.
ಮಂಗಳೂರಿನ ಪ್ರಭಾವಿ ವ್ಯಕ್ತಿಯೋರ್ವರ ಕುಟುಂಬದ ಯುವತಿಯ ಮೇಲೆ ತನುಷ್ ಶೆಟ್ಟಿಯ ವಕ್ರ ದೃಷ್ಟಿ ಬಿದ್ದಿದ್ದು, ಇದಕ್ಕೆ ಪ್ರತಿರೋಧ ತೋರಿದ ಕಾರಣದಿಂದ ಹೊಯ್ ಕೈ ನಡೆದಿದ್ದು, ಪ್ರಕರಣದ ದಿಕ್ಕು ತಪ್ಪಿಸಲು ಆರೋಪಿ ಬೇರೆಯೇ ಕಥೆ ಹೆಣೆದಿದ್ದಾನೆ. ಇದೀಗ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುವ ಬಗ್ಗೆಯೂ ಸುದ್ದಿಯಾಗುತ್ತಿದೆ.
ಸೌಜನ್ಯಳಿಗೆ ನ್ಯಾಯ ಒದಗಿಸುವ ನಾಟಕ ಮಾಡಿದ ಪ್ರಮುಖ ವ್ಯಕ್ತಿಯೇ ಈಗ ಹೆಣ್ಣಿಗೆ ಕಿರುಕುಳ ನೀಡಿ ಬಂಧನಕ್ಕೆ ಒಳಗಾಗಿರುವುದು ಸೌಜನ್ಯಳ ಶಾಪದಿಂದಲೇ ಎಂದು ಜಿಲ್ಲೆಯ ಜನರು ಮಾತಾಡಿಕೊಳ್ಳುತ್ತಿದ್ದಾರೆ. ಅಮಾಯಕಿ ಸೌಜನ್ಯಳ ಸಾವನ್ನು ವೈಯುಕ್ತಿಕ ವರ್ಚಸ್ಸು ಬೆಳೆಸಿಕೊಳ್ಳಲು, ದುಡ್ಡು ಮಾಡಲು ಮತ್ತು ರಾಜಕೀಯ ಮಾಡಲು ಬಳಸಿಕೊಂಡವರು ಒಬ್ಬೊಬ್ಬರಾಗಿಯೇ ಸಮಾಜದ ಮುಂದೆ ಬೆತ್ತಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ನಾಗರಿಕರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ.