ರಕ್ಷಿತ್ ಶಿವರಾಂ ಆಪ್ತನಿಂದ ಡಿಸಿ ಮನ್ನಾ, ಅರಣ್ಯ ಇಲಾಖೆಯ ಜಾಗ ಗುಳುಂ!
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತನೋರ್ವ ಅರಣ್ಯ ಇಲಾಖೆ ಮತ್ತು ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾದ ಡಿಸಿ ಮನ್ನಾ ಜಾಗವನ್ನೇ ಗುಳುಂ ಮಾಡಿರುವ ಬಗ್ಗೆ ಗುಸು ಗುಸು ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಸ್ಥಳೀಯರು ಹಲವು ಬಾರಿ ಅರಣ್ಯ ಇಲಾಖೆಯ ಮತ್ತು ಕಂದಾಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದರೆ, ಆ ವಿಚಾರದಲ್ಲಿ ಮಾತನಾಡಬಾರದು ಎಂದು ಸೂಚನೆ ಬರುತ್ತಿದೆ ಎಂದು ಅಧಿಕಾರಿಗಳು ತಮ್ಮ ಅಸಹಾಯಕತೆ ತೋರ್ಪಡಿಸುತ್ತಿದ್ದಾರೆ.
ರಕ್ಷಿತ್ ಶಿವರಾಂ ಆಪ್ತ ಮೋಹನ್ ಗೌಡ ಹಾಗೂ ಗಂಗಾಧರ ಗೌಡ ಎಂಬವರಿಂದ ಒತ್ತುವರಿಯಾಗಿದ್ದು, ಹಣ ಹಾಗೂ ಅಧಿಕಾರದ ಪ್ರಭಾವದಿಂದ ಈ ಸ್ಥಳಕ್ಕೆ ಅಧಿಕಾರಿಗಳು ಬರದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಕಳೆದ ಹಲವು ತಿಂಗಳಿನಿಂದ ಹಿಂದೆ ಕಳೆಂಜ ಗ್ರಾಮದಲ್ಲಿ ಬಡವನೋರ್ವನ ಮನೆ ತೆರವು ಮಾಡಿರುವ ವಿಚಾರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತೋರಿರುವ ದರ್ಪ ಈ ಪ್ರಕರಣದಲ್ಲಿ ತೋರಿಸುತ್ತಿಲ್ಲ ಎನ್ನುವುದು ಸ್ಥಳೀಯರ ವಾದವಾಗಿದೆ.
ಸರ್ವೇ ನಂಬರ್ 85 ಅರಣ್ಯ, ಮತ್ತು ಸರ್ವೇ ನಂಬರ್ 87 ಡಿಸಿ ಮನ್ನಾ ಜಾಗದಲ್ಲಿ ಅಕ್ರಮ ಹೋಮ್ ಸ್ಟೇ ನಿರ್ಮಿಸಿ, ಮರ ಕಡಿದು ತೋಟ ಮಾಡುತ್ತಿದ್ದರೂ ಯಾವೊಬ್ಬ ಅಧಿಕಾರಿಗಳೂ ಕ್ರಮ ಕೈಗೊಳ್ಳದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಕ್ರಮಕೈಗೊಳ್ಳದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.